ಚಿಕ್ಕಪ್ಪನ ತಿಥಿಗೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

Suvarna News   | Asianet News
Published : Dec 19, 2019, 02:25 PM ISTUpdated : Dec 19, 2019, 02:33 PM IST
ಚಿಕ್ಕಪ್ಪನ ತಿಥಿಗೆ ಊರಿಗೆ ಬಂದಿದ್ದ ಯೋಧ ಅಪಘಾತದಲ್ಲಿ ಸಾವು

ಸಾರಾಂಶ

ರಜೆಗೆಂದು ಊರಿಗೆ ಬಂದಿದ್ದ ಯೋಧನೋರ್ವ ಅಪಘಾತದಲ್ಲಿ ಮೃತಪಟ್ಟಿದ್ದು, ಬರೋಬ್ಬರಿ 20 ಗಂಟೆಯ ಬಳಿಕ ಯೋಧನ ಮೃತದೇಹ ಪತ್ತೆಯಾಗಿದೆ. 

ಚಿಕ್ಕಮಗಳೂರು [ಡಿ.19] : ಚಿಕ್ಕಪ್ಪನ ತಿಥಿಗೆಂದು ಊರಿಗೆ ಬಂದಿದ್ದ ಯೋಧನೋರ್ವ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿಯಲ್ಲಿ ಯೋಧ ಚಿದಾನಂದ್ [27] ಮೃತಪಟ್ಟಿದ್ದು, ಅಪಘಾತವಾಗಿ 20 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. 

ಬಾಳೇನಹಳ್ಳಿ ಗ್ರಾಮದ ಯೋಧ ಚಿದಾನಂದ್ ಶ್ರೀನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚಿಕ್ಕಪ್ಪನ ತಿಥಿ ಕಾರ್ಯದ ಹಿನ್ನೆಲೆಯಲ್ಲಿ ಊರಿಗೆ ಕಳೆದ ಎರಡು ದಿನಗಳ ಹಿಂದೆ ಮರಳಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬುಧವಾರ ಸಖರಾಯಪಟ್ಟಣದಿಂದ ಬಾಳೇನಹಳ್ಳಿಗೆ ತೆರಳುವಾದ ಅಪಘಾತವಾಗಿದ್ದು, ಮೃತದೇಹಕ್ಕೆ ಹಳ್ಳಕ್ಕೆ ಬಿದ್ದ ಹಿನ್ನೆಲೆಯಲ್ಲಿ 20 ಗಂಟೆ ನಂತರ ಪತ್ತೆಯಾಗುದೆ. ಪೊಲೀಸ್ ನೆಟ್ ವರ್ಕ್ ತನಿಖೆ ನಂತರ ಮೃತದೇಹ ಪತ್ತೆ ಮಾಡಲಾಗಿದೆ. 

ಸದ್ಯ ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!