120 ಸೀಟು ಗೆಲ್ಲುವುದು ಯಾವ ಪಕ್ಷಕ್ಕೂ ಅಸಾಧ್ಯ : ಬಿಜೆಪಿ ಸಂಸದ

By Kannadaprabha NewsFirst Published Oct 4, 2021, 3:16 PM IST
Highlights
  • ವಿರೇಂದ್ರ ಪಾಟೀಲ್‌, ರಾಮಕೃಷ್ಣ ಹೆಗಡೆ ಕಾಲದಲ್ಲಿಯೆ 120 ಸೀಟು ಗೆಲ್ಲಲಿಕ್ಕೆ ಆಗಲಿಲ್ಲ
  • ಸದ್ಯದ ಪರಿಸ್ಥಿತಿ ನೋಡಿದರೆ ಯಾವ ಪಕ್ಷ 120 ಸೀಟು ಗೆಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ 

ಚಿಕ್ಕಬಳ್ಳಾಪುರ (ಅ.04): ವಿರೇಂದ್ರ ಪಾಟೀಲ್‌ (Veerendra patil), ರಾಮಕೃಷ್ಣ ಹೆಗಡೆ (Ramakrshna Hegade) ಕಾಲದಲ್ಲಿಯೆ 120 ಸೀಟು ಗೆಲ್ಲಲಿಕ್ಕೆ ಆಗಲಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಯಾವ ಪಕ್ಷ 120 ಸೀಟು ಗೆಲ್ಲುತ್ತದೆ ಎನ್ನುವುದು ಕಾದು ನೋಡಬೇಕಿದೆ ಎಂದು ಜೆಡಿಎಸ್‌ (JDS) ಮಿಷನ್‌-123 ಬಗ್ಗೆ ಸಂಸದ ಬಿ.ಎನ್‌.ಬಚ್ಚೇಗೌಡ ತಿಳಿಸಿದರು.

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಬಚ್ಚೇಗೌಡ (BN Bachechegowda), 2023ಕ್ಕೆ ಸ್ವಂತ ಬಲದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲು ಸಿದ್ದತೆ ನಡೆಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ಗೆ ದೇವೇಗೌಡ (HD Devegowda) ಪಿತಾಮಹಾರು, ಅವರ ಮಗ 2 ಬಾರಿ ಸಿಎಂ ಆದರು. ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕುಮಾರಸ್ವಾಮಿ ಪ್ರಯತ್ನಿಸಿದ್ದಾರೆ. ಎಲ್ಲಾ ಪಕ್ಷಗಳಗಿಂತ ಮೊದಲೇ ಅಭ್ಯರ್ಥಿಗಳ ಆಯ್ಕೆ ಪ್ರಕಟಿಸಿ ತರಬೇತಿ ನೀಡುತ್ತಿದ್ದಾರೆ. ಆದರೆ ಅದರ ಯಶಸ್ವಿನ ಬಗ್ಗೆ ಈಗಲೇ ಏನು ಹೇಳಕ್ಕೆ ಆಗುವುದಿಲ್ಲ ಎಂದರು

ಶಾಸಕ ಶರತ್ ವಿರುದ್ಧ ಆಕ್ರೋಶ : ಕ್ಷಮೆ ಕೇಳಲು ಆಗ್ರಹ

ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ:  ಬಿಜೆಪಿಯವರದು ತಾಲಿಬಾನ್‌ ಸಂಸ್ಕೃತಿ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದರು, ಭಾರತ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ದೊಡ್ಡ ದೇಶ. ಇದು ತಾಲಿಬಾನ್‌ ಆಗುತ್ತದಾ, ತಾಲಿಬಾನ್‌ಗೂ ನಮಗೂ ಏನು ಸಂಬಂಧ. ಇಂತಹ ಹೇಳಿಕೆ ನೀಡುವುದು ಬಾಲಿಶವಾದುದು ಎಂದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಆತುರವಾಗಿ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಎಲ್ಲರಿಗೂ ಒಳ್ಳೆಯದಾಗಲಿದೆಂದರು.

ಬಾಗೇಪಲ್ಲಿ, ಗುಡಿಬಂಡೆ ತಾಲೂಕಿಗೆ ಸಂಸದರ ಅನುದಾನದಡಿ ಅತಿ ಹೆಚ್ಚು ಅನುದಾನ ನೀಡಿದ್ದೇನೆ. ಅಲ್ಲದೇ ಬಾಗೇಪಲ್ಲಿ ಕ್ಷೇತ್ರಕ್ಕೆ 40 ಆದರ್ಶ ಗ್ರಾಮ ನೀಡಿದ್ದೇನೆ. ಇತ್ತೀಚೆಗೆ ನಾಲ್ಕು ಕೋಟಿ ವೆಚ್ಚದ ಪಿಎಚ್‌ಎಸ್‌ ಮಂಜೂರಾಯಿತು. ಸುಬ್ಬಾರೆಡ್ಡಿ ಅವರ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದೇನೆ ಎಂಬುದು ಸರಿಯಲ್ಲ ಎಂದರು.

ಸಚಿವ ಎಂಟಿಬಿ - ಶರತ್‌ ಬಚ್ಚೇಗೌಡ ವಾರ್‌ : 'ದರ್ಪದಿಂದ ಏನು ಆಗಲ್ಲ'

ಪರಿಸರ ರಕ್ಚಣೆಯನ್ನೇ ಮರೆತಿದ್ದೇವೆ 

ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಪರಿಣಾಮ ಉದ್ಯೋಗ್ಯ ಆಧಾರಿತ ಶಿಕ್ಷಣ ಪಡೆಯುವ ಭರದಲ್ಲಿ ಜನರ ಆಯ್ಕೆಗಳು ಬದಲಾಗಿರುವುದರ ಜೊತೆಗೆ ನಮ್ಮ ಪುರಾತನವಾದ ಪ್ರಾಕೃತಿಯ ಸಂಸ್ಕೃತಿ ಮರೆಯುತ್ತಿರುವುದರಿಂದ ಜನರಲ್ಲಿ ಪರಿಸರ ಸಂರಕ್ಷಣೆ ಕಲ್ಪನೆಯೆ ಕಡಿಮೆ ಆಗುತ್ತಿದೆಯೆಂದು ಸಂಸದ ಬಿ.ಎನ್‌.ಬಚ್ಚೇಗೌಡ ಕಳವಳ ವ್ಯಕ್ತಪಡಿಸಿದರು.

ನಗರದ ಹೊರ ವಲಯದ ನಂದಿ ಸಮೀಪ ಇರುವ ಡಿಸ್ಕವರಿ ವಿಲೇಜ್‌ನಲ್ಲಿ (Discovery Village) ಭಾನುವಾರ ರಾಜ್ಯ ಅರಣ್ಯ ಇಲಾಖೆ ಹಾಗೂ ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿ ಹಮ್ಮಿಕೊಂಡಿದ್ದ ಪ್ರಥಮ ಪವಿತ್ರ ವೃಕ್ಷಗಳ ಹಬ್ಬವಾದ ಕರ್ನಾಟಕ ವೃಕ್ಷೋತ್ಸವ-2021ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉದ್ಯೋಗ ಹಾಗೂ ಉದ್ಯಮಕ್ಕೆ ಬೇಕಾದ ಶಿಕ್ಷಣ ದೊರೆಯುತ್ತಿದ್ದು ಪರಿಸರ ಬಗ್ಗೆ ಜನ ಸಮುದಾಯಕ್ಕೆ ಕಲ್ಪನೆಯೆ ಇಲ್ಲದಂತಾಗಿದೆ ಎಂದರು.

ಗಿಡ,ಮರಗಳಲ್ಲಿ ಔಷಧೀಯ ಗುಣ

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅಸ್ತಿತ್ವಕ್ಕೆ ಬಂದು ಸಾಕಷ್ಟುಪರಿಸರವನ್ನು ಉಳಿಸುವ ಕೆಲಸ ಆಗಿದೆ. ಯಾವ ಭಾಗಕ್ಕೆ ಯಾವ ರೀತಿ ಮರ, ಗಿಡಗಳನ್ನು ಬೆಳೆಸಬೇಕೆಂಬ ಸೂಕ್ತ ನೀಲನಕ್ಷೆ ಸಿದ್ದಗೊಳ್ಳಬೇಕಿದೆ. ಪರಿಸರ ಸಂರಕ್ಷಣೆಗೆ ಪೂರಕವಾದ ಕೃಷಿ ಬಗ್ಗೆ ಯುವ ಜನರಲ್ಲಿ ಅಭಿರುಚಿ ಹೆಚ್ಚಾಗಬೇಕು. ನಮ್ಮಲ್ಲಿನ ಅನೇಕ ಮರಗಳಿಗೆ ಔಷದೀಯ ಗುಣಗಳು ಇವೆ. ಆದರೆ ಅವುಗಳ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ ಎಂದರು.

click me!