ಸಿರ್ಸಿ ಮೇಲ್ಸೇತುವೆ ದುರಸ್ತಿ : ಈ ಮಾರ್ಗ ಬಳಸಿ

By Kannadaprabha NewsFirst Published Dec 17, 2019, 8:47 AM IST
Highlights

ಬೆಂಗಳೂರಿನ ಸಿರ್ಸಿ ಸರ್ಕಲ್ ಫ್ಲೈ ಓವರ್ ಕಾಮಗಾರಿ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಜನರು ಮಾರ್ಗದ ಬಗ್ಗೆ ಮಾಹಿತಿ ಪಡೆದುಕೊಳ್ಳಿ. 

ಬೆಂಗಳೂರು [ಡಿ.17] :  ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ (ಸಿರ್ಸಿ ಫ್ಲೈಓವರ್‌) ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಹೋಗುವ ಮಾರ್ಗದ ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಆರಂಭವಾಗಿದ್ದು ಸಂಚಾರ ಸ್ಥಗಿತವಾಗಿದೆ.

ಸಿರ್ಸಿ ಮೇಲ್ಸೇತುವೆ 2.65 ಕಿ.ಮೀ ಉದ್ದವಿದ್ದು, ಟೌನ್‌ಹಾಲ್‌ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಒಂದು ಮಾರ್ಗವನ್ನು ಈಗಾಗಲೇ ಐದು ಕೋಟಿ ರು. ವೆಚ್ಚದಲ್ಲಿ ಕಳೆದ ಮಾರ್ಚಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಇದೀಗ ಮತ್ತೊಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. 

ಈರುಳ್ಳಿ ಬಳಿಕ ನುಗ್ಗೆಕಾಯಿಗೆ ಸರದಿ : ಒಂದಕ್ಕೆ 40 ರುಪಾಯಿ...

ಮೊದಲ ಹಂತದ ಕಾಮಗಾರಿ:  ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಹಾಗೂ ರಾತ್ರಿ 11ರಿಂದ ಬೆಳಗ್ಗೆ 6 ರವರೆಗೆ ಮೈಸೂರು ಕಡೆಯಿಂದ ಬರುವ ವಾಹನಗಳಲ್ಲಿ ಈಗಾಗಲೇ ಕಾಮಗಾರಿ ನಡೆಸಲಾಗಿರುವ ಮೇಲ್ಸೇತುವೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗೆ ಮೇಲ್ಸೇತುವೆ ಬಳಸಿ ಬರುವ ವಾಹನಗಳನ್ನು ರಾಯನ್‌ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಯಥಾ ಪ್ರಕಾರ ಮೆಜೆಸ್ಟಿಕ್‌ ಹಾಗೂ ಪುರಭವನದ ಕಡೆ ಸಾಗಬೇಕಾಗಲಿದೆ.

ಇನ್ನು ಈ ಅವಧಿಯಲ್ಲಿ ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆ ಸಂಚರಿಸುವ ವಾಹನಗಳು ರಾಯನ್‌ ವೃತ್ತದ ಬಳಿ ಎಡಕ್ಕೆ ತಿರುವು ಪಡೆದು ಸೇತುವೆಯಿಂದ ಚಾಮರಾಜಪೇಟೆ ಕಡೆಗೆ ಮೇಲ್ಸೇತುವೆಯಿಂದ ಇಳಿದು ಒಂದನೇ ಮುಖ್ಯ ರಸ್ತೆ ಮೂಲಕ ಮೈಸೂರು ರಸ್ತೆ ಕಡೆ ಸಂಚಾರಿಸಬೇಕು.

ಇನ್ನು ಸಂಜೆ 4ರಿಂದ ರಾತ್ರಿ 11ರವರೆಗೆ ನಗರ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೆಚ್ಚಿನ ವಾಹನ ದಟ್ಟಣೆ ಉಂಟಾಗಲಿದೆ. ಹಾಗಾಗಿ, ಪುರಭವನದ ಕಡೆಯಿಂದ ಮೈಸೂರು ರಸ್ತೆ ಕಡೆ ಸಾಗುವ ಮೇಲ್ಸೇತುವೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಇನ್ನು ಮೈಸೂರು ಕಡೆಯಿಂದ ಬರುವ ವಾಹನಗಳು ಮೇಲ್ಸೇತುವೆಯ ಕೆಳಭಾಗದಲ್ಲಿ ಸಂಚರಿಸಿ ಕೆ.ಆರ್‌.ಮಾರುಕಟ್ಟೆಬಳಸಿ ಪುರಭವನ ಕಡೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

click me!