ಕೋಲಾರದಲ್ಲಿ 9 ಗಂಟೆಯಾದ್ರೂ ಕಾಣಿಸದ ಸೂರ್ಯ : ಕತ್ತಲು ಕತ್ತಲು

Suvarna News   | Asianet News
Published : Dec 26, 2019, 10:33 AM IST
ಕೋಲಾರದಲ್ಲಿ 9 ಗಂಟೆಯಾದ್ರೂ ಕಾಣಿಸದ ಸೂರ್ಯ : ಕತ್ತಲು ಕತ್ತಲು

ಸಾರಾಂಶ

9 ಗಂಟೆ ಆದ್ರೂ ಸೂರ್ಯ ಕಾಣಿಸದೇ ಕತ್ತಲು ಕವಿದ ವಾತಾವರಣವಿದೆ. ಸಂಪೂರ್ಣ ಮೋಡ ಕವಿದ ವಾತಾವರಣ ಇದ್ದು, ಗ್ರಹಣ ವೀಕ್ಷಣೆಯೂ ಸಾಧ್ಯವಾಗುತ್ತಿಲ್ಲ. 

ಕೋಲಾರ [ಡಿ.26]: ಬೆಳಗ್ಗೆ 9 ಗಂಟೆ ಆದರೂ ಕೂಡ ಕೋಲಾರದಲ್ಲಿ ಸೂರ್ಯ ಕಾಣಿಸಿಲ್ಲ. ಬುಧವಾರ ಸಂಜೆಯಿಂದಲೂ ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ ಇದೆ. 

ಅತ್ಯಂತ ವಿಶೇಷವಾದ ಕಂಕಣ ಸೂರ್ಯಗ್ರಹಣ ಸಂಭವಿಸಿದ್ದು, ಆದರೆ ಗ್ರಹಣ ವೀಕ್ಷಣೆ ಮಾಡಲು ಕೋಲಾರದಲ್ಲಿ ಮೋಡ ಅಡ್ಡಿಯಾಗಿದೆ. 

ಸಂಪೂರ್ಣ ಮೋಡ ಮುಸುಕಿದ ವಾತಾವರಣ ಇದ್ದು, ಕತ್ತಲು ಆವರಿಸದಂತಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ಇಲ್ಲಿನ ಪ್ರಮುಖ ದೇವಾಲಯಗಳಾದ ಕೋಲಾರಮ್ಮ ದೇವಾಲಯ , ಸೋಮೇಶ್ವರ ದೇವಾಲಯ, ಚಿಕ್ಕ ತಿರುಪತಿ , ಕುರುಡುಮಲೆ ಗಣೇಶ ಸೇರಿದಂತೆ ಬಹುತೇಕ ದೇವಾಲಯಗಳಿಗೆ ಬೀಗ ಹಾಕಲಾಗಿದೆ. 

ದೇವರುಗಳಿಗೆ ದರ್ಬೆಗಳಿಂದ ದಿಗ್ಭಂಧನ ಹಾಕಿದ್ದು, ಗ್ರಹಣ ಮುಕ್ತಾಯದ ಬಳಿಕ ಅಂದರೆ 12,30ರ ಬಳಿಕ ದೇವಾಕಯಗಳಲ್ಲಿ ಶುಚಿ ಕಾರ್ಯ ಮಾಡಿ ನಂತರ ದೇವರಿಗೆ ಅಭಿಷೇಕ, ವಿಶೇಷ ಪೂಜಾ ಕಾರ್ಯಗಳನ್ನು ನಡೆಸಿ ಸಾರ್ವಜನಿಕರಿಗೆ ದರ್ಶನ ನೀಡಲಾಗುತ್ತದೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು