* ತಾಯಿಯ ಶವಸಂಸ್ಕಾರಕ್ಕಾಗಿ ಎರಡು ದಿನದಲ್ಲಿ ಅಮೇರಿಕಾದಿಂದ ಧಾವಿಸಿದ ಪುತ್ರ
* ಅಮೆರಿಕಾದಿಂದ ಆಗಮಿಸಿ ಅಂತ್ಯಕ್ರಿಯೆ ನೆರವೇರಿಸಿದ
* ಕೊರೋನಾ ಕಾಲದಲ್ಲಿಯೂ ಬಾಂಧವ್ಯಕ್ಕೆ ಕೊನೆ ಎಲ್ಲಿ?
ಶಿವಮೊಗ್ಗ(ಜೂ. 14) ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಅಮೇರಿಕಾದಿಂದ ಎರಡು ದಿನಗಳಲ್ಲಿಯೇ ಆಗಮಿಸಿದ ಪುತ್ರನ ಕತೆ ಇದು. ತೀರ್ಥಹಳ್ಳಿ ಬಳಿಯ ಸುರಾನಿಯಲ್ಲಿ ಶುಕ್ರವಾರ ಮಧ್ಯಾಹ್ನ ಕಾರು ಅಪಘಾತ ಸಂಭವಿಸಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಕೋಣಂದೂರು ಸಮೀಪದ ಶಂಕರಹಳ್ಳಿಯ ಸದಾಶಿವ ಎಂಬುವವರ ಪತ್ನಿ ಸುಂದರಮಾಲಾ(63) ಸ್ಥಳದಲ್ಲಿಯೇ ಸಾವು ಕಂಡರು.
ಅಮೇರಿಕಾದ ಬೋಸ್ಟನ್‌ನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಇವರ ಪುತ್ರ ಬ್ರಹ್ಮಚೈತನ್ಯ ತಾಯಿಯ ಸಾವಿನ ಸುದ್ದಿ ಕೇಳುತ್ತಿದ್ದ ಹಾಗೆ ಭಾರತಕ್ಕೆ ಹೊರಟು ನಿಂತರು. ಪ್ಯಾರಿಸ್ ಮಾರ್ಗವಾಗಿ ಶನಿವಾರ ಮಧ್ಯರಾತ್ರಿ ಬೆಂಗಳೂರು ತಲುಪಿ, ಅಲ್ಲಿಂದ ಕಾರಿನಲ್ಲಿ ಭಾನುವಾರ ಶಂಕರಹಳ್ಳಿಗೆ ಆಗಮಿಸಿದ್ದಾರೆ.
ಅಂಗಾಂಗ ದಾನ ಆರಂಭ, ಸಂದೇಶ ಕೊಟ್ಟು ಪಯಣ ಮುಗಿಸಿದ ಸಂಚಾರಿ ವಿಜಯ್
ತಾಯಿಯ ಅಂತಿಮ ದರ್ಶನ ಪಡೆದು, ಬಳಿಕ ವಿಧಿವತ್ತಾಗಿ ಅಂತ್ಯ ಸಂಸ್ಕಾರ ನಡೆಸಿದರು. ಕೇವಲ ಎರಡು ದಿನಗಳಲ್ಲಿ ತಾಯಿಗಾಗಿ ಅಮೇರಿಕಾದಿಂದ ತೀರ್ಥಹಳ್ಳಿಯ ತಾಲಕಿನ ಶಂಕ್ರಹಳ್ಳಿಗೆ ಬಂದ ಪುತ್ರ ಅಂತಿಮ ವಿಧಿ ನಡೆಸಿದರು. ಪುತ್ರ ಬ್ರಹ್ಮ ಚೈತನ್ಯನ ಬರುವಿಕೆಗಾಗಿ ಶವವನ್ನು ತೀರ್ಥಹಳ್ಳಿಯ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಕೊರೋನಾ ಕಾಡುತ್ತಿರುವ ಈ ಸಂಕಷ್ಟದ ಸ್ಥಿತಿಯಲ್ಲಿ ಪುತ್ರ ತನ್ನ ತಾಯಿಗಾಗಿ ಹಂಬಲಿಸಿ ಬಂದಿದ್ದಾನೆ.