Wildlife: 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಿಸಿದ ಸ್ನೇಕ್‌ ಗಗನ್‌

By Kannadaprabha News  |  First Published Jul 3, 2023, 2:08 PM IST

ಇಲ್ಲಿಗೆ ಸಮೀಪದ ಮರಂಡೊದ ಗ್ರಾಮದ ಮೇರಿಯಂಡ ಅಪ್ಪಣ್ಣ ಅವರ ತೋಟದಲ್ಲಿ ಸೇರಿ ಕೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮಕುಟ್ಟರಕ್ಷಿತಾರಣ್ಯಕ್ಕೆ ಬಿಡಲಾಯಿತು.


ನಾಪೋಕ್ಲು (ಜು.3) ಇಲ್ಲಿಗೆ ಸಮೀಪದ ಮರಂಡೊದ ಗ್ರಾಮದ ಮೇರಿಯಂಡ ಅಪ್ಪಣ್ಣ ಅವರ ತೋಟದಲ್ಲಿ ಸೇರಿ ಕೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಮಕುಟ್ಟರಕ್ಷಿತಾರಣ್ಯಕ್ಕೆ ಬಿಡಲಾಯಿತು.

ಮೇರಿಯಂಡ ಅಪ್ಪಣ್ಣ ತೋಟಕ್ಕೆ ಕೆಲಸಗಾರರನ್ನು ಭಾನುವಾರ ಕರೆದುಕೊಂಡು ಹೋದ ಸಂದರ್ಭ ಕಾಳಿಂಗ ಸರ್ಪವನ್ನು ಕಂಡು ಭಯಗೊಂಡು ಕಾರ್ಮಿಕರು ಹಿಂತಿರುಗಿದ್ದಾರೆ. ಕೂಡಲೇ ಉರಗತಜ್ಞ ಪೊನ್ನೀರ ಸ್ನೇಕ್‌ ಗಗನ್‌ ತಿಳಿಸಿದ್ದು, ಅವರು ಆಗಮಿಸಿ ಬೃಹತ್‌ ಗಾತ್ರದ ಕಾಳಿಂಗ ಸರ್ಪವನ್ನು ಸೆರೆಹಿಡಿದು ಪೆರುಂಬಾಡಿಯ ರಕ್ಷಿತಾರಣ್ಯಕ್ಕೆ ಬಿಟ್ಟರು.

Tap to resize

Latest Videos

undefined

ಈ ಕುರಿತು ಮಾಹಿತಿ ನೀಡಿದ ಪೊನ್ನೀರ ಗಗನ್‌, ಒಂದೇ ವಾರದಲ್ಲಿ ಎರಡು ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸಲಾಗಿದೆ. ಕಳೆದ ಶುಕ್ರವಾರ ವಿರಾಜಪೇಟೆಯ ಬಾಳುಗೋಡು ಗ್ರಾಮದ ಪುಚ್ಚಿಮಂಡ ತಿಮ್ಮು ತಿಮ್ಮಯ್ಯನವರ ಮನೆಯ ಒಳಗಡೆ ಸೇರಿಕೊಂಡಿದ್ದ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿದ್ದೇನೆ. ಎಲ್ಲಾದರೂ ಸರ್ಪಗಳನ್ನು ಕಂಡರೆ ಕೊಲ್ಲದೆ ಸಮೀಪದ ಉರಗತಜ್ಞರಿಗೆ ಕರೆ ಮಾಡಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ತ್ತರ ಕನ್ನಡ: ಕಾರಿನೊಳಗೆ ನುಗ್ಗಿದ ಕಾಳಿಂಗ ಸರ್ಪ, ಒಳಗಿದ್ದವರು ಕಕ್ಕಾಬಿಕ್ಕಿ..!

14 ಹಾವಿನ ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಉಗರ ಪ್ರೇಮಿ !

ಬೆಳಗಾವಿ: ಹಾವುಗಳನ್ನು ಕಂಡರೆ ಭಯದಲ್ಲಿ ನಿರ್ಧಯವಾಗಿ ಹೊಡೆದು ಸಾಯಿಸುವುದು ಮನುಷ್ಯನ ಧರ್ಮವಾಗಿದೆ. ಹಾವಿಗೂ ಒಂದು ಜೀವ ಇರುತ್ತದೆ. ಸುಖಾ ಸುಮ್ಮನೆ ಅದು ಯಾರ ಜೀವಕ್ಕೂ ಹಾನಿ ಮಾಡುವುದಿಲ್ಲ. ಅದನ್ನು ಸಾಯಿಸುವುದರ ಬದಲಾಗಿ ಅವುಗಳ ಜೊತೆಗೆ ಸ್ನೇಹ ಮಾಡಬೇಕು ಎನ್ನುವ ಸಂದೇಶ ಸಾರುತ್ತ ಬಂದಿರುವ ಉರಗ ಪ್ರೇಮಿ ರಾಮ ಪಾಟೀಲ, 14 ಹಾವಿನ ಮರಿಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

 

ಜನರಲ್ಲಿರುವ ಹಾವಿನ ಭಯವನ್ನು ಹೋಗಲಾಡಿಸಲು ಹಲವು ವರ್ಷಗಳಿಂದ ರಾಮ ಪಾಟೀಲ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದ ಮನೆಯೊಂದರಲ್ಲಿ ಹಾವು ಇದೆ ಎಂಬ ಮಾಹಿತಿ ಬಂದಿತ್ತು. ಕೂಡಲೇ ಅಲ್ಲಿಗೆ ಹೋಗಿ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ. ರಾತ್ರಿ ಹಾವನ್ನು ಹಿಡಿದು ತಂದು ಬಾಟಲಿಯಲ್ಲಿಟ್ಟು ಮರುದಿನ ಸುಮಾರು 15ರಿಂದ 20 ಮೊಟ್ಟೆಗಳನ್ನು ಬಾಟಲಿಯಲ್ಲಿಟ್ಟಿದ್ದರು. 14ರಿಂದ 15 ಚಿಕ್ಕ ನಾಗರಹಾವು ಮರಿಗಳಿಗೆ ಜೀವದಾನ ಮಾಡಿರುವ ಇವರು, ಹಾವನ್ನು ಯಾರೂ ಸಾಯಿಸಬೇಡಿ, ಹಾವು ನಮ್ಮ ಸ್ನೇಹಿತ ಎಂಬ ಸಂದೇಶವನ್ನು ರಾಮ ಪಾಟೀಲರು ಯಾವಾಗಲೂ ಎಲ್ಲರಿಗೂ ನೀಡುತ್ತಾರೆ, ಅದರೊಂದಿಗೆ ನಾವು ಸ್ನೇಹ ಬೆಳೆಸುವುದನ್ನು ಕಲಿಯಬೇಕು ಎನ್ನುವುದು ಅವರ ಕೆಲಸಕ್ಕೆ ಜನರು ಮೆಚ್ವುಗೆ ವ್ಯಕ್ತಪಡಿಸಿದ್ದಾರೆ.

click me!