ಗೋಳು ಕೇಳುವವರಿಲ್ಲ,  ಕರ್ನಾಟಕದಲ್ಲಿ ಮದ್ಯ ಮಾರಾಟ ಬಂದ್!?

By Suvarna News  |  First Published May 11, 2020, 4:45 PM IST

ಲಾಕ್ ಡೌನ್ ನಡುವೆ ಮದ್ಯ ಮಾರಾಟ/ ಹೆಚ್ಚಾದ ಕೌಟುಂಬಿಕ ದೌರ್ಜನ್ಯ/ ಮದ್ಯ ಮಾರಾಟ ನಿಲ್ಲಿಸಲು ಸರ್ಕಾರದ ಅಂಗಸಂಸ್ಥೆಯಿಂದಲೇ ಒತ್ತಾಯ/  ನೊಂದ ಮಹಿಳೆಯರ ಸಂಕಷ್ಟ ಆಲಿಸುವವರು ಯಾರು


ಬೆಂಗಳೂರು(ಮೇ 11)  ರಾಜ್ಯ ಸರ್ಕಾರ ಮದ್ಯದಂಗಡಿ ಆರಂಭಿಸಿರುವುದಕ್ಕೆ ಸರ್ಕಾರದ ಅಂಗಸಂಸ್ಥೆಯಿಂದಲೇ ಆಕ್ಷೇಪ ಕೇಳಿ ಬಂದಿದೆ.  ಮದ್ಯದಂಗಡಿ ಮುಚ್ಚಲು ಸರ್ಕಾರ ಮುಂದಾಗಬೇಕು. ಮದ್ಯ ಮಾರಾಟ ಆರಂಭ ಅಗಿರೋದ್ರಿಂದ ಕೌಟುಂಬಿಕ ಸಮಸ್ಯೆ ಹೆಚ್ಚಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆತಂಕ ತೋಡಿಕೊಂಡಿದೆ.

ಕೌಟುಂಬಿಕ ಸಲಹಾ ಕೇಂದ್ರಗಳಿಗೆ ಬರ್ತಿರುವ ಕರೆಗಳು ಇದಕ್ಕೆ ಮತ್ತಷ್ಟು ಸಾಕ್ಷ್ಯ ಒದಗಿಸಿವೆ.   ತಕ್ಷಣವೇ ಮದ್ಯದಂಗಡಿ ಕ್ಲೋಸ್ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಲು ಮುಂದಾಗಲಿ ಎಂದು ಸಮಾಜಕಲ್ಯಾಣ ಮಂಡಳಿ ಅಧ್ಯಕ್ಷೆ ವೆಂಕಟಲಕ್ಷ್ಮೀ ಆಗ್ರಹಿಸಿದ್ದಾರೆ.

Latest Videos

undefined

ಮದ್ಯ ಖರೀದಿ ಮಾಡಿದ ಕನ್ನಡದ ನಟಿ, ಅಸಲಿ ಕತೆ ಬೇರೆ ಇದೆ!

ಸಮಾಜಕಲ್ಯಾಣ ಮಂಡಳಿಗೆ ಬರುವ ದೂರುಗಳನ್ನು ಗಮನಿಸಿದಾಗ ಆತಂಕವಾಗುತ್ತಿದೆ. ನೊಂದ ಮಹಿಳೆಯರ ಸಹಾಯಕ್ಕೆ ಮಂಡಳಿ ಪ್ರಯತ್ನ ಪಡುತ್ತಿದೆ. ಆದರೆ ಮದ್ಯ ಮಾರಾಟಕ್ಕೆ ಸರ್ಕಾರ ಕೊಟ್ಟ ಅನುಮತಿ ಲಾಕ್ ಡೌನ್ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಮತ್ತಷ್ಟು ಕಷ್ಟ ನೀಡಿದೆ ಎಂದು ನೋವಿನ ಕತೆ ತೆರೆದಿಟ್ಟಿದ್ದಾರೆ.

ದೇವಸ್ಥಾನ ಗಳೇ ಮುಚ್ಚಿರುವ ಈ ಕಾಲದಲ್ಲಿ ಮದ್ಯದಂಗಡಿ ಬೇಕಾ..? ಎಂದು ಪ್ರಶ್ನೆ ಮಾಡಿರುವ  ಟಿ. ವೆಂಕಟಲಕ್ಷ್ಮೀ ಬಸವಲಿಂಗರಾಜು ಮಹಿಳೆಯರ ಗೋಳು ನಿವಾರಣೆಗಾಗಿ ರಾಜ್ಯ ಸರ್ಕಾರ ಮದ್ಯದಂಗಡಿ ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ದೇಶಾದ್ಯಂತ ಕೊರೋನಾ ವೈರಸ್ ಕಾರಣಕ್ಕೆ ಲಾಕ್ ಡೌನ್ ಘೋಷಣೆಯಾದಾಗ ಮದ್ಯ ವ್ಯಾಪಾರ ಬಂದ್ ಮಾಡಲಾಗಿತ್ತು. ಸುಮಾರು 42 ದಿನಗಳ ನಂತರ ಕರ್ನಾಟಕದಲ್ಲಿ ಮದ್ಯದಂಗಡಿ ಓಪನ್ ಆಗಿತ್ತು.  ಜನರು ಮದ್ಯ ಖರೀದಿಗೆ ಮುಗಿ ಬಿದ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಇದೇ ಮದ್ಯ ಈಗ ಕೌಟುಂಬಿಕ ದೌರ್ಜನ್ಯ ಹೆಚ್ಚಾಗಿದೆ.

 

 

click me!