ಸಿದ್ದರಾಮಯ್ಯ ಅಲೆಮಾರಿ ಎಂಬ ಸತ್ಯ ಒಪ್ಪಿಕೊಳ್ಳಲಾರದೆ ಒದ್ದಾಡುತ್ತಿದ್ದಾರೆ : ಪರಮಾನಂದ

By Kannadaprabha News  |  First Published Apr 6, 2023, 7:19 AM IST

ಇದ್ದದ್ದನ್ನು ಇದ್ದ ಹಾಗೆ ಹೇಳಿರುವ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಸುಮ್ಮನೆ ಮಾತನಾಡಿ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್‌ ನಾಯಕರು, ಸಿದ್ದರಾಮಯ್ಯಅವರು ಅಲೆಮಾರಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾರದೆ ಒದ್ದಾಡುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್‌. ಪರಮಾನಂದ ಟೀಕಿಸಿದ್ದಾರೆ.


  ಮೈಸೂರು :  ಇದ್ದದ್ದನ್ನು ಇದ್ದ ಹಾಗೆ ಹೇಳಿರುವ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಸುಮ್ಮನೆ ಮಾತನಾಡಿ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್‌ ನಾಯಕರು, ಸಿದ್ದರಾಮಯ್ಯಅವರು ಅಲೆಮಾರಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾರದೆ ಒದ್ದಾಡುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್‌. ಪರಮಾನಂದ ಟೀಕಿಸಿದ್ದಾರೆ.

ಛಲವಾದಿ ನಾರಾಯಣ ಸ್ವಾಮಿ ಅವರು ಬಹಳಷ್ಟು ಅನುಭವವಿರುವ ಕಾರಣ ಯಾರದೋ ಕೈಗೊಂಬೆಯಾಗಿಯೋ, ಇನ್ಯಾರದೋ ಪಾತ್ರಧಾರಿಗಾಗಿ ದಲಿತ ಮುಖಂಡರಾಗಿಲ್ಲ. ಹಗಲಿರುಳು ದಲಿತರ ಶ್ರೇಯೋಭಿವೃದ್ಧಿಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಶ್ರಮಿಸುತ್ತಿರುವ ಛಲವಾದಿ ನಾರಾಯಣ ಸ್ವಾಮಿ ಅವರ ಬಗ್ಗೆ ಇನ್ನು ಮುಂದಾದರೂ ಕಾಂಗ್ರೆಸ್‌ನ ಅರೆ ತಿಳುವಳಿಕೆ ಮುಖಂಡರು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

Latest Videos

undefined

ಬಿಜೆಪಿ ಸರ್ಕಾರ ಪ.ಜಾತಿ, ಪ.ಪಂಗಡ ಮೀಸಲಾತಿ ಹೆಚ್ಚಳ ಮತ್ತು ಮೀಸಲಾತಿ ವರ್ಗೀಕರಣದಲ್ಲಿ ಛಲವಾದಿ ನಾರಾಯಣಸ್ವಾಮಿ ಅವರ ಪಾತ್ರವು ಬಹಳ ಪ್ರಮುಖವಾಗಿದೆ. ದಲಿತ ವಿರೋಧಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಪೂರ್ಣಗೊಳಿಸಲಾರದ ಮೈಸೂರಿನ ಅಂಬೇಡ್ಕರ್‌ ಭವನಕ್ಕೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹೆಚ್ಚುವರಿಯಾಗಿ . 16 ಕೋಟಿ ಹಣ ನೀಡಿದ್ದಾರೆ. ಚುನಾವಣೆ ಮುಗಿದ ನಂತರ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದ್ದು ಅಂಬೇಡ್ಕರ್‌ ಭವನ ಕಟ್ಟಡವನ್ನು ನಾವೇ ಪೂರ್ಣಗೊಳಿಸಲಿದ್ದೇವೆ ಎಂದರು.

ಕಾಂಗ್ರೆಸ್‌ ಮುಖಂಡರು ಕುಣಿಯಲಾರದೇ ನೆಲ ಡೊಂಕು ಎಂಬಂತೆ ಗೆಲ್ಲಲಾರದ ಸಿದ್ದರಾಮಯ್ಯ ಅವರಿಗೆ ಒಂದು ಶುಭದ್ರವಾದ ಕ್ಷೇತ್ರ ಹುಡುಕಿಕೊಟ್ಟು ಗೆಲ್ಲಿಸಿಕೊಳ್ಳಲಿ. ನಂತರ ನಮ್ಮ ಪ.ಜಾತಿ ಮೋರ್ಚಾದ ರಾಜ್ಯಾಧ್ಯಕ್ಷ ನಾರಾಯಣ ಸ್ವಾಮಿ ಅವರ ಬಗ್ಗೆ ಮಾತನಾಡಲಿ ಎಂದು ಸವಾಲು ಎಸೆದಿದ್ದಾರೆ.

ಕೈ ಟಿಕೆಟ್‌ಗಾಗಿ ದೇವರ ಮೊರೆ ಹೋದ ಮುಖಂಡ

ಬಾಗಲಕೋಟೆ(ಏ.05): ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾದಾಮಿ ವಿಧಾನಸಭಾ ಮತಕ್ಷೇತ್ರದಿಂದ ಈ ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫರ್ಧೆ ಮಾಡದೇ ವರುಣಾ ಕಡೆಗೆ ಮುಖ ಮಾಡಿರೋ ಬೆನ್ನಲ್ಲೇ ಬಾದಾಮಿಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಗರಿಗೆದರಿದ್ದು, ಇವುಗಳ ಮಧ್ಯೆ ಕಾಂಗ್ರೆಸ್ ಯುವ ಮುಖಂಡ ಮಹೇಶ ಹೊಸಗೌಡರ ಅಭಿಮಾನಿಗಳು ನಿನ್ನೆ(ಮಂಗಳವಾರ) ದೇವಿಗೆ ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿದ ಪ್ರಸಂಗ ನಡೆದಿದೆ. 

ಹೌದು, ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾದಾಮಿಯಲ್ಲಿ ಯುವ ಮುಖಂಡ ಮಹೇಶ ಹೊಸಗೌಡರ ಅವರಿಗೆ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಆಗ್ರಹಿಸಿ ಸುಕ್ಷೇತ್ರ ಐತಿಹಾಸಿಕ ಬಾದಾಮಿಯ ಬನಶಂಕರಿ ದೇವಿಯಲ್ಲಿ ಮೊರೆಯಿಟ್ಟು ಯುವಕರು ಹರಕೆ ಹೊತ್ತು ದೀರ್ಘದಂಡ ನಮಸ್ಕಾರ ಹಾಕಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇಗುಲದಲ್ಲಿ ನಡೆಯಿತು. ಕ್ಷೇತ್ರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಬಂದಿದ್ದ  ಯುವಕರು ಪುಷ್ಕರಣಿಯಿಂದ ನೀರನ್ನ ತಲೆ ಮೇಲೆ ಸುರಿದುಕೊಂಡು ನಂತರ ದೀರ್ಘದಂಡ ನಮಸ್ಕಾರ ಹಾಕುತ್ತಾ ಬನಶಂಕರಿ ದೇವಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ರು. ಸಿದ್ದರಾಮಯ್ಯನವರು ಬಾದಾಮಿಗೆ ಈ ಬಾರಿ ಬರದೇ ಇರುವ ಹಿನ್ನೆಲೆಯಲ್ಲಿ ಯುವ ಮುಖಂಡ ಮಹೇಶ ಹೊಸಗೌಡರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ ಬೆಂಬಲಿಗರು ಹೊಸಗೌಡರ ಪರ ಘೋಷಣೆಗಳನ್ನ ಹಾಕಿದ್ರು. ಇನ್ನು ದೀರ್ಘ ದಂಡ ನಮಸ್ಕಾರ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು ಸಹ ಪಾಲ್ಗೊಂಡಿದ್ರು.

KARNATAKA ASSEMBLY ELECTIONS 2023: ತೇರದಾಳ ಕಾಂಗ್ರೆಸ್‌ ಬಚಾವೋ..ಉಮಾಶ್ರೀ ಹಟಾವೋ..!

click me!