ಉರಗಗನ್ನು ಹಿಡಿಯುವ ಮಡಿಕೇರಿಯ ಸ್ನೇಕ್ ಗಗನ್ 50 ನೇ ಕಾಳಿಂಗ ಸರ್ಪವನ್ನು ಹಿಡಿಯುವದ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇದುವರೆಗೆ ಸರ್ಪ ಮತ್ತಿತರ ವಿಷ ಭರಿತ ಸುಮಾರು 800 ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಉರಗಗಳನ್ನು ರಕ್ಷಿಸಿದ್ದಾರೆ.
ಮಡಿಕೇರಿ(ಜ.29): ಪೊನ್ನೀರ ಸ್ನೇಕ್ ಗಗನ್ 50ನೇ ಕಾಲಿಂಗ ಸರ್ಪವನ್ನು ಹಿಡಿಯುವುದರ ಮೂಲಕ ದಾಖಲೆ ಸ್ಥಾಪಿಸಿದರು. ಅವರು ಇದುವರೆಗೆ ಸರ್ಪ ಮತ್ತಿತರ ವಿಷ ಭರಿತ ಸುಮಾರು 800 ಅಧಿಕ ಹಾವುಗಳನ್ನು ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಉರಗಗಳನ್ನು ರಕ್ಷಿಸಿದ್ದಾರೆ.
ಇತ್ತೀಚೆಗೆ ನಾಪೋಕ್ಲು ಬಾಳುಗೋಡು ಗ್ರಾಮದ ಮಾಚೇಟಿರ ಭೀಮ್ಮಯ್ಯ ಮನೆಯ ಪಕ್ಕ ಸುಮಾರು 13 ಅಡಿಗಳಷ್ಟುಉದ್ದದ ಕಾಳಿಂಗ ಸರ್ಪ ಹರ ಸಾಹಸ ಮಾಡಿ ಹಿಡಿದು ಕೊಡಗಿನ ಗಡಿ ಭಾಗದ ಮಾಕುಟ್ಟಅರಣ್ಯಕ್ಕೆ ಬಿಟ್ಟಿದ್ದಾರೆ.
ಹಾವುಗಳು ವಿಷಕಾರಿಯಾಗಿದ್ದರೂ ಯಾರಿಗೂ ತೊಂದರೆ ಮಾಡುವ ಪ್ರಾಣಿ ಅಲ್ಲ ಅದನ್ನು ಕೆಣಕಿದರೆ ಅದು ತನ್ನ ಪ್ರಾಣ ಉಳಿಸಿಕೊಳ್ಳಲು ಕಚ್ಚುತ್ತದೇಯೇ ಹೊರತು ಯಾವುದೇ ಹಾವು ಅನಾವಶ್ಯಕವಾಗಿ ಕಚ್ಚಿದ ಉದಾಹರಣೆ ಕಡಿಮೆ ಎಂದು ಪೊನ್ನೀರ ಸ್ನೇಕ್ ಗಗನ್ ತಿಳಿಸಿದ್ದಾರೆ. ವಿಷದ ಹಾವು ಕಂಡು ಬಂದರೆ ಈ ಮೊಬೈಲ್ ಸಂಖ್ಯೆ ಸಂಪರ್ಕಿಸುವಂತೆ ಕೋರಿದ್ದಾರೆ (8277445589, 994510695)