ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಸೈನಿಕನ ಬಳಿ ಜೀವಂತ ಗುಂಡು ಪತ್ತೆ

Suvarna News   | Asianet News
Published : Sep 13, 2020, 11:22 AM IST
ಬೆಳಗಾವಿ ಏರ್‌ಪೋರ್ಟ್‌ನಲ್ಲಿ ಸೈನಿಕನ ಬಳಿ ಜೀವಂತ ಗುಂಡು ಪತ್ತೆ

ಸಾರಾಂಶ

ಸೈನಿಕನ ಬಳಿ ಎಕೆ-47 ಗನ್‌ಗೆ ಬಳಸುವ ಒಂದು ಜೀವಂತ ಗುಂಡು ಪತ್ತೆ| ಬೆಳಗಾವಿ ಏರ್‌ಪೋರ್ಟ್‌ನಲ್ಲಿ ನಡೆದ ಘಟನೆ| ಬೆಂಗಳೂರಿಂದ ಬೆಳಗಾವಿಗೆ ಬಂದಿದ್ದ ಸೈನಿಕ| ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳಿಗೆ ಸೈನಿಕನನ್ನ ಹಸ್ತಾಂತರ| 

ಬೆಳಗಾವಿ(ಸೆ.13):ಸೈನಿಕನೊಬ್ಬನ ಬಳಿ ಎಕೆ-47 ಗನ್‌ಗೆ ಬಳಸುವ ಒಂದು ಜೀವಂತ ಗುಂಡು ಪತ್ತೆಯಾದ ಘಟನೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು(ಭಾನುವಾರ) ನಡೆದಿದೆ. KSISF ಅಧಿಕಾರಿಗಳು ತಪಾಸಣೆ ವೇಳೆ ಸೈನಿಕನ ಬಳಿ ಒಂದು ಜೀವಂತ ಗುಂಡು ಜೊತೆಗೆ  ಇನ್ಸಾಸ್ ಫೈರ್ಡ್ ಎಂಪ್ಟಿ ಕೇಸ್ ಸಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಸೈನಿಕನನ್ನು (MLIRC)ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಮೇಲಿನ ಕೇಸ್ ರದ್ದುಗೊಳಿಸಿದ ಹೈಕೋರ್ಟ್, ಯಡಿಯೂರಪ್ಪಗೆ ಬಿಗ್ ರಿಲೀಫ್..!

ನಿನ್ನೆ(ಶನಿವಾರ) ಸೈನಿಕ ಬೆಂಗಳೂರಿಂದ ಬೆಳಗಾವಿಗೆ ಬಂದಿದ್ದನು. ಸೈನಿಕನ ಬಳಿ ಜೀವಂತ ಗುಂಡು, ಎಂಪ್ಟಿ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ KSISF ಅಧಿಕಾರಿಗಳು ಮಿಲಿಟರಿ ಅಧಿಕಾರಿಗಳಿಗೆ ಪತ್ರ ಬರೆದು ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳಿಗೆ ಸೈನಿಕನನ್ನ ಹಸ್ತಾಂತರಿಸಿದ್ದಾರೆ. 
 

PREV
click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!