ಸೂರ್ಯ ಗ್ರಹಣ ಎಫೆಕ್ಟ್ ದೇಗುಲಗಳ ಮೇಲೆ, ಶುಭ ಸಮಾರಂಭಗಳು, ಧಾರ್ಮಿಕ ಆಚರಣೆಗಳ ಮೇಲೆ ಉಂಟಾಗುತ್ತವೆ. ಗ್ರಹಣ ಸಂದರ್ಭಗಳಲ್ಲಿ ದೇಗುಲಗಳು ಬಂದ್ ಆಗೋದು ಕಾಮನ್, ಆದ್ರೆ ವಿಜಯಪುರದಲ್ಲಿ ವ್ಯಾಪಾರಕ್ಕು ಗ್ರಹಣದ ಎಫೆಕ್ಟ್ ನಿಂದಾಗಿ ವ್ಯಾಪಾರದ ಮೇಲು ಭಾರಿ ಹೊಡೆತ ಬಿದ್ದಿದೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಅ.25) : ಕೇತುಗ್ರಸ್ತ ಖಂಡಗ್ರಾಸ ಸೂರ್ಯ ಗ್ರಹಣ ಎಫೆಕ್ಟ್ ದೇಗುಲಗಳ ಮೇಲೆ, ಶುಭ ಸಮಾರಂಭಗಳು, ಧಾರ್ಮಿಕ ಆಚರಣೆಗಳ ಮೇಲೆ ಉಂಟಾಗುತ್ತವೆ. ಗ್ರಹಣ ಸಂದರ್ಭಗಳಲ್ಲಿ ದೇಗುಲಗಳು ಬಂದ್ ಆಗೋದು ಕಾಮನ್, ಆದ್ರೆ ವಿಜಯಪುರದಲ್ಲಿ ವ್ಯಾಪಾರಕ್ಕು ಗ್ರಹಣದ ಎಫೆಕ್ಟ್ ನಿಂದಾಗಿ ವ್ಯಾಪಾರದ ಮೇಲು ಭಾರಿ ಹೊಡೆತ ಬಿದ್ದಿದೆ. ಇಂದಿನ ಸೂರ್ಯಗ್ರಹಣ ದೀಪಾವಳಿ ಅಮವಾಸ್ಯೆ ಆಚರಣೆ, ಲಕ್ಷ್ಮೀ ಪೂಜೆ ಸೇರಿದಂತೆ ಸಹಜವಾಗಿಯೇ ಧಾರ್ಮಿಕ ಆಚರಣೆಗಳ ಮೇಲೆ ಪ್ರಭಾವ ಬೀರಿದೆ. ಜೊತೆಗೆ ವಿಜಯಪುರದಲ್ಲಿ ಜೋರಾಗಿರಬೇಕಿದ್ದ ಹಬ್ಬದ ವ್ಯಾಪಾರದ ಮೇಲು ಗ್ರಹಣ ಪ್ರಭಾವ ಬೀರಿದೆ.. ಇಂದು ಗ್ರಹಣ ಹಿನ್ನೆಲೆಯಲ್ಲಿ ಶೇಕಡಾ 60ಕ್ಕು ಅಧಿಕ ಪ್ರಮಾಣದಲ್ಲಿ ವ್ಯಾಪಾರವಹಿವಾಟಿನ ಮೇಲೆ ಪ್ರಭಾವ ಬಿರಿದ್ದು, ದಿಢೀರ್ ಅಂತಾ ವ್ಯಾಪರ ಕುಸಿದಿದೆ. ದೀಪಾವಳಿ ಹಿನ್ನೆಲೆಯಲ್ಲಿ ಜನರು ಬಟ್ಟೆ ಖರೀದಿ, ಸಿಹಿ ಖಾದ್ಯಗಳ ಖರೀದಿ, ಹೂವು ಹಣ್ಣುಗಳ ಖರೀದಿ ಮಾಡ್ತಿದ್ರು. ಆದ್ರೆ ಇಂದು ಗ್ರಹಣ ಕಾರಣದಿಂದ ಜನರು ವ್ಯಾಪರ ವಹಿವಾಟಿಗೆ ಬ್ರೇಕ್ ಹಾಕಿದ್ದು ಕಂಡು ಬಂತು.
undefined
ಏಕಾಏಕಿ ಬಟ್ಟೆ ವ್ಯಾಪಾರ ಕುಸಿತ!
ದೀಪಾವಳಿ ಹಿನ್ನೆಲೆ ಕಳೆದ ಒಂದು ಬಾರದಿಂದ ಬಟ್ಟೆ ವ್ಯಾಪಾರ ಭರ್ಜರಿಯಾಗಿ ಸಾಗಿತ್ತು. ಜನರು ಅಪಾರ ಪ್ರಮಾಣದಲ್ಲಿ ಬಟ್ಟೆ ಖರೀದಿಗೆ ಮುಗಿಬಿದ್ದಿದ್ದರು. ನಾಳೆ ದೀಪಾವಳಿ ಎನ್ನುವ ಕಾರಣಕ್ಕೆ ಇಂದು ಅದೇ ಪ್ರಮಾಣದಲ್ಲಿ ಬಟ್ಟೆ ವ್ಯಾಪಾರ ನಡೆಯಬೇಕಿತ್ತು. ಆದ್ರೆ ದಿಢೀರ್ ಅಂತಾ ಇಂದು ಬಟ್ಟೆ ವ್ಯಾಪರ ಕುಸಿತ ಕಂಡಿದೆ. ಗ್ರಹಣ ಕಾರಣದಿಂದ ಬಟ್ಟೆ ಖರೀದಿಗು ಜನರು ಮಾರುಕಟ್ಟೆಗೆ ಬಂದಿಲ್ಲ. ಎಲ್ ಬಿ ಎಸ್ ಮಾರ್ಕೆಟ್, ಎಸ್ ಎಸ್ ರಸ್ತೆ, ಎಂ ಜಿ ರಸ್ತೆಗಳಲ್ಲಿ ಬಟ್ಟೆ ಅಂಗಡಿಗಳು ಬಿಕೋ ಎನ್ತಿದ್ದ ದೃಶ್ಯಗಳು ಕಂಡು ಬಂದವು
ಹೂವಿನ ವ್ಯಾಪಾರಕ್ಕು ಹಿಡಿದ ಗ್ರಹಣ!
ಇತ್ತ ದೀಪಾವಳಿ ಅಮವಾಸ್ಯೆ ಎಂದತೆ ಭರ್ಜರಿಯಾಗಿ ನಡೆಯಬೇಕಿತ್ತು. ಇದೆ ದಿನ ಅಂಗಡಿಕಾರರು ತಮ್ಮ ಅಂಗಡಿಮುಂಗಟ್ಟುಗಳಲ್ಲಿ ಲಕ್ಷ್ಮೀ ದೇವಿಯ ಪೂಜೆ ವಿಜೃಂಭಣೆಯಿಂದ ಪೂಜೆ ನಡೆಸಬೇಕಿತ್ತು. ಇದಕ್ಕಾಗಿ ಅಪಾರ ಪ್ರಮಾಣದಲ್ಲಿ ಹೂವಿನ ವ್ಯಾಪಾರವಾಗಬೇಕಿತ್ತು. ಆದ್ರೆ ಗ್ರಹಣದ ಗ್ರಹಚಾರ ಎಂದರೆ ನಗರದ ಗಾಂಧಿ ವೃತ್ತದ ಬಳಿಯ ಹೂವಿನ ಮಾರ್ಕೆಟ್ ಖಾಲಿಖಾಲಿಯಾಗಿತ್ತು. ಹೂ ಖರೀದಿಗೆ ಬರಬೇಕಿದ್ದ ಜನರಿಂದ ತುಂಬಿ ತುಳುಕಬೇಕಿದ್ದ ಹೂವಿನ ಮಾರ್ಕೆಟ್ ಬಿಕೋ ಎನ್ನುತ್ತಿತ್ತು. ದೀಪಾವಳಿಯ ಸಮಯದಲ್ಲು ವ್ಯಾಪಾರವಿಲ್ಲದೆ ವ್ಯಾಪಾರಸ್ಥರು ಕೂರುವಂತಾಯ್ತು.
ಬೆಂಗಳೂರಿನಲ್ಲಿ ದೀಪಾವಳಿ ಮಾರುಕಟ್ಟೆಗೆ ‘ಗ್ರಹಣ’ ಗೊಂದಲ
ಗ್ರಹಣ ಹಿನ್ನೆಲೆ ನಿನ್ನೆ ಸಂಜೆಯೆ ಲಕ್ಷ್ಮೀ ಪೂಜೆ!
ಇಂದು ಗ್ರಹಣ ಇರುವ ಕಾರಣ ಸಾಕಷ್ಟು ಅಂಗಡಿಕಾರರು ನಿನ್ನೆಯೆ ಲಕ್ಷ್ಮೀ ಪೂಜೆ ನಡೆಸಿದರು. ದೀಪಾವಳಿ ಅಂದರೆ ಲಕ್ಷ್ಮೀ ಪೂಜೆ ಅದ್ದೂರಿಯಾಗಿ ನಡೆಯುತ್ವೆ. ಆದ್ರೆ ಗ್ರಹಣ ಹಿನ್ನೆಲೆಯಲ್ಲಿ ಇಂದು ಆಚರಿಸಬೇಕಿದ್ದ ಅಮವಾಸ್ಯೆಯನ್ನ ನಿನ್ನೆ ಸಂಜೆಯೆ ಆಚರಿಸಲಾಯಿತು. ನಿನ್ನೆ ಸಂಜೆ ಅಮವಾಸ್ಯೆ ಶುರುವಾಗಿದ್ದರಿಂದ ಮನೆ-ವ್ಯಾಪಾರ ಸ್ಥಳಗಳಲ್ಲಿ ಲಕ್ಷ್ಮೀ ಪೂಜೆ ನೆರವೇರಿದ್ದಾರೆ.
ಹಬ್ಬದ ದಿನವೇ ಖಂಡಗ್ರಾಸ ಸೂರ್ಯಗ್ರಹಣ: 27 ವರ್ಷಗಳ ಬಳಿಕ ಇದೆಂಥಾ ವಿಚಿತ್ರ?!
ಗ್ರಹಣ ಹಿನ್ನೆಲೆ ಕೆಲ ದೇಗುಲಗಳೆ ಬಂದ್!
ಕೇತುಗ್ರಸ್ತ ಖಂಡಗ್ರಾಸ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ವಿಜಯಪುರ ನಗರದ ಐತಿಹಾಸಿ ಸುಂದರೇಶ್ವರ ದೇಗುಲ, ರಾಮ ಮಂದಿರದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಭಂದಿಸಲಾಗಿತ್ತು. ದೇಗುಲಗಳಿಗೆ ಮಧ್ಯಾಹ್ನವೇ ಬಾಗಿಲು ಬಂದ್ ಮಾಡಲಾಗಿತ್ತು. ಗ್ರಹಣ ಮೋಕ್ಷ ಬಳಿಕ ದೇಗುಲ ತೊಳೆದು ಪೂಜೆಗಳು ನಡೆಯುವುದು ಗ್ರಹಣಕಾಲದಲ್ಲಿ ವಾಡಿಕೆ