'ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧೆ ಸಾಧ್ಯತೆ'

By Kannadaprabha News  |  First Published Apr 5, 2021, 11:46 AM IST

ಚಿಕ್ಕನಾಯಕನಹಳ್ಳಿಯಿಂದ ಸಿದ್ದು ಸ್ಪರ್ಧೆ ಸಾಧ್ಯತೆ| ಸಿದ್ದರಾಮಯ್ಯ ಬಂದರೆ ಕೇವಲ ತುಮಕೂರು ಅಷ್ಟೇ ಅಲ್ಲ, ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲೂ ಕಾಂಗ್ರೆಸ್‌ ಬಲಗೊಳ್ಳಲಿದೆ| ಹಾಗಾಗಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಲಾಗಿದೆ: ಕೆ.ಎನ್‌.ರಾಜಣ್ಣ| 


ತುಮಕೂರು(ಏ.05): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ಮಾಜಿ ಶಾಸಕ ಕೆ.ಎನ್‌. ರಾಜಣ್ಣ ತಿಳಿಸಿದ್ದಾರೆ. 

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಗ್ಗೆ ನಾನು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡಿದ್ದೇನೆ. ಅವರು ಸಕಾರಾತ್ಮಕಾಗಿ ಸ್ಪಂದಿಸುವ ಸಾಧ್ಯತೆ ಇದೆ ಎಂದರು. ಈಗಲೇ ನಿರ್ಧಾರ ಪ್ರಕಟ ಮಾಡಿದರೆ ಬಾದಾಮಿ ಮತದಾರರು ಬೇಜಾರಾಗುತ್ತಾರೆ. ಹಾಗಾಗಿ ಅವರು ಯಾವ ನಿರ್ಧಾರವನ್ನೂ ಪ್ರಕಟ ಮಾಡುತ್ತಿಲ್ಲ ಎಂದರು. 

Tap to resize

Latest Videos

ವಿನಯ್‌ ಗುರೂಜಿ ದಿಢೀರ್ ಭೇಟಿ : ಆಶೀರ್ವಾದ ಪರಮೇಶ್ವರ್‌

ಸಿದ್ದರಾಮಯ್ಯ ಬಂದರೆ ಕೇವಲ ತುಮಕೂರು ಅಷ್ಟೇ ಅಲ್ಲ, ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲೂ ಕಾಂಗ್ರೆಸ್‌ ಬಲಗೊಳ್ಳಲಿದೆ. ಹಾಗಾಗಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಲಾಗಿದೆ ಎಂದರು. ಹಾಲಿ ಸಚಿವ ಮಾಧುಸ್ವಾಮಿ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

click me!