ಮತದಾರರ ಸಂಕಷ್ಟಅರಿತು ಕೆಲಸ ಮಾಡಿ : ಎಚ್‌.ವಿಶ್ವನಾಥ್‌

By Kannadaprabha News  |  First Published Jul 3, 2023, 11:32 AM IST

ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಂಕಷ್ಟಅರಿತು ಉತ್ತಮವಾಗಿ ಕೆಲಸ ಮಾಡಿದರೆ ಮತದಾರರು ಅವರಿಗೆ ನಿರಂತರವಾಗಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.


ಕೆ.ಆರ್‌. ನಗರ : ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಂಕಷ್ಟಅರಿತು ಉತ್ತಮವಾಗಿ ಕೆಲಸ ಮಾಡಿದರೆ ಮತದಾರರು ಅವರಿಗೆ ನಿರಂತರವಾಗಿ ಆಶೀರ್ವಾದ ಮಾಡಲಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಹೇಳಿದರು.

ಪಟ್ಟಣದ ಹಾಸನ- ಮೈಸೂರು ಯ ಖಾದಿ ಭಂಡಾರ ಸ್ನೇಹ ಬಳಗದ ವತಿಯಿಂದ ಶಾಸಕ ಡಿ. ರವಿಶಂಕರ್‌ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣ ಎನ್ನುವುದು ಜನಸೇವೆಯೇ ಹೊರತು ವೈಭವದಿಂದ ಜೀವನ ನಡೆಸುವ ಸ್ಥಾನವಲ್ಲ ಎಂದರು.

Tap to resize

Latest Videos

ಸರ್ಕಾರದ ಸವಲತ್ತುಗಳನ್ನು ಫಲಾನುಭವಿಗಳ ಮನೆಗಳಿಗೆ ತಲುಪಿಸುವ ಮಹತ್ತರವಾದ ಜವಾಬ್ದಾರಿ ಚುನಾಯಿತರಿಗೆ ಇದ್ದು ಅವರು ಅದನ್ನು ನಿರ್ವಂಚನೆಯಿಂದ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಸರ್ವ ಶ್ರೇಷ್ಠನಾಗಿದ್ದು ಎಲ್ಲರೂ ಆತನ ಆದೇಶವನ್ನು ಶಿರಸಾ ವಹಿಸಿ ಪಾಲಿಸಬೇಕು. ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆಯಬೇಕಾದರೆ ಸಾರ್ವಜನಿಕರು ಸಹ ಚುನಾಯಿತರೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಶಾಸಕ ಡಿ. ರವಿಶಂಕರ್‌ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶಾಸಕ ಡಿ. ರವಿಶಂಕರ್‌ ಮಾತನಾಡಿ, ಕ್ಷೇತ್ರದ ಜನರು ನನಗೆ ನೀಡಿರುವ ಅಧಿಕಾರವನ್ನು ಅವರ ಸೇವೆಗೆ ಮುಡುಪಾಗಿಟ್ಟಿದ್ದು ಹಿರಿಯರ ಮಾರ್ಗದರ್ಶನ ಮತ್ತು ಮತದಾರರ ಆಶಯದಂತೆ ಕೆಲಸ ಮಾಡುತ್ತೇನೆ ಎಂದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಆದರೆ ನಮ್ಮ ಅವಧಿಯಲ್ಲಿ ಮಾಡಿದ ಕೆಲಸಗಳು ಚಿರಸ್ಥಾಯಿಯಾಗಿ ಉಳಿಯಬೇಕಾಗಿದ್ದು ಆ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗಿ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವ ಆಶಯ ಹೊಂದಿದ್ದೇನೆ. ಇದಕ್ಕೆ ಸರ್ವರೂ ಸಹಕಾರಿಸಬೇಕು ಎಂದು ಅವರು ಕೋರಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಪುರಸಭೆ ಮಾಜಿ ಸದಸ್ಯ ಪೆರಿಸ್ವಾಮಿ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಖಾದಿ ಭಂಡಾರ ಸ್ನೇಹ ಬಳಗದ ಪದಾಧಿಕಾರಿಗಳಾದ ಅಡಗೂರು ನಟರಾಜ್‌ ದೇವರಹಟ್ಟಿ, ಸುಬ್ಬಕೃಷ್ಣ, ಮಧುನಹಳ್ಳಿ ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ನಾಗರಾಜು, ತಾಲೂಕು ಕುರುಬರ ಸಂಘದ ನಿರ್ದೇಶಕ ಬುಡೀಗೌಡ, ಕಾಂಗ್ರೆಸ್‌ ಮುಖಂಡರಾದ ಅರ್ಜುನಹಳ್ಳಿ ಜ್ಞಾನಾನಂದ, ಹಂಪಾಪುರ ದೇವರಾಜು, ಖಾದಿ ಬಂಡಾರ್‌ ಮೋಹನ್‌ ಕುಮಾರ್‌, ತಮ್ಮಯ್ಯಣ್ಣ, ಗುಲಾಬ್‌ ಜಾನ್‌ ಇದ್ದರು.

click me!