ಸಿದ್ದು ಪುತ್ರ ಶಾಸಕ ಡಾ. ಯತೀಂದ್ರಗೂ ಕೊರೋನಾ ಪಾಸಿಟಿವ್

Published : Aug 07, 2020, 05:34 PM ISTUpdated : Aug 07, 2020, 05:39 PM IST
ಸಿದ್ದು ಪುತ್ರ ಶಾಸಕ ಡಾ. ಯತೀಂದ್ರಗೂ ಕೊರೋನಾ ಪಾಸಿಟಿವ್

ಸಾರಾಂಶ

ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರಿಗೂ ಕೊರೋನಾ ಸೋಂಕು/ ಟ್ವೀಟ್ ಮೂಲಕ ವಿಚಾರ ತಿಳಿಸಿದ ವರುಣಾ ಶಾಸಕ/ ನನ್ನ ಸಂಪರ್ಕದಲ್ಲಿದ್ದವರು ಟೆಸ್ಟ್ ಮಾಡಿಸಿಕೊಳ್ಳಿ

ಬೆಂಗಳೂರು(ಆ.  07)  ಕೊರೋನಾ ಸೋಂಕಿಗೆ ತುತ್ತಾಗಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ ಸಿದ್ದರಾಮಯ್ಯ ಪುತ್ರ, ಶಾಸಕ ಡಾ. ಯತೀಂದ್ರ ಅವರಿಗೂ ಕೊರೋನಾ ದೃಢವಾಗಿದೆ.

ನನ್ನ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಕೋರುತ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.

ಕೊರೋನಾ ದೃಢಪಟ್ಟ ಸುದ್ದಿ ಕೇಳಿ ಕಾಲುವೆಗೆ ಹಾರಿದ ಮಹಿಳೆ

ಆಗಸ್ಟ್  4  ರಂದು ಸಿದ್ದರಾಮಯ್ಯ ಅವರಿಗೆ ಕೊರೋನಾ ದೃಢವಾಗಿತ್ತು. ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರೂ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಸಿದ್ದರಾಮಯ್ಯಗೆ ಕೊರೋನಾ ಕಾರಣದಿಂದ ಅವರ ಕುಟುಂಬದರಿಗೆ ಟೆಸ್ಟ್ ಮಾಡಿಸಲಾಗಿತ್ತು.  ಇದೀಗ ಕೊರೋನಾ ವರದಿ  ಬಂದಿದ್ದು ಯತೀಂದ್ರ ಅವರು ಚಿಕಿತ್ಸೆ ಪಡೆದುಕೊಳ್ಳಬೇಕಾಗಿದೆ.

 

 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್