ಎದೆಯಲ್ಲಿಡ್ಕೊಂಡಿದ್ದೀನಿ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕಿದ ಎಂಟಿಬಿ: ಸಿದ್ದು ಟಾಂಗ್

Published : Nov 16, 2019, 03:25 PM ISTUpdated : Nov 16, 2019, 03:27 PM IST
ಎದೆಯಲ್ಲಿಡ್ಕೊಂಡಿದ್ದೀನಿ ಎನ್ನುತ್ತಲೇ ಬೆನ್ನಿಗೆ ಚೂರಿ ಹಾಕಿದ ಎಂಟಿಬಿ: ಸಿದ್ದು ಟಾಂಗ್

ಸಾರಾಂಶ

ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನುತ್ತಿದ್ದ ಎಎಂಟಿಬಿ ನಾಗರಾಜ್ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆ(ನ.16): ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎನ್ನುತ್ತಿದ್ದ ಎಎಂಟಿಬಿ ನಾಗರಾಜ್ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಹೊಸಕೋಟೆಯಲ್ಲಿ ತೆರೆದ ವಾಹನದಲ್ಲಿ ರ‍್ಯಾಲಿ ನಡೆಸಿ ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿ ಎಂಟಿಬಿ ಬಿಜೆಪಿಗೆ ಹೋಗಿದ್ದಾರೆ, ಅವನೊಬ್ಬ ದ್ರೋಹಿ. ಮಾತು ಎತ್ತಿದರೆ ಸಾಕು ನನ್ನ ಎದೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಅಂತಿದ್ರು, ಆದ್ರೆ ಇವಾಗ ಎದೆಯಲ್ಲಿ ಯಡಿಯೂರಪ್ಪ ಅವರನ್ನ ಇಟ್ಟುಕೊಂಡವ್ನಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

ಎಂಟಿಬಿಯನ್ನ ಸಚಿವರನ್ನಾಗಿ ಮಾಡಿದೆ. ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದೆ. ಕೇಳಿದಾಗ ಎಲ್ಲ ಅನುದಾನವನ್ನ ಕೊಟ್ಟೆ. ಆದ್ರೆ ನನ್ನ ಬಗ್ಗೆನೇ ಮಾತಾಡ್ತಾನೆ. ನೀವು ಸ್ವಾಭಿಮಾನಿಗಳಾದ್ರೆ ಎಂಟಿಬಿಯನ್ನ ಸೋಲಿಸಿ ಎಂದ ಸಿದ್ದು ಜನರಲ್ಲಿ ಕೇಳಿಕೊಂಡಿದ್ದಾರೆ.

ಈ ಭಾರಿ ನನ್ನ ಪ್ರಕಾರ ಎಂಟಿಬಿ ಮೂರನೇ ಸ್ಥಾನಕ್ಕೆ ಹೋಗ್ತಾನೆ, ಎರಡನೇ ಸ್ಥಾನ ಪಕ್ಷೇತರ ಅಭ್ಯರ್ಥಿ ಪಡೆಯಬಹುದು. ಪಕ್ಷಕ್ಕೆ ದ್ರೋಹ ಮಾಡಿದ ಅನರ್ಹರು ಯಾರು ಗೆಲ್ಲೋದಿಲ್ಲ ಎಂದು ಸಿದ್ದರಾಮಯ್ಯ ಎಂಟಿಬಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ