ಬುಲ್ ಟ್ರಾಲ್ ಫಿಶಿಂಗ್, ನಾಡ ದೋಣಿ ಮೀನುಗಾರರಿಗೆ ಬರೆ..!

By Kannadaprabha NewsFirst Published Oct 6, 2019, 1:09 PM IST
Highlights

ನಿಷೇಧಿತ ಬುಲ್ ಟ್ರಾಲ್ ಮೀನುಗಾರಿಕೆಯಿಂದಾಗಿ ನಾಡ ದೋಣಿ ಮೀನುಗಾರರ ಹೊಟ್ಟೆಗೆ ಬರೆ ಬಿದ್ದಿದೆ. ಬುಲ್ ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳವಂತೆ ನಾಡದೋಣಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

ಉಡುಪಿ(ಅ.06): ನಿಷೇಧಿತ ಬುಲ್‌ಟ್ರಾಲ್‌ ಮೀನುಗಾರಿಕೆ ಮತ್ತು ಲೈಟ್‌ ಮೀನುಗಾರಿಕೆ ನಡೆಸುವವರ ಮೇಲೆ ವಾರದೊಳಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಡದೋಣಿ ಮೀನುಗಾರರ ಸಂಘ ಬೈಂದೂರು ವಲಯದ ಅಧ್ಯಕ್ಷ ಆನಂದ ಖಾರ್ವಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಷೇಧಿಸಿದ್ದರೂ ಈ ಅವೈಜ್ಞಾನಿಕ ಮೀನುಗಾರಿಕೆ ಅಕ್ರಮವಾಗಿ ಇನ್ನೂ ನಡೆಯುತ್ತಿದೆ. ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ. ನ್ಯಾಯಾಲಯ ಕೂಡ ಬುಲ್‌ಟ್ರಾಲ್‌, ಬೆಳಕು ಮೀನುಗಾರಿಕೆಯನ್ನು ಅವೈಜ್ಞಾನಿಕ ಎಂದು ತೀರ್ಮಾನಿಸಿ ನಿಷೇಧಿಸಿದೆ. ಮಲ್ಪೆಯಲ್ಲಿ ಬಲತ್ಕಾರವಾಗಿ ನಿಷೇಧಿತ ಮೀನುಗಾರಿಕೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಂತಿ ನಡಿಗೆ: ವಯಸ್ಸಾಗಿದೆ, ಜಾರಿ ಬಿದ್ದೀರಿ..! ಬಿಎಸ್‌ವೈಗೆ ಸಿದ್ದು ಟಾಂಗ್..!

ಜಿಲ್ಲೆಯಲ್ಲಿ ಸಾಂಪ್ರದಾಯಿಕ ನಾಡದೋಣಿಗಳು 5 ಸಾವಿರದಷ್ಟಿದೆ. ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ನಾಡದೋಣಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಬುಲ್‌ಟ್ರಾಲ್‌ ಮತ್ತು ಬೆಳಕು ಮೀನುಗಾರಿಕೆಯಿಂದ ಈ ಸಾಂಪ್ರದಾಯಿಕ ಮೀನುಗಾರರು ಮೀನಿನ ಕ್ಷಾಮದಿಂದ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿ, ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರಿಂದ ಭರವಸೆ ಮಾತ್ರ ಸಿಕ್ಕಿದೆಯೇ ವಿನಾಃ ಕ್ರಮ ಕೈಗೊಂಡಿಲ್ಲ ಎಂದು ಆನಂದ ಖಾರ್ವಿ ಆರೋಪಿಸಿದರು.

ಕೇಂದ್ರ 5000 ಕೋಟಿ ಕೊಡ್ಬೇಕಿತ್ತು: ಸಿದ್ದರಾಮಯ್ಯ

ಶುಕ್ರವಾರ ಮೀನುಗಾರಿಕೆ ಸಚಿವರಲ್ಲಿ ಸಮಸ್ಯೆ ಹೇಳಿಕೊಂಡಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ 7 ದಿನಗಳ ಗಡುವು ನೀಡುತಿದ್ದೇವೆ. ಕ್ರಮ ತೆಗೆದುಕೊಳ್ಳದೆ ಇದ್ದಲ್ಲಿ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಜತೆಗೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಾಡದೋಣಿ ಮೀನುಗಾರರ ಸಂಘದ ಮುಖಂಡರಾದ ಮಂಜು ಬಿಲ್ಲವ, ಚಂದ್ರಕಾಂತ್‌ ಕರ್ಕೇರ, ಸುರೇಶ್‌ ಖಾರ್ವಿ, ರತ್ನಾಕರ ಮೆಂಡನ್‌, ಪ್ರವೀಣ್‌ ಶ್ರೀಯಾನ್‌, ಹರೀಶ್‌ ತಿಂಗಳಾಯ, ವಾಸು ಕರ್ಕೇರ, ಲಕ್ಷ್ಮೇನಾರಾಯಣ ಇದ್ದರು.

click me!