ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಬಗ್ಗೆ ಸಿಎಂ ತೀರ್ಮಾನ

By Kannadaprabha News  |  First Published Sep 8, 2020, 9:40 AM IST

ಶೀಘ್ರದಲ್ಲೇ ಸಿಎಂ ಯಡಿಯೂರಪ್ಪ ವಾಲ್ಮಿಕಿ ಸಮುದಾಯಕ್ಕೆ ನೀಡುವ ಮೀಸಲಾತಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಸಚಿವರು ಹೇಳಿದ್ದಾರೆ.


ಬಾಗಲಕೋಟೆ (ಸೆ.08): ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಕೊಡುವ ವಿಚಾರವನ್ನು ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ ಎಂದು ನಗರರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಹೇಳಿದ್ದಾರೆ. 

ವಾಲ್ಮೀಕಿ ಶ್ರೀಗಳ ಹಾಗೂ ಸಮುದಾಯದ ಬಗ್ಗೆ ನಮಗೆ ಗೌರವವಿದೆ. ಸಂಪುಟ ಸಹದ್ಯೋಗಿಗಳು ಹಾಗೂ ಆ ಸಮುದಾಯದ ಸಚಿವರು ಸೇರಿ ಸಾಧಕ ಬಾಧಕದ ಚರ್ಚೆ ನಡೆಸಿದ ನಂತರ ಮೀಸಲಾತಿ ಕೊಡುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದಿದ್ದಾರೆ.

Tap to resize

Latest Videos

7.5 ಮೀಸಲಾತಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದ ರಾಮುಲು, ಬಿಎಸ್‌ವೈಗೆ ಟೆನ್ಷನ್ ...

ಇದೇ ವೇಳೆ ನಗರಾಭಿವೃದ್ಧಿ ಇಲಾಖೆಯಿಂದ ಅಭಿವೃದ್ಧಿ ಪ್ರಾಧಿ​ಕಾರದಲ್ಲಿ ಶೇ.5 ನಿವೇಶನಗಳನ್ನು ಪತ್ರಕರ್ತರಿಗೆ ಮೀಸಲಿಡುವ ವಿಷಯದಲ್ಲಿ ಸದ್ಯದಲ್ಲಿಯೇ ಆದೇಶ ಹೊರಡಿಸುವುದಾಗಿ ಸಚಿವರು ತಿಳಿಸಿದ್ದಾರೆ.

ಈಗಾಗಲೇ ಮೀಸಲಾತಿ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಸಿಎಂ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

click me!