ಮೈಸೂರು: ಚಿರತೆಯಿಂದ ಅತ್ತೆಯನ್ನ ರಕ್ಷಿಸಿದ ಸೊಸೆಗೆ ಕಿತ್ತೂರು ಚೆನ್ನಮ್ಮ ಸಾಹಸ ಪ್ರಶಸ್ತಿ?

Kannadaprabha News   | Kannada Prabha
Published : Apr 19, 2026, 04:33 AM IST
Mysuru Kittur Chennamma Bravery Award for daughter in law who saved mother in law from a leopard

ಸಾರಾಂಶ

ಮೈಸೂರಿನ ಸಿದ್ಧಾರ್ಥನಗರದಲ್ಲಿ ಮಂಚದಡಿ ಚಿರತೆ ಅಡಗಿದ್ದಾಗ, ಸೊಸೆ ಸುಜಾತಾ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನ ರಕ್ಷಿಸಿದ ಈ ಸಾಹಸಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಮೆಚ್ಚುಗೆ ವ್ಯಕ್ತಪಡಿಸಿ, ಸುಜಾತಾ ಅವರ ಹೆಸರನ್ನು ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಪರಿಗಣಿಸಲು ಸೂಚಿಸಿದ್ದಾರೆ.

ಮೈಸೂರು (ಏ.19): ನಗರದ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಮಂಚದಡಿ ಚಿರತೆ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ ಹೊರಗೆ ಕರೆ ತಂದ ಸೊಸೆ ಸುಜಾತಾ ಅವರ ಸಾಹಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 

ಈ ಘಟನೆ ಆಕಸ್ಮಿಕವಾದರೂ, ಅದು ಮಹಿಳೆಯೊಬ್ಬರ ಅಪ್ರತಿಮ ಧೈರ್ಯ ಮತ್ತು ಅತ್ತೆ-ಸೊಸೆಯ ಪವಿತ್ರ ಬಾಂಧವ್ಯಕ್ಕೆ ಹಿಡಿದ ಕೈಗನ್ನಡಿ. ಮಂಚದಡಿ ಚಿರತೆ ಅಡಗಿರುವುದು ತಿಳಿಯುತ್ತಿದ್ದಂತೆಯೇ, ಪ್ರಾಣದ ಹಂಗು ತೊರೆದು ಕೊಠಡಿಗೆ ನುಗ್ಗಿ, ವಯಸ್ಸಾದ ಅತ್ತೆಯನ್ನು ಅಪ್ಪಿಕೊಂಡು ಸುರಕ್ಷಿತವಾಗಿ ಹೊರಗೆ ಕರೆತಂದ ಸುಜಾತಾ ಅವರ ಸಾಹಸ ನಿಜಕ್ಕೂ ರೋಮಾಂಚನಕಾರಿ ಎಂದು ಅವರು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ಮನೆಗೆ ನುಗ್ಗಿದ ಚಿರತೆ ಎರಡು ಗಂಟೆ ಕಾಲ ಅಜ್ಜಿ ಮಲಗಿದ್ದ ಮಂಚದ ಕೆಳಗೆ ವಿಶ್ರಾಂತಿ!

ಅತ್ತೆ- ಸೊಸೆಯ ಸಂಬಂಧದ ಬಗ್ಗೆ ಸಮಾಜದಲ್ಲಿರುವ ಹಳೆಯ ಕಲ್ಪನೆಗಳನ್ನು ಅಳಿಸಿ, ಸುಜಾತಾ ಅವರು ಇಂದು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಸುಜಾತಾ ಅವರ ಈ ಅಸಾಧಾರಣ ಶೌರ್ಯ, ಸಾಹಸವನ್ನು ಗೌರವಿಸಲು ಮುಂದಿನ ವರ್ಷದ ಕಿತ್ತೂರು ರಾಣಿ ಚೆನ್ನಮ್ಮ ಸಾಹಸ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಲು ನಮ್ಮ ಇಲಾಖೆಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ವಿಶ್ವಾಸ
ರಸ್ತೆ ದುರಂತದಲ್ಲಿ ಮೃತ ಏಕೈಕ ಪುತ್ರನ ಕಣ್ಣು, ಕಿಡ್ನಿ ದಾನ ಮಾಡಿದ ಕೊಡಗಿನ ಪೋಷಕರು