ಸೊಗಡು ಶಿವಣ್ಣ ಭೇಟಿಯಾದ ಸೋಮಣ್ಣ : ಪ್ರಮುಖ ಡಿಮ್ಯಾಂಡ್ ಇಟ್ಟ ಅಭ್ಯರ್ಥಿ

By Kannadaprabha News  |  First Published Mar 22, 2024, 10:29 AM IST

ಭಿನ್ನಮತ ಶಮನಕ್ಕೆ ಮುಂದಾಗಿರುವ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಗೆ ಭೇಟಿ ನೀಡಿದರು.


 ತುಮಕೂರು :  ಭಿನ್ನಮತ ಶಮನಕ್ಕೆ ಮುಂದಾಗಿರುವ ತುಮಕೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಮನೆಗೆ ಭೇಟಿ ನೀಡಿದರು.

ಮಾಧುಸ್ವಾಮಿ ಜೊತೆ ಗುರುತಿಸಿಕೊಂಡಿರುವ ಹಾಗೂ ಹಾಲಿ ಜಿ.ಎಸ್. ಬಸವರಾಜು ಅವರ ಬದ್ಧ ವೈರಿಯಾಗಿರುವ ಸೊಗಡು ಶಿವಣ್ಣ ಅವರು ಕಳೆದ ಯಲ್ಲಿ ಸ್ಪರ್ಧಿಸಿದ್ದರು. ಇದೀಗ ಸೋಮಣ್ಣ ಅವರು ಚಿಕ್ಕಪೇಟೆಯಲ್ಲಿರುವ ಶಿವಣ್ಣ ಮನೆಗೆ ಭೇಟಿ ನೀಡಿ ಮನವೊಲಿಕೆ ಮಾಡಿ ತಮ್ಮ ಪರ ಕೆಲಸ ಮಾಡುವಂತೆ ಮನವಿ ಮಾಡಿದ್ದಾರೆ.

Latest Videos

undefined

ಸೊಗಡು ಶಿವಣ್ಣ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ ಅವರು, ಕೆಲವಾರು ಕಾರಣದಿಂದ ನಾನು ಕೂಡ ಕೆಲವಾರು ತಪ್ಪುಗಳನ್ನು ಮಾಡಿ ಒದ್ದಾಡುತ್ತಿರುತ್ತೇವೆ. ಸ್ವಾಭಿಮಾನಕ್ಕೆ ಧಕ್ಕೆಯಾದರೆ, ನೋವಾದರೆ ಸಹಿಸಲ್ಲ ಅನ್ನೋ ಸಂದೇಶ ಕೊಟ್ಟಿದ್ದಾರೆ. ಈ ಕುಟುಂಬಕ್ಕೂ ನಮಗೂ ಅವಿನಾಭವ ಸಂಬಂಧ ಎಂದರು.

ಹತ್ತಾರು ಕಾರ‍್ಯಕ್ರಮಗಳನ್ನು ನಾನು ಸೊಗಡು ಶಿವಣ್ಣ ಒಟ್ಟಾಗಿ ಮಾಡಿದ್ದೇವೆ. ಸ್ವಲ್ಪ ಯಡವಟ್ಟಾದರೆ, ಸಣ್ಣದು ಕೂಡ ದೊಡ್ಡ ಅಸ್ತ್ರ ಆಗುತ್ತೆ ಅನ್ನೋದಕ್ಕೆ ಕೆಲವಾರು ಉದಾಹರಣೆಗಳನ್ನು ನೋಡಿದ್ದೇವೆ ಎಂಗ ಅವರು ನಾವು ಸ್ವಲ್ಪ ಎಚ್ಚೆತ್ತುಕೊಂಡ್ವಿ, ಶಿವಣ್ಣನವರು ಸ್ವಾಭಿಮಾನ ಬೆಳಸಿಕೊಂಡಿದ್ದಾರೆ. ಮಾನಸಿಕ ತೋಳಲಾಟ ತಾಳಲಾರದೆ ಚುನಾವಣೆಗೆ ನಿಂತರು. ನನ್ನ ಸಂಪರ್ಕದಲ್ಲಿ ಇರುವ ರಾಷ್ಟ್ರೀಯ ನಾಯಕರಿಗೆ ಎಲ್ಲವನ್ನು ಹೇಳಿದ್ದೇನೆ. ಅವರ ಸ್ನೇಹಿತರ ಜೊತೆಗೆ ಸೇರಿ ಶಿವಣ್ಣನವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ವೈಯಕ್ತಿಕವಾಗಿ ಹಾಗೂ ಸಾಯೋತನಕ ಅವರ ಜೊತೆಗೆ‌ ಇರುತ್ತೇನೆ ಎಂದ ಸೋಮಣ್ಣ ರಾಜಕಾರಣ ಮುಳ್ಳಿನ ಹಾಸಿಗೆ. ಯಾರು ಶತ್ರುಗಳಲ್ಲ, ಮಿತ್ರರಲ್ಲ, ರಾಜಕೀಯ ನಿಂತ ನೀರಲ್ಲ. ಒಬ್ಬರ ಮನಸು ಮತ್ತೊಬ್ಬರ ಮನಸು ಒಂದಾಗಬೇಕು ಎಂದರು.

click me!