'ಜೆಡಿಎಸ್‌ ರಾಜ್ಯದ ರೈತರ ಜೀವನಾಡಿ'

By Kannadaprabha NewsFirst Published Oct 11, 2021, 3:21 PM IST
Highlights

*  ಬೇರೆ ಪಕ್ಷಗಳ ಮುಖಂಡರು ಜೆಡಿಎಸ್‌ ಸೇರ್ಪಡೆ ಕಾರ್ಯಕ್ರಮ
*  ಪ್ರತಿ ಬೂತ್‌ ಮಟ್ಟದಿಂದ 25 ಜನರ ಸದಸ್ಯತ್ವ ನೋಂದಣಿ 
*  ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾದ ಬಿಜೆಪಿ ಸರ್ಕಾರ 
 

ಡಂಬಳ(ಅ.11):  ಜೆಡಿಎಸ್‌(JDS) ಯಾವಾಗಲೂ ಈ ರಾಜ್ಯದ(Karnataka) ಜನರ ರೈತರ ಜೀವನಾಡಿಯಾಗಿ ಸದಾ ಕಾಲ ಸೇವೆಗೆ ಆದ್ಯತೆ ನೀಡುತ್ತಾ ಬಂದಿರುವ ಪಕ್ಷವಾಗಿದೆ. ಈ ಹಿನ್ನೆಲೆಯಲ್ಲಿ ಜನತೆ ನಮ್ಮ ಪಕ್ಷಕ್ಕೆ ಆದ್ಯತೆ ನೀಡುತ್ತಾರೆ. ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಆದ್ಯತೆಯನ್ನು ನೀಡಬೇಕು ಎಂದು ಜಿಲ್ಲಾ ಜೆಡಿಎಸ್‌ ಕಾರ್ಯಾಧ್ಯಕ್ಷ ಎಂ.ಆರ್‌. ಸೋಂಪುರ(MR Sompura) ಹೇಳಿದ್ದಾರೆ. 

ಡಂಬಳ ಪ್ರವಾಸಿ ಮಂದಿರದಲ್ಲಿ ಭಾನುವಾರ ಪಕ್ಷದ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ಮತ್ತು ಇತರ ಪಕ್ಷಗಳನ್ನು ತೊರೆದು ಜೆಡಿಎಸ್‌ ಪಕ್ಷಕ್ಕೆ ಬಂದ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ಪ್ರತಿ ಕಾರ್ಯಕರ್ತ ಪ್ರತಿ ಬೂತ್‌ ಮಟ್ಟದಿಂದ 25 ಜನರ ಸದಸ್ಯತ್ವವನ್ನು ನೋಂದಣಿ ಮಾಡಲು ಮುಂದಾಗಬೇಕು. ತನ್ಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದರು.

ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ, ನಾನೇನು ಮಾಡ್ಲಿ? ಸಿದ್ದರಾಮಯ್ಯ

ಅಲ್ಪಸಂಖ್ಯಾತರ ಜಿಲ್ಲಾ ಅಧ್ಯಕ್ಷ ಜಿ.ಎ. ಬುರಡಿ, ತಾಲೂಕು ಅಧ್ಯಕ್ಷ ಜಿ.ಕೆ. ಕೋಳಿಮಠ, ಅಬ್ದುಲ್‌ ನರಸಾಪುರ, ರಫಿಕ ಹವಾಲ್ದಾರ, ಕವಿತಾ ಹಿರೇಗೌಡರ, ದಾವಲಸಾಬ ಕರನಾಚಿ, ಅಶೋಕ ತಳಮರದ ಮಾತನಾಡಿ, ಜೆಡಿಎಸ್‌ ರೈತರ, ಬಡವರ, ದೀನದಲಿತರ, ಕನ್ನಡಿಗರ ಹಿತ ಕಾಪಾಡುವ ಪಕ್ಷವಾಗಿದೆ. ರೈತರನ್ನು(Farmers) ಉತ್ತರ ಪ್ರದೇಶದಲ್ಲಿ(Uttara Pradesh) ದಾರುಣವಾಗಿ ಸಾವಿಗೆ ದೂಡಿದ ಬಿಜೆಪಿ(BJP) ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಜನರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಅಮರೀಶ ಆರಿ, ದೇವೇಂದ್ರಪ್ಪ ಸೂಲಿ, ಶ್ರೀನಿವಾಸ ಪರಿಮಳದ, ಶೇಖರಗೌರಿಪುರ, ಶೇಖಣ್ಣ ಆಲೂರ, ರಮೇಶ ಮೂಲಿಮನಿ, ಕೃಷ್ಣಪ್ಪ ಕತ್ತಿ, ಬುಡ್ನೆಸಾಬ ನದಾಫ, ಜಿ.ಎನ್‌. ಮಠದ, ರಂಜಾನಸಾಬ ನದಾಫ, ರಾಮಣ್ಣ ಹೊಸಳ್ಳಿ, ಅಶೋಕ ಪವಾರ ಇದ್ದರು.
 

click me!