ತಂಡೋಪತಂಡವಾಗಿ ಬಂದು ದರ್ಶನ ಪಡೆದುಕೊಂಡ ಭಕ್ತರು| ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಣ್ಣೂರ ಗ್ರಾಮ| ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ|
ಅಫಜಲ್ಪುರ(ಮಾ.20): ತಾಲೂಕಿನ ಮಣ್ಣೂರ ಗ್ರಾಮದ ಆಧುನಿಕ ಪವಾಡ ಪುರುಷ ಸಿದ್ಧಿ ಪುರುಷ ಎಂದೆ ಖ್ಯಾತಿ ಗಳಿಸಿದ ಗಂಗಲಿಂಗ ಮಹಾರಾಯ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಗಂಗಲಿಂಗ ಮಹಾರಾಯರ ಗದ್ದುಗೆಯ ಮೆಲೆ ನಾಗರ ಹಾವೊಂದು ಹೆಡೆ ಬಿಚ್ಚಿ ಕುಳಿತು ಅಚ್ಚರಿ ಮೂಡಿಸಿದೆ.
ಮಣ್ಣೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನ ಭಕ್ತರು ತಂಡೋಪತಂಡವಾಗಿ ಬಂದು ದರ್ಶನ ಪಡೆದುಕೊಂಡರು.
ಕಲಬುರಗಿಗೆ ಕೈತಪ್ಪಿದ ರೈಲ್ವೆ ವಿಭಾಗ: ಖರ್ಗೆ-ಗೋಯಲ್ ಜಟಾಪಟಿ
ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹಾವು ಗದ್ದುಗೆಯ ಮೇಲೆ ಕುಳಿತು ಅಚ್ಚರಿ ಮೂಡಿಸಿದೆ.