ಒಂದು ದಿನದ ಹಸುಗೂಸನ್ನು ಬಿಸಾಕಿದ ಪಾಪಿ ಪೋಷಕರು...

By Kannadaprabha News  |  First Published Sep 13, 2018, 11:57 AM IST

ಹುಟ್ಟಿದ ಹಸುಗೂಸನ್ನು ಮುಳ್ಳುಗಂಟಿಯಲ್ಲಿ ಬಿಸಾಕಿ ಹೋಗಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮೀಠಕಲ್ ತಾಲೂಕಿನ ವಂಕಸಂಬ್ರ ಗ್ರಾಮದಲ್ಲಿ ನಡೆದಿದೆ.


ಯಾದಗಿರಿ:ನಿನ್ನೆ ಸಂಜೆ ಏಳುಗಂಟೆ ಸುಮಾರಿಗೆ ಗ್ರಾಮದ ಹೊರವಲಯದ ಮುಳ್ಳಕಂಟ್ಟಿಯಲ್ಲಿ ಮಗುವನ್ನಯ ಬಿಸಾಕಲಾಗಿದೆ. ಬೈರ್ದೆಸೆಗೆ ಹೋಗಿದ್ದ ಗ್ರಾಮಸ್ಥರು ಮಗುವಿನ ಕೂಗಾಟ ಕೇಳಿ ಹಸುಗೂಸನ್ನು ರಕ್ಷಣೆ ಮಾಡಿದ್ದಾರೆ. ಅದು ಮುದ್ದಾದ ಹೆಣ್ಣು ಮಗುವಾಗಿದ್ದು ಮುಳ್ಳು ಕಂಟಿಯಲ್ಲಿ ಬಿಸಾಡಿದರಿಂದ ಮಗುವಿನ ಬೆನ್ನಿಗೆ ಮುಳ್ಳು ಚುಚ್ಚಿದ ಗಾಯಗಳಾಗಿವೆ ಎನ್ನಲಾಗಿದೆ. ಯಾರೋ ಪಾಪಿಗಳು ಮಗುವನ್ನು ಹೆತ್ತು ಇಷ್ಟವಿಲ್ಲದೆ ಜಾಲಿಕಂಟಿಯಲ್ಲಿ ಬಿಸಾಕಿದ್ದಾರೆ.

ಮಗುವಿನ ಕೂಗಾಟ ಕೇಳಿದ ಎಂತವರಿಗೂ ಕರಳು ಚುರುಕು ಎನ್ನುತ್ತದೆ. ಮುದ್ದಾದ ಮಗವನ್ನು ಕ್ಷಣೆ ಮಾಡಿದ ಗ್ರಾಮಸ್ಥರು ಮಗುವಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿಸಿ, ಸೀರೆ ಕಟ್ಟಿ ತೊಟ್ಟಿಲುನಲ್ಲಿ ತೂಗುತ್ತಿದ್ದಾರೆ. ಎರಡ್ಮೂರು ಗಂಟೆ ವರೆಗೂ ಮಗು ಮುಳ್ಳಗಂಟಿಯಲ್ಲಿ ಬಿದ್ದು ಚಿರಾಡುತ್ತಿತ್ತು ಎನ್ನಲಾಗಿದೆ. ಮಗುವಿನ ಕೂಗಾಟದ ಧ್ವನಿ ಕೇಳಿ ಗ್ರಾಮಸ್ಥರು ತಂದು ಹಾರೈಕೆ ಮಾಡುತ್ತಿದ್ದಾರೆ. ಅನಾಥ ಮಗುವನ್ನು ನೋಡಲು ಹಿಡಿ ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಅಲ್ಲದೆ ಮಗುವನ್ನು ಬಿಸಾಕಿದ ಪಾಪಿ ಪೋಷಕರಿಗೆ ಹಿಡಿ ಶಾಪ್ ಹಾಕುತ್ತಿದ್ದಾರೆ. ಇನ್ನೂ ಮಗು ಈಗ ಸಧ್ಯ ಗ್ರಾಮದ ಬಸವರಾಜ್ ಉಪ್ಪಾರ ಎನ್ನುವವರ ಮನೆಯಲ್ಲಿ ಹಾರೈಕೆ ಮಾಡಲಾಗುತ್ತಿದೆ. ಮಗುವನ್ನು ಸಾಕಲು ನೂರಾರು ಜನರು ಬೇಡಿಕೆ ಇಟ್ಟಿದ್ದಾರೆ. ಆದ್ರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದ ನಂತರ, ಕಾನೂನಿನ ರೀತಿಯಲ್ಲಿ ಮಗುವನ್ನು ಸಾಕುವುದಕ್ಕೆ ನೀಡುವುದಾಗಿ ಹೇಳಿದ್ದಾರೆ.‌ ಈ ಕುರಿತು ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Latest Videos

click me!