ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ದೇಶ ಒಡೆಯುತ್ತಿದೆ: ಸಿದ್ದರಾಮಯ್ಯ

By Suvarna NewsFirst Published Jan 30, 2021, 2:29 PM IST
Highlights

ಗೋಮಾತೆ ಅಂತಾರೆ ಇಲ್ಲಿ‌ ಬೀಫ್ ತಿನ್ನಬಾರದಂತೆ, ನ್ಯೂಜಿಲೆಂಡ್, ಆಸ್ಟ್ರೇಲಿಯಾದಿಂದ ಬರೋ ಬೀಫ್ ತಿನ್ನಿ ಅಂತ ಹೇಳ್ತಾರೆ. ಅದು ಗೋಮಾತೆ ಅಲ್ವಾ?, ಗೋವಾ, ಕೇರಳದ್ದು ಗೋಮಾತೆಯಲ್ವಾ?,ಇದರಿಂದ ನಮ್ಮ ರೈತರು ನಿರುದ್ಯೋಗಿಗಳಾಗುತ್ತಾರೆ ಎಂದ ಸಿದ್ದರಾಮಯ್ಯ

ಬೆಂಗಳೂರು(ಜ.30): ನಾನು ಭಾಷಣ ಮಾಡಲು ಬಂದಿಲ್ಲ. ನನ್ನ ಸ್ನೇಹಿತರು ಕರೆದಿದ್ದರು ಬೆಂಬಲ ವ್ಯಕ್ತಪಡಿಸಲು‌ ಬಂದಿದ್ದೇನೆ. ಇವತ್ತು ಹುತಾತ್ಮರ ದಿನಾಚರಣೆಯಾಗಿದೆ. ಮಹಾತ್ಮ ಗಾಂಧಿ ಹತ್ಯೆಯಾದ ದಿನವನ್ನು ನಾವು ಹುತಾತ್ಮ ದಿನವನ್ನಾಗಿ ಆಚರಿಸುತ್ತೇವೆ. ಮಹಾತ್ಮ ಗಾಂಧಿ ಯಾರ ವಿರುದ್ಧ ಹೋರಾಟ ಮಾಡಿದ್ರು ಅವ್ರ ಕೈಯಿಂದ ಹತ್ಯೆಯಾಗಲಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ್ದ ಗಾಂಧೀಜಿ ಅವರನ್ನ ಬ್ರಿಟಿಷರು ಕೊಂದಿಲ್ಲ. ಹತ್ಯೆಯಾಗೋದಕ್ಕೆ ಮೊದಲು ಗಾಂಧೀಜಿ ಉಪವಾಸ ಸತ್ಯಾಗ್ರಹವನ್ನು ಮಾಡಿದ್ದರು. ಗಾಂಧೀಜಿಯನ್ನ ಕೊಂದಿದ್ದು ಮತಾಂಧ ನಾತೂರಾಮ್ ಗೂಡ್ಸೆ ಮತ್ತು ಅವರ ಸ್ನೇಹಿತರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಗಾಂಧೀಜಿ ಸ್ವಾತಂತ್ರ್ಯ ಚಳುವಳಿ ಜೊತೆಯಲ್ಲೇ ಬೇರೆ ವರ್ಗದ ಜನರ ಹೋರಾಟಕ್ಕೆ ಅಷ್ಟೇ ಪ್ರಾಮುಖ್ಯತೆ ಕೊಟ್ಟಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಯಾರಾದ್ರು ಒಬ್ಬರು ಬಿಜೆಪಿಯಲ್ಲಿ ಇದ್ದಾರಾ?, ಸಂವಿಧಾನ ರಚನೆ ನಂತರ ಹುಟ್ಟಿದವರಾಗಿದ್ದಾರೆ. ಇವರು ನಮಗೆ ದೇಶ ಭಕ್ತಿ ಹೇಳಿ‌ಕೊಡ್ತಾರೆ. ಕೋಮು ಗಲಭೆಯನ್ನು ಸೃಷ್ಟಿಸೋದು ದೇಶ ಭಕ್ತಿನಾ?ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. 

ಮಹಾತ್ಮ ಗಾಂಧೀಜಿ ಹಿಂದೂ ಅಲ್ವಾ?

ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚೋದು ರಾಷ್ಟ್ರ ಭಕ್ತಿನಾ?, ಗಾಂಧೀಜಿಯನ್ನು ಕೊಂದವರು ಇವರಾಗಿದ್ದಾರೆ. ಇವರು ನಮಗೆ ದೇಶ ಭಕ್ತಿ ಹೇಳಿ ಕೊಡಬೇಕಾ? ಎಲ್ಲ ಜಾತಿ, ಧರ್ಮಗಳಿರುವ ದೇಶ ಇದು. ಹಿಂದುತ್ವದ ಹೆಸರಿನಲ್ಲಿ ದೇಶವನ್ನ ಒಡೆಯುತ್ತಿದ್ದಾರೆ. ಮಹಾತ್ಮ ಗಾಂಧೀಜಿ ಹಿಂದೂ ಅಲ್ವಾ? ನಾವು ಭಾರತೀಯರು. ಆಗಲೇ ಕಸಾಯಿ ಖಾನೆಗಳಿದ್ದವು. ಹಾಲು ಕರೆಯದ ವ್ಯವಸಾಯಕ್ಕೆ ಬಾರದ ಜಾನುವಾರು ಮಾರಬಹುದು ಅಂತ ಅವತ್ತೇ ಕಾನೂನಿತ್ತು. ಹೆಣ್ಣು ಕರುಗಳೇನೊ ಹಾಲು‌ ಕೊಡುತ್ತೆ ಗಂಡು ಕರುಗಳು? ಏನು ಕೊಡುತ್ತೆ?, ಮಾರಾಟ ಮಾಡಲು ಅವಕಾಶ ಇಲ್ಲ ಅಂದ್ರೆ ಏನು ಮಾಡಬೇಕು. ರೈತರು ಹೈನುಗಾರಿಕೆಯನ್ನೇ ಬಿಡತ್ತಾರೆ ಎಂದು ಹೇಳಿದ್ದಾರೆ. 
ಗೋಮಾತೆ ಅಂತಾರೆ ಇಲ್ಲಿ‌ ಬೀಫ್ ತಿನ್ನಬಾರದಂತೆ, ನ್ಯೂಜಿಲೆಂಡ್ ಆಸ್ಟ್ರೇಲಿಯಾದಿಂದ ಬರೋ ಬೀಫ್ ತಿನ್ನಿ ಅಂತ ಹೇಳ್ತಾರೆ. ಅದು ಗೋಮಾತೆ ಅಲ್ವಾ? ಗೋವಾ, ಕೇರಳದ್ದು ಗೋಮಾತೆಯಲ್ವಾ? ಏನು ವಾದ ಇವರದ್ದು, ರೈತರನ್ನ ಹಾಳು ಮಾಡುವಂತದ್ದು‌ ಇದೆಲ್ಲಾ. ಇದರಿಂದ ನಮ್ಮ ರೈತರು ನಿರುದ್ಯೋಗಿಗಳಾಗುತ್ತಾರೆ ಎಂದಿದ್ದಾರೆ. 

'ಪ್ರಧಾನಿ ಮೋದಿಯವರು ಅದಾನಿ, ಅಂಬಾನಿ ಗುಲಾಮರಾಗಿದ್ದಾರೆ'

ಪ್ರಧಾನಿ ಮೋದಿ ಕಾರ್ಪೊರೇಟ್ ಕಂಪನಿಯವರು ಏನ್ ಹೇಳ್ತಾರೆ ಅದನ್ನ ಮಾಡ್ತಾರೆ. ಜಿಡಿಪಿ ಮುಂದಿನ‌ ವರ್ಷಕ್ಕೆ ಶೇ. ‌11ಕ್ಕೆ ಹೋಗ್ತಾರಂತೆ, ಎಂತಾ ಲೆಕ್ಕ‌ ಕೊಡ್ತಾರೆ ನೋಡ್ತಿರಿ. ಮನಮೋಹನ್ ಸಿಂಗ್ ಕಾಲದಲ್ಲಿ GDP ಶೇ. 11 ವರೆಗೆ ಹೋಗಿತ್ತು, ಇವತ್ತು 4ಕ್ಕೆ ಬಂದಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್, ಸಬ್ ಕಾ ವಿನಾಶ್ ಆಗುತ್ತದೆ. ಹೇಗೆ ಜನರನ್ನ ದಾರಿ ತಪ್ಪಿಸಿ ಹಾಳು ಮಾಡ್ತಿದ್ದಾರೆ ನೋಡಿ. ಇಂದು ಜಿಡಿಪಿ ನೆಲಕಚ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 

ಕೊರೋನಾ ಬಂದಾಗ ದೀಪ‌ ಹಚ್ಚಿ, ಚಪ್ಪಾಳೆ ತಟ್ಟಿ ಅಂತ ಹೇಳಿದ ಪ್ರಧಾನಿಯನ್ನ ಜಗತ್ತಿನಲ್ಲಿ ಎಲ್ಲಾದ್ರು‌ ನೋಡಿದ್ದೀರಾ? ಎಲ್ಲರೂ ದೀಪ‌ ಹಚ್ಚಿದ್ದೇ ಹಚ್ಚಿದ್ದು, ಹೇಗೆ ಮೂರ್ಖರನ್ನಾಗಿ ಮಾಡ್ತಾರೆ ನೋಡಿ, ನಮ್ಮ ಪಾರ್ಟಿಯಲ್ಲೂ ಕೆಲವರು ಹಚ್ಚಿದ್ರು, ಪ್ರಧಾನಿ ಎಂತಾ ಸಲಹೆ ಕೊಟ್ಟಿದ್ದಾರೆ ನೋಡ್ರಿ ಎಂದು ಪ್ರಧಾನಿ ಮೋದಿ ನಡೆಯನ್ನ ಟೀಕಿಸಿದ್ದಾರೆ. 

click me!