
ಹೊಸಕೋಟೆ (ಸೆ.21) : ರಾಜಕಾರಣ ಮಾಡುವವರು ಸದಾಕಾಲ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು. ಎಚ್‌ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಹೊಸಕೋಟೆ ಅಭಿವೃದ್ದಿಗೆ ಹಣ ಬಿಡುಗಡೆ ಮಾಡದೆ, ಏಕಪಕ್ಷೀಯ ಆಡಳಿತ, ಸರ್ವಾಧಿಕಾರ ಮಾಡಿದ ಕಾರಣ ಅಧಿಕಾರ ಕಳೆದುಕೊಳ್ಳಬೇಕಾಯಿತು ಎಂದು ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಹೇಳಿದರು.
ಕೋವಿಡ್ ಪಾಸಿಟಿವ್: ಸದನದ ಕಲಾಪಕ್ಕೆ ಹಾಜರಾಗಲ್ಲ, ಸಭಾಪತಿಗೆ MLC ಪತ್ರ ..
ಸಿಎಂ.ಬಿಎಸ್.ಯಡಿಯೂರಪ್ಪನವರು ನನ್ನ ಬೇಡಿಕೆಗಳಾದ ಶಾಶ್ವತ ನೀರಾವರಿ ಯೋಜನೆ, ಹೊಸಕೋಟೆಗೆ ಮೆಟ್ರೋ ಸೇರಿದಂತೆ ಅಭಿವೃದ್ದಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ ಕಾರಣ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡೆ. ಆದರೆ ಕೆಲವರ ಕುತಂತ್ರದಿಂದ ಸೋಲುನುಭವಿಸುಂತಾಯಿತು.
ಆದರೆ ಒಳ್ಳೆ ಉದ್ಧೇಶ ಇರುವವರಿಗೆ ದೇವರು ಒಳ್ಳೆಯದು ಮಾಡುತ್ತಾನೆ ಎಂಬುದು ಸತ್ಯ. ಅದರಿಂದಲೆ ಎಂಎಲ್ಸಿ ಆಗಿದ್ದು, ಶೀಘ್ರವಾಗಿ ಮಂತ್ರಿ ಆಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸುತ್ತೇನೆ.