ಸಿದ್ದರಾಮಯ್ಯ ಹಿಂದೂ ವಿರೋಧಿ: ಪ್ರಮೋದ್‌ ಮುತಾಲಿಕ್

By Girish Goudar  |  First Published Oct 18, 2023, 8:20 PM IST

ಸಿದ್ದರಾಮಯ್ಯ ಸರ್ಕಾರ ಹಿಂದೂ ಧರ್ಮದ ವಿರೋಧಿ ಸರ್ಕಾರ, ರಾಗಿ ಗುಡ್ಡದ ಘಟನೆಗೆ ಯಾರು ಕಾರಣ ಎಂದು ತನಿಖೆಯಿಂದ ಹೊರ ಬರಬೇಕಾಗಿದೆ. ಸಿದ್ದರಾಮಯ್ಯ ಕೂಡ ಹಿಂದೂ ವಿರೋಧಿ. ಅವರ ಕುಮ್ಮಕ್ಕಿನಿಂದ ಇಂತಹ ಘಟನೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ 


ವರದಿ: ವರದರಾಜ್ 

ದಾವಣಗೆರೆ(ಅ.18):  ಒಂದು ತಿಂಗಳ‌ ಕಾಲಾವಧಿವರೆಗೆ ಶಿವಮೊಗ್ಗದ ರಾಗಿ ಗುಡ್ಡ ಪ್ರದೇಶಕ್ಕೆ ಬರುವಂತಿಲ್ಲ ಎಂದು ಶಿವಮೊಗ್ಗ ಪೊಲೀಸರು ನೋಟಿಸ್ ನೀಡಿದ್ದನ್ನು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಖಂಡಿಸಿದ್ದು, ಈ ಕುರಿತು ಹೈಕೋರ್ಟ್ ಮೊರೆ ಹೋಗಲಾಗುವುದು ಎಂದು ಹೇಳಿದರು.

Tap to resize

Latest Videos

ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಮೋದ್‌ ಮುತಾಲಿಕ್  ಅವರು, 15 ದಿನಗಳ ಕಾಲ ರಾಗಿಗುಡ್ಡಕ್ಕೆ ಪ್ರವೇಶ ಮಾಡದಂತೆ ಪ್ರತಿಬಂಧಜಾಜ್ಞೆ ಹೊರಡಿಸಿದ್ದು ಸರಿಯಲ್ಲ. ನನಗೆ ಬಸ್ಸಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಆಗಮಿಸಿ ನೋಟಿಸ್ ನೀಡಿದ ಶಿವಮೊಗ್ಗ ಪೊಲೀಸರ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಸಕ್ಕರೆ ಕಾರ್ಖಾನೆಗಳು ಉತ್ಪಾದಿಸೋ ವಿದ್ಯುತ್‌ ಸರ್ಕಾರಕ್ಕೆ: ಶಾಮನೂರು ಶಿವಶಂಕರಪ್ಪ

ಇತ್ತೀಚಿಗೆ ಗಲಭೆ ನಡೆದ ಶಿವಮೊಗ್ಗದ ರಾಗಿಗುಡ್ಡಕ್ಕೆ ಹೋಗಲು  ನಿರ್ಧರಿಸಿದ್ದೆ.‌ ಕಳೆದ ರಾತ್ರಿ ಮಂಗಳೂರಿನಿಂದ ನಾನು ಬಸ್ಸಿನಲ್ಲಿ ಬರುತ್ತಿದ್ದೆ. ಮಾಸ್ತಿಕಟ್ಟೆ ಬಳಿ ತಡೆದ  ಬಂಧಿಸಿದ್ದಾರೆ ನಂತರ ದಾವಣಗೆರೆಗೆ ತಂದು  ಬಿಟ್ಟಿದ್ದಾರೆ. ಈ ನಿರ್ಧಾರದ ವಿರುದ್ಧ ಹೈಕೋರ್ಟ್‌ಗೆ ಹೋಗುವೆ ಎಂದು ತಿಳಿಸಿದರು.

ರಾಗಿ ಗುಡ್ಡದ ಸಂತ್ರಸ್ಥ ಹಿಂದುಗಳಿಗೆ ಸಾಂತ್ವನ ಹೇಳುವುದು ನನ್ನ ಉದ್ದೇಶ. ನಾವು ಯಾವುದೇ ಗಲಾಟೆ, ಧೋಂಬಿ ಮಾಡಲು ಹೋಗಲು ಅಲ್ಲಿಗೆ ತೆರಳುತ್ತಿರಲಿಲ್ಲ. ಸಾಂತ್ವನ ಹೇಳುವ ಸಲುವಾಗಿ ಅಲ್ಲಿಗೆ ಹೋಗುತ್ತಿದ್ದೆ. ಆದ್ರೆ ನನ್ನನ್ನು ತಡೆದು ಪೊಲೀಸರು ದೌರ್ಜನ್ಯ ಮಾಡಿದ್ದಾರೆ‌ ಎಂದು ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಹಿಂದೂ ಧರ್ಮದ ವಿರೋಧಿ ಸರ್ಕಾರ, ರಾಗಿ ಗುಡ್ಡದ ಘಟನೆಗೆ ಯಾರು ಕಾರಣ ಎಂದು ತನಿಖೆಯಿಂದ ಹೊರ ಬರಬೇಕಾಗಿದೆ. ಸಿದ್ದರಾಮಯ್ಯ ಕೂಡ ಹಿಂದೂ ವಿರೋಧಿ. ಅವರ ಕುಮ್ಮಕ್ಕಿನಿಂದ ಇಂತಹ ಘಟನೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಸುದ್ದಿಗೋಷ್ಠಿಯಲ್ಲಿ ಮಣಿ ಸರ್ಕಾರ್, ಪರಶುರಾಮ ನಡುಮನಿ, ಬಿ.ಜಿ.ರಾಹುಲ್, ಅನಿಲ್ ಸುರ್ವೆ, ಶ್ರೀಧರ್, ಮಧು, ಸಿದ್ದಾರ್ಥ, ವಿನಯ್ ಇತರರು ಇದ್ದರು.

click me!