ಹುಣಸೂರು ಪ್ರಚಾರ: ಸಿದ್ದರಾಮಯ್ಯ ಸಮಯ ಪ್ರಜ್ಞೆ

By Kannadaprabha NewsFirst Published Dec 4, 2019, 10:09 AM IST
Highlights

ಹುಣಸೂರು ನಗರದಲ್ಲಿ ಎರಡೂ ಪಕ್ಷಗಳ ಮೆರವಣಿಗೆಯಿಂದಾಗಿ ಕಲ್ಕುಣಿಕೆ ವೃತ್ತದಲ್ಲಿ ಸಾಕಷ್ಟುಮಂದಿ ಜಮಾಯಿಸಿದ್ದರಿಂದ ಹುಣಸೂರು-ಮಡಿಕೇರಿ ಹೆದ್ದಾರಿಯಲ್ಲಿ ಎರಡು ಗಂಟೆ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು, ಪೊಲೀಸರು ಸಂಚಾರ ನಿಯಂತ್ರಿಸಲು ಪರದಾಡಿದ್ದಾರೆ.

ಮೈಸೂರು(ಡಿ.04): ನಗರದಲ್ಲಿ ಎರಡೂ ಪಕ್ಷಗಳ ಮೆರವಣಿಗೆಯಿಂದಾಗಿ ಕಲ್ಕುಣಿಕೆ ವೃತ್ತದಲ್ಲಿ ಸಾಕಷ್ಟುಮಂದಿ ಜಮಾಯಿಸಿದ್ದರಿಂದ ಹುಣಸೂರು-ಮಡಿಕೇರಿ ಹೆದ್ದಾರಿಯಲ್ಲಿ ಎರಡು ಗಂಟೆ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು, ಪೊಲೀಸರು ಸಂಚಾರ ನಿಯಂತ್ರಿಸಲು ಪರದಾಡಿದ್ದಾರೆ.

ನಿಗದಿಯಂತೆ ರಂಗನಾಥ ಬಡಾವಣೆಯಲ್ಲಿ ಕಾಂಗ್ರೆಸ್‌ ಮೆರವಣಿಗೆ ಅಂತ್ಯಗೊಳ್ಳಬೇಕಿತ್ತು. ಇದೇ ವೇಳೆ ರಂಗನಾಥ ಬಡಾವಣೆಯಿಂದ ಬಿಜೆಪಿ ಮೆರವಣಿಗೆ ಆರಂಭಗೊಂಡಿತ್ತು. ಕಾಂಗ್ರೆಸ್‌ನ ಮೆರವಣಿಗೆ ಕಲ್ಕುಣಿಕೆ ವೃತ್ತದವರೆಗೆ ಆಗಮಿಸಿತ್ತು.

ಪೊಲೀಸ್‌ ವ್ಯಾನ್‌, ಆಂಬ್ಯಲೆನ್ಸ್‌ನಲ್ಲಿ BJP ದುಡ್ಡು ಸಾಗಣೆ: ಸಿದ್ದು

ಕಲ್ಕುಣಿಕೆ ಬಡಾವಣೆ ಒಳಗೆ ಹಾಯ್ದು ಹೋಗಬೇಕಿತ್ತು, ಅಷ್ಟರಲ್ಲಿ ದೂರದಿಂದಲೇ ಬಿಜೆಪಿ ಮೆರವಣಿಗೆಯನ್ನು ಗಮನಿಸಿದ ಸಿದ್ದರಾಮಯ್ಯನವರು ಆಕಡೆಯಿಂದ ಮೆರವಣಿಗೆ ಬರುತ್ತಿದ್ದು, ಇಲ್ಲಿಯೇ ಮೆರವಣಿಗೆ ಅಂತ್ಯಗೊಳಿಸೋಣವೆಂದು ಬಹಿರಂಗವಾಗಿಯೇ ಹೇಳಿದ್ದನ್ನು ಕಾರ್ಯಕರ್ತರು ಹಠ ಹಿಡಿದರಾದರೂ ಬೇಡವೆಂದು ಸಮಯ ಪ್ರಜ್ಞೆ ಮೆರೆದು, ವಾಹನದಿಂದಿಳಿದು ಮುಂದಿನ ಹಳ್ಳಿಕಡೆಗೆ ಪ್ರಯಾಣಿಸಿದರು. ಇದರಿಂದ ಸಂಭವಿಸಬಹುದಾಗಿದ್ದ ಘರ್ಷಣೆ ತಪ್ಪಿದ್ದರಿಂದ ಪೊಲೀಸರು ನಿಟ್ಟುಸಿರು ಬಿಟ್ಟರು.

ಮುಂಬೈ ದುಡ್ಡು, ಕಾಂಗ್ರೆಸ್‌ಗೆ ವೋಟು: ಸಿದ್ದರಾಮಯ್ಯ

click me!