Chitradurga: ಜೇನು ತುಪ್ಪದಿಂದ ಸಾಬೂನು ಫೇಶ್‌ವಾಶ್: ರೈತನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್

Published : Jan 22, 2023, 07:15 PM ISTUpdated : Jan 22, 2023, 07:19 PM IST
Chitradurga: ಜೇನು ತುಪ್ಪದಿಂದ ಸಾಬೂನು ಫೇಶ್‌ವಾಶ್: ರೈತನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್

ಸಾರಾಂಶ

* ಬರದನಾಡಲ್ಲಿ ಜೇನು ಕೃಷಿ ಮಾಡಿ ಸಾಧನೆಗೈದ ರೈತ ಮಂಜುನಾಥ್ * ಜೇನು ಸಾಕಣೆಯ ಜೊತೆಗೆ ಜೇನುತುಪ್ಪದಿಂದ ಉಪ ಉತ್ಪನ್ನ ತಯಾರಿಕೆ * 16 ಎಕರೆಯ ಈ ತೋಟದಲ್ಲಿ ಅಡಿಕೆ, ತೆಂಗು, ಸಪೋಟ, ಮಾವು, ಸೀಬೆ

ವರದಿ: ಕಿರಣ್.ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜ.22):  ಇತ್ತೀಚೆಗೆ ಕೃಷಿ ಅಂದ್ರೆ ಸಾಕು, ರೈತರು ಲಾಭ ಗಳಿಸುವ ಅತಿಯಾಸೆಯಿಂದ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಅಡಿಕೆ,  ತೆಂಗು ಹಾಗು ದಾಳಿಂಬೆ ಬೆಳೆಯಲು ಮುಂದಾಗ್ತಿದ್ದಾರೆ. ಆದ್ರೆ ಅದರಿಂದ ನಷ್ಟವಾದಾಗ ಕೃಷಿ ಸಹವಾಸ ಬೇಡವೆಂದು ಸುಮ್ಮನಾಗುತ್ತಿದ್ದಾರೆ. ಆದರೆ ಕೋಟೆನಾಡಿನ ರೈತನೊಬ್ಬ ಜೇನು ಕೇಷಿಯಲ್ಲೇ ಉದ್ಯಮವೊಂದನ್ನು ಆರಂಭಿಸಿ ಲಕ್ಷಾಂತರ ರೂಪಾಯಿ ಲಾಭ ಗಳಿಸಿ ಇತರರಿಗೆ ಮಾದರಿ‌ ಎನಿಸಿದ್ದಾರೆ. ಅಷ್ಟಕ್ಕೂ ಯಾರು ಆ ರೈತ ಅಂತೀರಾ.., ಈ ವರದಿ ನೋಡಿ....,

ನೋಡಿ‌ ಹೀಗೆ  ಹಚ್ಚ ಹಸುರಾಗಿ ಕಾಣ್ತಿರೊ ಸುಂಧರ ತೋಟ. ಜೇನುತುಪ್ಪದಿಂದ ತಯಾರಾಗ್ತಿರುವ ವಿವಿಧ ಉತ್ಪನ್ನಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಕುಡಿನೀರುಕಟ್ಟೆಯ ಮಂಜುನಾಥ್ ಅವರ ತೋಟ. 16 ಎಕರೆಯ ಈ ತೋಟದಲ್ಲಿ ಅಡಿಕೆ, ತೆಂಗು, ಸಪೋಟ, ಮಾವು, ಸೀಬೆ ಹಾಗು ಪಪ್ಪಾಯಿ ಬೆಳೆಯುತಿದ್ದಾರೆ. ಇವೆಲ್ಲವು ಗಳೊಂದಿಗೆ ಕಳೆದ ಮೂರು ವರ್ಷಗಳಿಂದ ಜೇನುಕೃಷಿ ಆರಂಭಿಸಿರುವ ಮಂಜುನಾಥ್‌ ಜೇನುತುಪ್ಪದಿಂದ ಅಧಿಕ ಲಾಭ ಗಳಿಸಲು ಸಾದ್ಯವಿಲ್ಲವೆಂದು ಅರಿತು, ಜೇನುತುಪ್ಪದ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ  ಉದ್ಯಮವನ್ನು ಆರಂಭಿಸಿದ್ದಾರೆ. 

ರೈತ​ರಿಗೆ 7 ಗಂಟೆ ವಿದ್ಯುತ್‌ ಸರಬರಾಜು

ಜೇನು ತುಪ್ಪದ ಸಾಬೂನು-ಫೇಶ್‌ ವಾಶ್: 
ಜೇನು ತುಪ್ಪದಿಂದ ಸಾಬೂನು, ಆಯುರ್ವೇದಿಕ್ ಔಷಧಿ, ತಲೆನೋವು ಬಾಮ್, ಕೈ-ಕಾಲುಗಳ ಕೀಲು ನೋವಿನ ಕ್ರೀಂ ಹಾಗೂ ಫೇಸ್ ವಾಶ್ ಕ್ರೀಂ ತಯಾರು ಮಾಡ್ತಿದ್ದಾರೆ. ಅತಿ ಕಡಿಮೆ ಬಂಡವಾಳದಲ್ಲಿ ಆರಂಭವಾದ ಈ ಉದ್ಯಮದಿಂದಲೇ ಸಾಕಷ್ಟು ಲಾಭ ಗಳಿಸ್ತಿದ್ದಾರೆ. ಈ ಉತ್ಪನ್ನಗಳಿಗೆ ಯಾವುದೇ ಬ್ರಾಂಡ್‌ ಹೆಸರು ಇಟ್ಟಿಲ್ಲ. ಅಲ್ಲದೆ ಈ ಉತ್ಪನ್ನಗಳನ್ನು ಮಾರುಕಟ್ಟೆ ಅಥವಾ ಅಂಗಡಿಗಳಲ್ಲು ಮಾರಾಟ ಮಾಡ್ತಿಲ್ಲ. ಈ ಉತ್ಪನ್ನಗಳ ಮಹತ್ವ ಜನರಿಂದ ಜನರಿಗೆ ಪ್ರಚಾರವಾಗಿದ್ದೂ, ಸಾರ್ವಜನಿಕರೇ ರೈತರ ಮನೆಗೆ ಧಾವಿಸಿ ಈ ಉತ್ಪನ್ನಗಳನ್ನು ಖರೀದಿಸ್ತಿದ್ದಾರೆ. ಫೋನ್ ಕರೆ ಮಾಡಿ ಉತ್ಪನ್ನಗಳಿಗೆ ಆರ್ಡರ್ ಕೊಡ್ತಿರೋದು ಬಾರಿ ವಿಶೇಷ ಎನಿಸಿದ್ದೂ, ವರ್ಷ, ವರ್ಷಕ್ಕೂ ಲಾಭದ ಪ್ರಮಾಣ‌ ಹೆಚ್ಚಾಗುತ್ತಿದೆ. 

ಜೇನು ಕೃಷಿಯಿಂದ ಬೆಳೆಗಳ ಇಳುವರಿ ಹೆಚ್ಚಳ: ಜೇನು ಕೃಷಿಯಿಂದ, ತೋಟದಲ್ಲಿನ ಬೆಳೆಗಳ  ಮೇಲೂ ಭಾರಿ ಪ್ರಭಾವ ಬೀರಿದೆ. ಅಡಿಕೆ, ತೆಂಗು ಹಾಗು ಇತರೆ ಬೆಳೆಗಳ ಇಳುವರಿ ಸಹ ಹೆಚ್ಚಾಗಿದೆ. ಹೀಗಾಗಿ ‌ಈ ಜೇನುಕೃಷಿ ವೀಕ್ಷಿಸಲು ಪ್ರತಿದಿನ ವಿವಿದೆಡೆಗಳಿಂದ ಪ್ರಗತಿಪರ ರೈತರು ಇಲ್ಲಿಗೆ ಧಾವಿಸ್ತಿದ್ದಾರೆ. ಜೇನು ಕೃಷಿಯ ಮಹತ್ವ ಹಾಗೂ ಲಾಭನಷ್ಟದ ಬಗ್ಗೆ ಚರ್ಚಿಸುತ್ತಿದ್ದಾರಂತೆ. ನಮ್ಮ ಭಾಗದಲ್ಲಿ ಕೇವಲ ಅಡಿಕೆ, ತೆಂಗೆ, ಮೆಕ್ಕೆಜೋಳ ಈ ರೀತಿಯ ಬೆಳೆಗಳಷ್ಟೇ ಹೆಚ್ಚು ರೈತರು ಬೆಳೆಯುತ್ತಾರೆ. ಆದರೆ, ಮಂಜುನಾಥ್ ಎಲ್ಲರಿಗೂ ಮಾದರಿ ಆಗುವಂತೆ ಜೇನು ಕೃಷಿ ಸಾಕಣೆ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ಜೊತೆಗೆ ಇತರೆ ರೈತರಿಗೂ ಪ್ರಗತಿಪರ ಕೃಷಿ ಮಾಡಲು ಉತ್ಸಾಹ ತುಂಬುತ್ತಾ ಮಾದರಿ ಆಗಿದ್ದಾರೆ. 

ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 2 ಲಕ್ಷ ರೈತರ ಸಾಲಮನ್ನಾ ಹಣ ಬಿಡುಗಡೆ: ಎಚ್‌ಡಿಕೆ

ಒಟ್ಟಾರೆ ಕೃಷಿಗಾಗಿ ಅತಿಯಾದ ಬಂಡವಾಳ ಹೂಡಿ‌ ನಷ್ಟ‌ಅನುಭವಿಸುವ ರೈತರಿಗೆ ಜೇನುಕೃಷಿ ಲಾಭದಾಯಕ  ಎನಿಸಿದೆ. ಹೀಗಾಗಿ ಕೋಟೆನಾಡಿನ ರೈತರು ಜೇನು ಕೃಷಿಯನ್ನು ಫಾಲೋ ಮಾಡ್ತಿದ್ದೂ, ಕೃಷಿ ಕ್ಷೇತ್ರದಲ್ಲಿ ಸಾಧಿಸುವ ಹಂಬಲವುಳ್ಳ‌ ರೈತರಿಗೆ ಮಂಜುನಾಥ್ ಮಾದರಿ‌ಯಾಗಿದ್ದಾರೆ. ಕೃಷಿಯಲ್ಲಿ ಲಾಭವಿಲ್ಲ ಎಂದು ದೂರ ಉಳಿಯುವವರಿಗೆ ಲಕ್ಷಾಂತರ ರೂ. ಆದಾಯ ಗಳಿಸುವ ಮಂಜುನಾಥ್‌ ನಿಜಕ್ಕೂ ಮಾದರಿ ಆಗಿದ್ದಾರೆ.

PREV
Read more Articles on
click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?