ಕಲಬುರಗಿಗೆ ಕೈತಪ್ಪಿದ ರೈಲ್ವೆ ವಿಭಾಗ: ಖರ್ಗೆ-ಗೋಯಲ್‌ ಜಟಾಪಟಿ

By Kannadaprabha News  |  First Published Mar 20, 2021, 2:30 PM IST

ಸ್ಥಳೀಯವಾಗಿ ಭುಗಿಲೆದ್ದ ಅಸಮಾಧಾನ| ಐವರು ಎಂಪಿಗಳನ್ನು ಕಲ್ಯಾಣ ನಾಡು ನೀಡಿದ್ದರೂ ಈ ಅಲಕ್ಷತನವೇಕೆ ಎಂದು ಸಂಸದ ಜಿಸಿ ಚಂದ್ರಶೇಖರ್‌ ಖಡಕ್‌ ಪ್ರಶ್ನೆ|  ನಾವು ಕೊಟ್ಟ ಭೂಮಿಯಾದರೂ ಮರಳಿ ಕೊಡಬಹುದಿತ್ತಲ್ಲ, ವಿಳಂಬ ಯಾಕೆ ಮಾಡಿದ್ರಿ? ಎಂದು ಖರ್ಗೆ ಸವಾಲು| 


ಕಲಬುರಗಿ(ಮಾ.20): ಕಲಬುರಗಿಗೆ ಮಂಜೂರಾಗಿದ್ದ ಮಹತ್ವಾಕಾಂಕ್ಷಿ ರೈಲ್ವೆ ವಿಭಾಗ ಯೋಜನೆ 8 ವರ್ಷಗಳ ನಂತರ ಕೈಬಿಟ್ಟಿರುವ ವಿಚಾರ ಇಂದು ರಾಜ್ಯಸಭೆಯಲ್ಲಿ ಪ್ರಸ್ತಾಪವಾಗಿ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಹಾಗೂ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತಿನ ಜಟಾಪಟಿಗೆ ನಡೆದ ವಿಡಿಯೋ ದೃಶ್ಯಾವಳಿಗಳು ಟ್ವಿಟ್ಟರ್‌ನಲ್ಲಿ ಪ್ರತ್ಯಕ್ಷವಾಗಿವೆ.

ರಾಜ್ಯಸಭಾ ಟೀವಿಯ ನೇರ ಪ್ರಲಸಾರದ ಆಯ್ದ ಭಾಗಗಳಿರುವ ಈ ವಿಡಿಯೋ ದೃಶ್ಯಗಳಲ್ಲಿ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಕಲಬುರಗಿ ಇವಭಾಗ ರದ್ದು ಮಾಡ್ದಿದಕ್ಕೆ ನೀಡಿದ ಕಾರಣಗಳನ್ನೆಲ್ಲ ತಳ್ಳಿ ಹಾಕಿರುವ ಡಾ. ಖರ್ಗೆ ಹಿರಿಯ ಅಧಿಕಾರಿಗಳ ಸಲಹೆಯಯಂತೆಯೇ ವಿಭಾಗ ಘೋಷಿಸಲಾಗಿದೆ ಎಂದು ಮಾರುತ್ತರ ನೀಡಿದ್ದಾರೆ.

Tap to resize

Latest Videos

ಸದನದಲ್ಲಿ ಈ ಸಂಗತಿ ಪ್ರಸ್ತಾಪಿಸಿದ ಸಂಸದ ಜಿಸಿ ಚಂದ್ರಶೇಖರ್‌ ಅವರು ಕಲ್ಯಾಣ ಕರ್ನಾಟಕ ಪ್ರದೇಶ ಬಿಜೆಪಿಗೆ 5 ಸಂಸದರು ಕೊಡುಗೆ ನೀಡಿದ್ದರೂ 8 ವರ್ಷಗಳಾದರೂ ಕಾರ್ಯರೂಪಕ್ಕೆ ಬರದ ಕಲಬುರಗಿ ರೈಲ್ವೆ ವಿಭಾಗ ಯೋಜನೆ ಸಂಪೂರ್ಣವಾಗಿ ಕೈಬಿಡಲಾಗಿದೆ, ಇದು ಕಲ್ಯಾಣ ನಾಡಿಗೆ ಕೇಂದ್ರ ಮಾಡಿದ ಅನ್ಯಾಯವೆಂದು ತಿವಿದರು.

ಚಂದ್ರಸೇಖರ್‌ ಪ್ರಶ್ನೆಗೆ ಉತ್ತರಿಸಿದ ರೇಲ್ವೆ ಸಚಿವ ಪಿಯೂಷ್‌ ಗೋಯಲ್‌ ಕಾರ್ಯಸಾಧ್ಯತೆ (ಫೀಸಿಬಿಲಿಟಿ) ಅಧ್ಯಯನ ಮಾಡದೆಯೇ ಹಿಂದಿನ ಯೂಪಿಎ - 2 ಸರ್ಕಾರ ಚುನಾವಣೆ ದೃಷ್ಟಿಕೋನದಲ್ಲಿ ಕಲಬುರಗಿ ಸೇರಿದಂತೆ ದೇಶದಲ್ಲಿ 3 ರೈಲ್ವೆ ವಿಭಾಗಗಳನ್ನು ಘೋಷಿಸಿತ್ತು. ನಾವೀಗ ಹಿರಿಯ ಅದಿಕಾರಿಗಳ ಸಮೀತಿ ರಚಿಸಿ ಇವುಗಳ ಕಾರ್ಯಸಾಧ್ಯತೆ ಪರಿಶೀಲಿಸಿದ್ದೇವೆ. ಯಾವುದೇ ಮಗ್ಗುಲದಿಂದಲೂ ಈ ವಿಭಾಗಗಳ ರಚನೆ ಕಾರ್ಯಸಾಧುವಲದು ಸಮೀತಿ ವರದಿ ನೀಡಿದ್ದರಿಂದ ಈ ಯೋಜನೆ ಕೈಬಿಡಲಾಗಿದೆ ಎಂದರು.

ಕಲಬುರಗಿಗೆ ಮಂಜೂರು ಆಗಿದ್ದ ರೈಲ್ವೆ ವಿಭಾಗ ರದ್ದು!

ರೈಲ್ವೆ ಸಚಿವ ಗೋಯಲ್‌ ಅವರ ಸ್ಪಷ್ಟನೆಗೆ ತಿರುಗೇಟು ನೀಡಿದ ಡಾ. ಖರ್ಗೆ ಹುಬ್ಬಳ್ಳಿ ನೈರುತ್ಯ ರೈಲ್ವೆಯ ಜಿಎಂ ಆಗಿದ್ದ ಮಿತ್ತಲ್‌ ಅವರೇ ಕಲಬುರಗಿ ಕೇಂದ್ರವಾಗಿರುವಂತೆ ಹೊಸ ವಿಭಾಗ ಅತ್ಯಂತ ಪ್ರಶಸ್ತ ಹಾಗೂ ಸಮಂಜಸ ಎಂದಾದ ಮೇಲೆಯೇ ಕೇಂದ್ರ ಈ ಯೋಜನೆ ಕೈಗೆತ್ತಿಕೊಂಡಿದೆಯೇ ಹೊರತು ಯಾರ ಸಲಹೆ ಪಡೆಯದೆ, ಕೇವಲ ಚುನಾವಮೆ ಗಮನದಲ್ಲಿಟ್ಟುಕೊಂಡು ರಚಿಸಲಾದ ವಿಭಾಗ ಇದಾಗಿಲ್ಲ ಎಂದು ಮಾರುತ್ತರ ನೀಡಿದರು. ಜೊತೆಗೇ ಕಲಬುರಗಿ ವಿಭಾಗ ಯೋಜನೆಗೆ ರಾಜ್ಯ ಸರ್ಕಾರ ಭೂಮಿ ನೀಡಿದೆ. ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದ್ದು ಬೇಲಿ ಸಹ ಹಾಕಲಾಗಿದೆ. ಯೋಜನೆಯೇ ಕಾರ್ಯಸಾಧುವಲ್ಲದೆ ಹೋದರೆ ನೀಡಿದ್ದ ಭೂಮಿ ಮರಳಿಸಬಹುದಾಗಿತ್ತಲ್ಲ, ಯಾಕೆ ಈಗ ಇಂತಹ ಹೇಳಿಕೆ ಕೊಡುತ್ತಿದ್ದೀರಿ, ಇಂತಹ ಕ್ರಮದಿಂದ ಕಲ್ಯಾಣ ನಾಡಿಗೆ ಬಹುದೊಡ್ಡ ಅನ್ಯಾಯ ಮಾಡುತ್ತಿದ್ದೀರಿ ಎಂದು ಡಾ. ಖರ್ಗೆ ಆರೋಪಿಸಿದರು.

ಕಲಬುರಗಿ ಭಾಗದಲ್ಲಿರುವ ರೈಲ್ವೆ ಸೌಲಭ್ಯ ಮೂರು ಝೋನ್‌ಗಳಲ್ಲಿ ಹಂಚಿ ಹೋಗಿದ್ದರಿಂದ ಅಲ್ಲಿನ ಜನತೆ ರೈಲ್ವೆ ಸವಲತ್ತು ಹೊಂದುವಲ್ಲಿ ಸಾಕಷ್ಟುಸಂಕಷ್ಟಎದುರಿಸುತ್ತಿದ್ದಾರೆ. ಹೀಗಾಗಿ ಕಲಬುರಗಿ ಹೊಸ ರೇಲ್ವೆ ವಿಭಾಗ ರಚನೆಗೆ ಯೋಗ? ಸ್ಥಳವೆಂಬ ಹಿರಿಯ ಅದಿಕಾರಿಗಳ ಸಲಹೆಯಂತೆಯೇ ತಾವು ವಿಬಾಗ ಗೋಷಿಸಿದ್ದಾಗಿಯೂ ಡಾ. ಖರ್ಗೆ ಸದನದಲ್ಲಿ ಸ್ಪಷ್ಟಪಡಿಸಿದರು.

ವಾಗ್ವಾದ ಜೋರಾಗುವ ಲಕ್ಷಣ ಕಂಡಾಕ್ಷಣವೇ ಸಭಾಧ್ಯಕ್ಷರು ಮಧ್ಯಪ್ರವೇಶ ಮಾಡಿ ಉಭಯ ಪಕ್ಷದವರನ್ನೂ ಸಮಾಧಾನಪಡಿಸಿದರು. ಏತನ್ಮಧ್ಯೆ ರೈಲ್ವೆ ಸಚಿವರು ತಜ್ಞರ ಸಮೀತಿಯ ವರದಿಯಂತೆಯೇ ರೇಲ್ವೆ ವಿಭಾಗ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಪುನರುಚ್ಚರಿಸಿರುವುದು ವಿಡಿಯೋ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ.
 

click me!