ರಾಮ ಮಂದಿರಕ್ಕೆ ಹನುಮ ನಾಡಿನಿಂದ ಮೃತ್ತಿಕೆ ಸಂಗ್ರಹ ಶೀಘ್ರ: ಸೂಲಿಬೆಲೆ

By Kannadaprabha News  |  First Published Jun 25, 2023, 5:36 AM IST

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸ್ಥಳಕ್ಕೆ ರಾಮಧೂತ ಹನುಮನ ನಾಡಿನಿಂದ ಮೃತ್ತಿಕೆ ಸಂಗ್ರಹ ಕಾರ್ಯ ಶೀಘ್ರವೇ ಜರುಗಲಿದೆ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.


ರಬಕವಿ-ಬನಹಟ್ಟಿ (ಜೂ.25) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸ್ಥಳಕ್ಕೆ ರಾಮಧೂತ ಹನುಮನ ನಾಡಿನಿಂದ ಮೃತ್ತಿಕೆ ಸಂಗ್ರಹ ಕಾರ್ಯ ಶೀಘ್ರವೇ ಜರುಗಲಿದೆ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಶುಕ್ರವಾರ ಸಂಜೆ, ಬಾಗಲಕೋಟೆ ಜಿಲ್ಲೆ ಬನಹಟ್ಟಿಯ ಈಶ್ವರಲಿಂಗ ಮೈದಾನದಲ್ಲಿ ಏರ್ಪಡಿಸಿದ್ದ ‘ನಮ್ಮ ಬದುಕಿಗೂ ಗ್ಯಾರಂಟಿ ಕೊಡಿ’ ಕಾರ್ಯಕ್ರಮದಲ್ಲಿ ಗೋರಕ್ಷತೆ ಕುರಿತು ಮಾತನಾಡುವ ವೇಳೆ ಅವರು ಮೃತ್ತಿಕೆ ಸಂಗ್ರಹ ಬಗ್ಗೆ ಮಾಹಿತಿ ನೀಡಿದರು.

Tap to resize

Latest Videos

undefined

Ayodhya: ಎಲ್ಲಿಗೆ ಬಂತು ರಾಮಮಂದಿರ ನಿರ್ಮಾಣ? ಯಾವಾಗ ಸಿಗುತ್ತೆ ರಾಮನ ದರ್ಶನ?

ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿ(Ram Janmabhoomi Ayodhya)ಯಲ್ಲಿ ಪವಿತ್ರ ರಾಮ ಮಂದಿರ(Rama mandir) ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ(PM Narendra Modi) 2018ರ ಆಗಸ್ಟ್‌ 6ರಂದು ಶಿಲಾನ್ಯಾಸ ನೆರವೇರಿಸಿದ್ದಾರೆ. ಹಿಂದೂಗಳ ಪವಿತ್ರ ಸ್ಥಳವಾದ ರಾಮ ಜನ್ಮಸ್ಥಳಕ್ಕೆ ರಾಜ್ಯದ ಹನುಮನ ನಾಡಿನಲ್ಲಿ ಮೃತ್ತಿಕೆ ಸಂಗ್ರಹ ಕಾರ್ಯ ಸದ್ಯದಲ್ಲೇ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ರಾಜ್ಯದ ಪ್ರತಿ ಗ್ರಾಮಗಳಲ್ಲಿಯೂ ಇರುವ ಆಂಜನೇಯ ದೇವಾಲಯಗಳಿಂದ ಮೃತ್ತಿಕೆ ಸಂಗ್ರಹ ಕಾರ್ಯ ನಡೆಯಲಿದ್ದು, ಆಯಾ ಭಾಗಗಳಿಂದ ಮೃತ್ತಿಕೆ ಸಂಗ್ರಹಿಸಿ ನೇರ ಅಯೋಧ್ಯೆಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದು ಸೂಲಿಬೆಲೆ ಹೇಳಿದರು.

ಮತಾಂತರ, ಗೋಹತ್ಯೆ ಕಾಯ್ದೆ ಹಿಂಪಡೆತ: ಹಿಂದೂಗಳಿಗೆ ಅವಮಾನ

ರಾಜ್ಯ ಸರ್ಕಾರ ಯೋಜನೆ ಗ್ಯಾರಂಟಿಗಳ ಮಧ್ಯೆ ಗೋವುಗಳ ಬದುಕಿನ ಗ್ಯಾರಂಟಿ ಉಳಿಸಬೇಕಿತ್ತು. ಬದಲಾಗಿ ಮತಾಂತರ ಹಾಗು ಗೋ ಹತ್ಯೆ ಕಾಯ್ದೆ ರದ್ದುಗೋಳಿಸುವ ಮೂಲಕ ಬಹುಸಂಖ್ಯಾತ ಹಿಂದೂಗಳಿಗೆ ಅವಮಾನ ಮಾಡಿದೆ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ(Chakravarthy sulibele) ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದರು.

ಹಿಂದಿನಿಂದಲೂ ಕಾಂಗ್ರೆಸ್‌ ಹಿಂದೂಗಳ ವಿರುದ್ಧವೇ ಕಾಯ್ದೆ ತರುವ ಮೂಲಕ ಮೂಲ ಸಿದ್ಧಾಂತಗಳಿಗೆ ನಿರಂತರವಾಗಿ ಕೊಡಲಿ ಏಟು ನೀಡುತ್ತಿದೆ. ಈಗಲೂ ಅದೇ ಚಾಳಿ ಮುಂದುವರಿಸಿದ್ದು, ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು.

ದೇಶಕ್ಕಾಗಿ ಉಗ್ರ ಕಾಳಾಪಾನಿ ಶಿಕ್ಷೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಸಾವರ್ಕರ್‌, ಭಗತ್‌ಸಿಂಗ್‌ರ ಪಠ್ಯ ತೆಗೆಯಲು ಅವರೇನು ಭಯೋತ್ಪಾದಕರಾ? ಎಂದು ಆಕ್ರೋಶ ವ್ಯಕ್ತಪಡಿಸಿದ ಸೂಲಿಬೆಲೆ, ಹಿಂದೂ ಧರ್ಮವನ್ನು ಅವಮಾನಗೊಳಿಸುವುದನ್ನು ನಿಲ್ಲಿಸಬೇಕಿದೆ ಎಂದು ಎಚ್ಚರಿಸಿದರು.

ಧಾರ್ಮಿಕ ಅಸಹಿಷ್ಣುತೆ ಹೆಚ್ಚಿಸುವತ್ತ ಗೋ ಹತ್ಯೆ ನಡೆಸುತ್ತ, ಖಚಿತವಲ್ಲದ ಉಚಿತ ಯೋಜನೆಗಳ ಮಧ್ಯದಲ್ಲಿ ಜನರ ಬಾಯಿ ಮುಚ್ಚಿಸುವ ಕುತಂತ್ರ ಸರ್ಕಾರದಿಂದ ನಡೆಯುತ್ತಿದೆ. ಇವೆಲ್ಲದರ ವಿರುದ್ಧ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಗೋ ಸಂರಕ್ಷಕ ಫಯಾಜ್‌ಖಾನ್‌ ಮಾತನಾಡಿ, ಗೋವು ನಮಗೆ ಹಾಲು, ತುಪ್ಪ ಸ್ವಸ್ಥ ಆರೋಗ್ಯವನ್ನು ನೀಡುವುದಲ್ಲದೆ, ಗೋವುಗಳಿಂದ ನಮಗೆ ಹದಿನಾರು ಸಂಸ್ಕಾರಗಳು ಬರುತ್ತವೆ. ಇಂಥ ಗೋ ಹತ್ಯೆ ಮೂಲಕ ಬಹುಸಂಖ್ಯಾತ ಹಿಂದೂಗಳನ್ನು ಅವಮಾನಿಸುವ ನಿರ್ಣಯವನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್‌ ಪಕ್ಷ ಸುಳ್ಳು ಹಂಚುವ ಕಾರ್ಯವನ್ನು ಬಿಡಬೇಕಾಗಿದೆ. ಒಡೆದ ಹೃದಯಗಳನ್ನು ಬೆಸೆಯುವ ಕಾರ್ಯ ಮಾಡಬೇಕಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರ್ಕಾರ ಉಚಿತ ಭಾಗ್ಯಗಳನ್ನು ಘೋಷಿಸಿ ಅಧಿಕಾರಕ್ಕೇರಿದೆ. ಆರು ತಿಂಗಳಿನ ನಂತರ ಸರ್ಕಾರವೂ ಉಚಿತವಾಗಿ ದೇಶ ಪ್ರೇಮಿಗಳಿಗೆ ದೊರೆಯಲಿದೆ. ರಾಷ್ಟ್ರ ಭಕ್ತರ ಪಾಠಗಳನ್ನು ಪಠ್ಯದಿಂದ ಬಿಟ್ಟಿದ್ದು ಬಹುದೊಡ್ಡ ತಪ್ಪು ಎಂದು ಫೈಜಖಾನ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಶಿ, ಪುರಿ,ಆಯೋಧ್ಯೆ ಸೇರಿ 6 ಪುಣ್ಯಕ್ಷೇತ್ರ ಯಾತ್ರೆಗೆ ಕೈಗೆಟುಕುವ ದರದ ಪ್ಯಾಕೇಜ್ ಘೋಷಿಸಿದ ರೈಲ್ವೇ !

ಹುಲ್ಯಾಳದ ಜ್ಞಾನ ಯೋಗಾಶ್ರಮದ ಹರ್ಷಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಸಿದ್ದು ಸವದಿ, ಸಂಘ ಪರಿವಾರದ ಮುಖ್ಯಸ್ಥ ಶಿವಾನಂದ ಗಾಯಕವಾಡ, ಮಲ್ಲೇಶ ಹೊಸಮನಿ ಸೇರಿದಂತೆ ಸಹಸ್ರಾರು ಜನ ಉಪಸ್ಥಿತರಿದ್ದರು.

click me!