ವರುಣಕ್ಕೆ ಸೋಮಣ್ಣ ಕೊಡುಗೆ ನಯಾಪೈಸೆ ಇಲ್ಲ : ಯತೀಂದ್ರ ಸಿದ್ದರಾಮಯ್ಯ

By Kannadaprabha NewsFirst Published Apr 24, 2023, 5:36 AM IST
Highlights

ವರುಣ ಕ್ಷೇತ್ರಕ್ಕೆ ಸಚಿವ ಸೋಮಣ್ಣ ಅವರದು ನಯಾಪೈಸೆ ಕೊಡುಗೆಯಿಲ್ಲ, ವಸತಿ ಸಚಿವರಾಗಿ ಕಳೆದ 5 ವರ್ಷಗಳಿಂದ ರಾಜ್ಯದ ಜನರಿಗೆ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ, ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 224 ಕ್ಷೇತ್ರಗಳಿಗೂ ಕೊಡುಗೆ ನೀಡಿರುವ ಕಾರಣ ಅವರು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

  ನಂಜನಗೂಡು :  ವರುಣ ಕ್ಷೇತ್ರಕ್ಕೆ ಸಚಿವ ಸೋಮಣ್ಣ ಅವರದು ನಯಾಪೈಸೆ ಕೊಡುಗೆಯಿಲ್ಲ, ವಸತಿ ಸಚಿವರಾಗಿ ಕಳೆದ 5 ವರ್ಷಗಳಿಂದ ರಾಜ್ಯದ ಜನರಿಗೆ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ, ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ 224 ಕ್ಷೇತ್ರಗಳಿಗೂ ಕೊಡುಗೆ ನೀಡಿರುವ ಕಾರಣ ಅವರು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ಹದಿನಾರು, ಹದಿನಾರು ಮೋಳೆ, ಆಲತ್ತೂರು ಹುಂಡಿ ಗ್ರಾಮಗಳಲ್ಲಿ ಅವರ ತಂದೆ ವರುಣಾ ಕ್ಷೇತ್ರದ ಅಭ್ಯರ್ಥಿ ಸಿದ್ದರಾಮಯ್ಯರವರ ಪರವಾಗಿ ಮತಯಾಚನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Latest Videos

ಸಚಿವ ವಿ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಅವರು ಕ್ಷೇತ್ರಕ್ಕಾಗಲಿ ಜಿಲ್ಲೆಗಾಗಲಿ ಯಾವುದೇ ಕೊಡುಗೆ ನೀಡಿಲ್ಲ. ವಸತಿ ಸಚಿವರಾಗಿ ಕಳೆದ 5 ವರ್ಷಗಳಲ್ಲಿ ಬಡವರಿಗೆ 1 ಮನೆಯನ್ನೂ ನೀಡಿಲ್ಲ. ಕೊನೆ ಕ್ಷಣದಲ್ಲಿ ಬಿಡುಗಡೆಗೊಳಿಸಿದ್ದ 2 ಸಾವಿರ ಮನೆಗಳು ಬರೀ ಪೇಪರ್‌ ಮೇಲಿದೆ ಹೊರತು ಕಾರ್ಯಗತವಾಗಿಲ್ಲ. ಇನ್ನು ಕಾಂಗ್ರೆಸ್‌ ಸರ್ಕಾರದಲ್ಲಿ ಮಂಜೂರಾಗಿದ್ದ 8 ಸಾವಿರ ಮನೆಗಳು ಲಾಕ್‌ ಆಗಿ ಹಣ ಬಿಡುಗಡೆಯಾಗಿಲ್ಲ ಎಂದರು.

ಸಂಸದ ಪ್ರತಾಪ್‌ಸಿಂಹ ಅವರು ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದಿದ್ದರು. ಈಗ 4 ದಿನ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಆ ಭಯ ಇರಬೇಕೆಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ, ಪ್ರತಾಪ್‌ಸಿಂಹ ಅವರ ಬಾಯಿ ಬೊಂಬಾಯಿ, ಅವರದು ಮೋಟರ್‌ ಮೌತ್‌, ಅವರು ಸುಳ್ಳು ಹೇಳುವುದರಲ್ಲಿ ಅಪಪ್ರಚಾರ ಮಾಡುವುದರಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು.

ಯತೀಂದ್ರ ವೀರಶೈವರ ಮುಖಂಡರು: ವೀರಶೈವ ಮುಖಂಡ ಗುರುಪಾದಸ್ವಾಮಿ ಮಾತನಾಡಿ, ಬಿಜೆಪಿಗರಿಗೆ ವಿ.ಸೋಮಣ್ಣ ವೀರಶೈವ ಲಿಂಗಾಯತರಾದರೆ ಕ್ಷೇತ್ರದಲ್ಲಿ ನಮಗೆ ಯತೀಂದ್ರ ಅವರೇ ವೀರಶೈವ ಮುಖಂಡರು. ಏಕೆಂದರೆ ಅವರು ಜಾತಿ, ಬಡವ ಬಲ್ಲಿದನೆಂಬ ಬೇಧ ಭಾವವಿಲ್ಲದೆ ವರುಣ ಕ್ಷೇತ್ರದಲ್ಲಿ ವೀರಶೈವರ ಬೀದಿಗಳಲ್ಲಿ ಸಿಸಿ ರಸ್ತೆ ನಿರ್ಮಿಸಿ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರೂ ಕೂಡ ಹದಿನಾರು ಗ್ರಾಮಕ್ಕೆ ಸುಮಾರು 75 ಕೋಟಿ ಅಭಿವೃದ್ದಿ ಕೆಲಸ ಮಾಡಿದ್ದಾರೆ ಎಂದರು.

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಮುಖಂಡರಾದ ಕಲ್ಮಳ್ಳಿ ಬಾಬು, ಜಗದೀಶ್‌, ಹದಿನಾರು ಗ್ರಾಪಂ ಅಧ್ಯಕ್ಷ ಅಭಿನಂದನ್‌, ಉಪಾಧ್ಯಕ್ಷ ಮಹದೇವಮ್ಮ ರೇವಣ್ಣ, ಜಿಪಂ ಮಾಜಿ ಸದಸ್ಯರಾದ ಎಚ್‌.ಎನ್‌. ನಂಜಪ್ಪ, ಗುರುಮಲ್ಲಪ್ಪ, ಅಹಲ್ಯ ಪ್ರಭ್ಯಸ್ವಾಮಿ, ಕಲ್ಮಳ್ಳಿ ಶಿವಕುಮಾರ್‌, ಗ್ರಾಪಂ ಸದಸ್ಯರಾದ ನಾಗರಾಜು, ಜ್ಯೋತಿ, ಶೃತಿ, ರವಿಕುಮಾರ್‌, ಮಹದೇವಸ್ವಾಮಿ, ಸುಂದರ್‌, ನಾಗರಾಜನಾಯಕ, ಜವರಶೆಟ್ಟಿ, ರವಿ, ಗೋವಿಂದಶೆಟ್ಟಿಮೊದಲಾದವರು ಇದ್ದರು.

click me!