ಸಿಂಧನೂರು: ಗ್ರಾಹಕರಂತೆ ಬಂದ ಬುರ್ಖಾದಾರಿ ಮಹಿಳೆಯರು ಬಟ್ಟೆ ಕದ್ದು ಎಸ್ಕೇಪ್, ಸಿಸಿಟಿವಿಯಲ್ಲಿ ಬಯಲಾಯ್ತು ಕಳ್ಳಿಯರ ಕೈಚಳಕ!

Published : Apr 19, 2026, 12:14 PM IST
Sindhanur Burqa clad women pose as customers to steal clothes theft caught on CCTV raichur

ಸಾರಾಂಶ

ರಾಯಚೂರು ಜಿಲ್ಲೆಯ ಸಿಂಧನೂರಿನ ಬಟ್ಟೆ ಅಂಗಡಿಯೊಂದರಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಕಳ್ಳತನ ಮಾಡಿದ್ದಾರೆ. ಒಬ್ಬಳು ಮಾಲೀಕರ ಗಮನ ಬೇರೆಡೆ ಸೆಳೆದರೆ, ಮತ್ತೊಬ್ಬಳು ಬಟ್ಟೆಗಳ ಚೀಲವನ್ನು ಕದ್ದು ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಯಚೂರು (ಏ.19): ಅವರು ನೋಡೋದಕ್ಕೆ ಅಪ್ಪಟ ಗ್ರಾಹಕರಂತಿದ್ದರು. ಬಟ್ಟೆ ಖರೀದಿ ಮಾಡ್ಕೊಂಡು ಹೋಗೋರು ರೀತಿ ಅಂಗಡಿಯೊಳಗೆ ಬಂದಿದ್ದಾರೆ. ಆದರೆ ಬುರ್ಖಾಧಾರಿ ಕಳ್ಳಿಯರ ಪ್ಲಾನ್ ಬೇರೆಯೇ ಇತ್ತು. ಶಾಪಿಂಗ್ ಮಾಡುವ ಆಸೆಯಲ್ಲ, ಬದಲಿಗೆ ಮಾಲೀಕನ ಕಣ್ಣಿಗೆ ಮಣ್ಣೆರಚಿ ಕೈಚಳಕ ತೋರುವ ಕ್ರಿಮಿನಲ್ ಪ್ಲಾನ್!

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಇಬ್ಬರು ಖತರ್ನಾಕ್ ಮಹಿಳೆಯರು ನಡೆಸಿದ ಈ 'ಹೈಟೆಕ್' ಕಳ್ಳತನ ಈಗ ಇಡೀ ನಗರದ ವ್ಯಾಪಾರಿಗಳನ್ನು ಬೆಚ್ಚಿಬೀಳಿಸಿದೆ. ಬಟ್ಟೆ ಅಂಗಡಿ ಮಾಲೀಕರು ಸ್ವಲ್ಪ ಯಾಮಾರಿದ್ರೂ ಸಾಕು, ಕಣ್ಣು ಮಿಟುಕಿಸುವುದರೊಳಗೆ ಮಾಲು ಮಾಯವಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಸಿಂಧನೂರು ಬಟ್ಟೆ ಅಂಗಡಿಗೆ ಬಂದವರು ಮಾಡಿದ್ದೇನು?

ಸಿಂಧನೂರಿನ ಆ ಬಟ್ಟೆ ಅಂಗಡಿಗೆ ಇಬ್ಬರು ಬುರ್ಖಾಧಾರಿ ಮಹಿಳೆಯರು ಪ್ರವೇಶಿಸುತ್ತಾರೆ. ಒಬ್ಬಳು ಬಟ್ಟೆಗಳನ್ನು ನೋಡುತ್ತಾ ಮಾಲೀಕನ ಗಮನ ಬೇರೆಡೆ ಸೆಳೆಯುತ್ತಿದ್ದರೆ, ಮತ್ತೊಬ್ಬಳು ತನ್ನ ತನ್ನ ಖತರ್ನಾಕ್ ಬುದ್ಧಿ ಪ್ರಯೋಗಕ್ಕಿಳಿಸ್ತಾಳೆ. ಈ ಗ್ಯಾಂಗ್ ಯಾವ ರೀತಿ ಟ್ರೈನ್ಡ್ ಆಗಿದೆ ಎಂದರೆ ಮಾಲೀಕ ಮುಂದೆಯೇ ಇದ್ರೂ ರಾಜಾರೋಷವಾಗಿ ಬಟ್ಟೆ ಕಳ್ಳತನ ನಡೆದಿದೆ.

ಸಿಸಿಟಿವಿಯಲ್ಲಿ ಬಯಲಾಯ್ತು ಬುರ್ಖಾಧಾರಿ ಅಸಲಿ ಆಟ!

ಈ ಖತರ್ನಾಕ್ ಮಹಿಳೆಯರ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ನಿಚ್ಚಳವಾಗಿ ಸೆರೆಯಾಗಿದೆ. ಒಬ್ಬ ಮಹಿಳೆ ಬಟ್ಟೆ ಚೀಲವನ್ನು ತೆಗೆದು ಕಳ್ಳತನಕ್ಕೆ ಬೇಕಾದ ಪ್ಲಾಟ್‌ಫಾರ್ಮ್ ರೆಡಿ ಮಾಡಿಕೊಟ್ಟರೆ, ಮತ್ತೊಬ್ಬಳು ಆ ಚೀಲವನ್ನು ತನ್ನ ಕಾಲಿನ ಸಂದುಗಳಲ್ಲಿ ಅಡಗಿಸಿಕೊಂಡು, ಯಾರಿಗೂ ಅನುಮಾನ ಬಾರದಂತತೆ ಅಂಗಡಿಯಿಂದ ಎಸ್ಕೇಪ್ ಆಗಿದ್ದಾಳೆ. ನಂತರ ಹಿಂದೆಯೇ ನಡೆದು ಎಸ್ಕೇಪ್ ಆಗಿರೋ ಇನ್ನೊಬ್ಬ ಕಳ್ಳಿ.

ಮಾಲೀಕ ಎಚ್ಚರಗೊಳ್ಳುವಷ್ಟರಲ್ಲಿ ಮಾಲು ಮಾಯ!

ಖತರ್ನಾಕ್ ಕಳ್ಳಿಯರು ಬಂದಿದ್ದೇ ದೋಚಲು ಅಂತಾ ಮಾಲೀಕನಿಗೆ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು. ಹೋದ ಮೇಲೆ ಬಟ್ಟೆಗಳ ಲೆಕ್ಕ ನೋಡಿದಾಗ ಲೆಕ್ಕ ತಪ್ಪಿ ಶಾಕ್ ಆಗಿದೆ. ಗಾಬರಿಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಮಹಿಳೆಯರ ಅಸಲಿ ಮುಖವಾಡ ಬಯಲಾಗಿದೆ. ಕಾಲಿನಲ್ಲೇ ಬಟ್ಟೆ ಚೀಲ ಇಟ್ಟುಕೊಂಡು ಹೋಗಿರುವ ದೃಶ್ಯ ಕಂಡು ಅಂಗಡಿ ಸಿಬ್ಬಂದಿ ದಂಗಾಗಿದ್ದಾರೆ.

ಸದ್ಯ ಸಿಂಧನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಖತರ್ನಾಕ್ ಕಳ್ಳಿಯರಿಗೆ ಬಲೆ ಬೀಸಿದ್ದಾರೆ.

ಅಂಗಡಿ ಮಾಲೀಕರೇ ಎಚ್ಚರ: ಬುರ್ಖಾಧಾರಿಗಳಾಗಲಿ ಅಥವಾ ಸಾಮಾನ್ಯ ಗ್ರಾಹಕರೇ ಆಗಲಿ, ಅಂಗಡಿಗೆ ಬಂದಾಗ ಅವರ ಚಲನವಲನದ ಮೇಲೆ ಕಣ್ಣಿರಲಿ. ನಿಮ್ಮ ಮೈಮರೆವು ಕಳ್ಳರಿಗೆ ಹಬ್ಬವಾಗಬಹುದು!

PREV
Read more Articles on
click me!

Recommended Stories

ಎರಡು ಕಾರ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನಜ್ಜುಗುಜ್ಜು
ಕಾರ್‌, ಸರ್ಕಾರಿ ಬಸ್, ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ: ರಸ್ತೆಯಲ್ಲಿ ಹೆಣಗಳು ಚೆಲ್ಲಾಪಿಲ್ಲಿ