ಶೀಘ್ರದಲ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಶತಸಿದ್ಧ ಎಂದು ಮುಖಂಡರೋರ್ವರು ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಈಗಾಗಲೇ ಹೈ ಕಮಾಂಡ್ ಮಟ್ಟದಲ್ಲಿ ಸುದ್ದಿಯೂ ಇರುವುದಾಗಿ ತಿಳಿಸಿದ್ದಾರೆ.
ವಿಜಯಪುರ (ಮಾ.21): ಪಂಚರಾಜ್ಯಗಳ ಚುನಾವಣೆಗಳ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ನೂರಕ್ಕೆ ನೂರರಷ್ಟುಪಕ್ಕಾ ಎಂದು ವಿಜಯಪುರ ನಗರ ಶಾಸಕ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಭವಿಷ್ಯ ನುಡಿದಿದ್ದಾರೆ.
ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಇಂತಹ ಮುಖ್ಯಮಂತ್ರಿ ತೆಗೆದುಕೊಂಡು ಬಿಜೆಪಿ ಮುಂದಿನ ಚುನಾವಣೆ ಗೆಲ್ಲುವುದಿಲ್ಲ. ಬಿಜೆಪಿ ಉಳಿಯಬೇಕಾದರೆ ಮುಖ್ಯಮಂತ್ರಿಗಳ ಬದಲಾವಣೆ ಅಗತ್ಯ. ಅದು ಈಗಾಗಲೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರಿಗೆ ಗೊತ್ತಾಗಿದೆ ಎಂದರು.
ಬಿಜೆಪಿಯಲ್ಲಿ ಯತ್ನಾಳ್ ಉಚ್ಚಾಟನೆಯ ಕೂಗು ಜೋರು..! .
ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ. ಉತ್ತರಾಖಂಡದಲ್ಲಿ ಬದಲಾವಣೆ ಮಾಡಿದಂತೆ ಹರಿಯಾಣ, ಕರ್ನಾಟಕ ಮುಂದಿನ ಸಾಲಿನಲ್ಲಿ ಇವೆ ಎಂದು ಯಡಿಯೂರಪ್ಪನವರ ವಿರುದ್ಧ ಹರಿ ಹಾಯ್ದರು.