ಗಾಂಧಿ ಜಯಂತಿ ಅಂಗವಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಭಾನುವಾರ ಸಾಥ್ ನೀಡಿದರು. ಪೌರ ಕಾರ್ಮಿಕರು, ಅಧಿಕಾರಿಗಳೊಂದಿಗೆ ಪೊರಕೆ ಹಿಡಿದು ಇಲ್ಲಿಯ ಹಳೆಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು.
ಶಿರಸಿ (ಅ.3) : ಗಾಂಧಿ ಜಯಂತಿ ಅಂಗವಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಭಾನುವಾರ ಸಾಥ್ ನೀಡಿದರು. ಪೌರ ಕಾರ್ಮಿಕರು, ಅಧಿಕಾರಿಗಳೊಂದಿಗೆ ಪೊರಕೆ ಹಿಡಿದು ಇಲ್ಲಿಯ ಹಳೆಯ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು.
ಬೆಂಗಳೂರು-ಮುರ್ಡೇಶ್ವರ ರೈಲಿಗೆ ಅದ್ಧೂರಿ ಸ್ವಾಗತ
ಇದಕ್ಕೂ ಮುನ್ನ ಬಿಡಕಿಬೈಲಿನಲ್ಲಿರುವ ಮಹಾತ್ಮಾ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಬಳಿಕ ಗಾಂಧಿ ಜಯಂತಿ ಅಂಗವಾಗಿ ಮಕ್ಕಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೇವೆಗೆ ನಿಜವಾದ ಅರ್ಥ ಮಹಾತ್ಮ ಗಾಂಧೀಜಿ. ಅವರು ದೇಶಕ್ಕೆ ಮಾಡಿದ ಅನುಪಮ ಸೇವೆಯಿಂದಾಗಿ ಮಹಾತ್ಮ ಎನಿಸಿಕೊಂಡವರು. ಗಾಂಧೀಜಿ ಇಡೀ ಜಗತ್ತೇ ಕೊಂಡಾಡುವ ನಮ್ಮ ಭಾರತದ ವ್ಯಕ್ತಿ ಮತ್ತು ಶಕ್ತಿ ಎನ್ನುವುದೇ ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಲಂಡನ್ ಪಾರ್ಲಿಮೆಂಟ್ ಎದುರಲ್ಲಿಯೂ ಇವರ ಪುತ್ಥಳಿಯನ್ನು ಪ್ರತಿಷ್ಠಾಪಿಸಿರುವುದು ಅವರೊಬ್ಬ ಜಗತ್ತಿನ ನಾಯಕ ಎನ್ನುವುದನ್ನು ಸಾಬೀತು ಮಾಡಿದೆ. ಅವರು ದೇಶಕ್ಕೆ ನೀಡಿದ ಶಾಂತಿ-ಸೌಹಾರ್ದದ ಸಂದೇಶ ಜಗತ್ತಿನ ಬೇರೆ ಬೇರೆ ದೇಶಗಳಿಗೂ ಮಾದರಿಯಾಗಿದೆ ಎಂದರು.
ಗಾಂಧೀಜಿ ಸ್ವದೇಶಿ ವಸ್ತುಗಳಿಗೆ ಒತ್ತು ನೀಡುವುದರ ಮೂಲಕ ವಿದೇಶ ವಸ್ತುಗಳನ್ನು ವಿರೋಧಿಸಿದರು. ಇದರಿಂದಾಗಿ ಖಾದಿ ವಸ್ತ್ರಕ್ಕೆ ಹೆಚ್ಚಿನ ಬೆಲೆ ಬರುವಂತೆ ಮಾಡಿದರು. ಗಾಂಧೀಜಿ ಅವರಂತೆ ಭಾರತದ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಈ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಅವಿಸ್ಮರಣೀಯವಾದ ಕೊಡುಗೆ ನೀಡಿದ್ದಾರೆ. ಅವರು ಜೈ ಜವಾನ್ ಜೈ ಕಿಸಾನ್ ಎನ್ನುವ ಮೂಲಕ ರಾಷ್ಟ್ರದಲ್ಲಿ ಹಸಿರು ಕ್ರಾಂತಿ ಮಾಡಿದರು ಎಂದರು.
ಉತ್ತರಕನ್ನಡ: ಹವಾಮಾನ ವೈಪರೀತ್ಯ: ಸಾಂಪ್ರದಾಯಿಕ ಉಪ್ಪಿನ ಕೊರತೆ
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೆರ್, ಎಸಿ ದೇವರಾಜ ಆರ್., ತಹಸೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕೇಶವ ಚೌಗುಲೆ ಮುಂತಾದವರು ಇದ್ದರು.