ಜೋಳದರಾಶಿ ಗುಡ್ಡದ ಬಳಿಯ ಹೊಸ ಮನೆ ಹಾಗೂ ಕಾಲೇಜು ರಸ್ತೆಯಲ್ಲಿರುವ ಹಳೆಯ ಮನೆ ಮತ್ತು ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ಅಧಿಕಾರಿಗಳ ತಂಡ ದಾಳಿ| ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಲ್ಲಿರುವ ಗಣಿ ಉದ್ಯಮಿ ರಾಣಿ ಸಂಯುಕ್ತಾ ಅವರ ಮನೆ|
ಹೊಸಪೇಟೆ(ಸೆ.25): ಇಲ್ಲಿನ ಗಣಿ ಉದ್ಯಮಿ ರಾಣಿ ಸಂಯುಕ್ತಾ ಅವರ ಎರಡು ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ದಾಳಿ ನಡೆಸಿದ್ದು, ಗಣಿ ಉದ್ಯಮದ ವಿಚಾರವಾಗಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಇಲ್ಲಿನ ಜೋಳದರಾಶಿ ಗುಡ್ಡದ ಬಳಿಯ ಹೊಸ ಮನೆ ಹಾಗೂ ಕಾಲೇಜು ರಸ್ತೆಯಲ್ಲಿರುವ ಹಳೆಯ ಮನೆ ಮತ್ತು ಪ್ರಕಾಶ್ ನಗರದಲ್ಲಿರುವ ಕಚೇರಿಯ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ನಿಲ್ಲದ ಕೊರೋನಾ ಕಾಟ: ಕೊಟ್ಟೂರಲ್ಲಿ ಮನೆ ಮನೆಗೆ ಕೋವಿಡ್ ಟೆಸ್ಟ್
ದಾಳಿ ವೇಳೆ ರಾಣಿ ಸಂಯುಕ್ತಾ ಅವರು ಮನೆಯಲ್ಲಿರಲಿಲ್ಲ. ಈ ವೇಳೆ ಅವರ ಮೈದುನ ಯರ್ರಿಬಾಬು ಅವರನ್ನು ವಿಚಾರಣೆ ಮಾಡಿದ ತನಿಖಾ ತಂಡದ ಅಧಿಕಾರಿಗಳು, ಕೆಲ ಮಹತ್ವದ ದಾಖಲೆಗಳನ್ನು ತಂಡ ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.