ರಾಜಿನಾಮೆ ನೀಡಿದ ಮತ್ತೋರ್ವ ಕಾಂಗ್ರೆಸಿಗ

Published : Jun 14, 2019, 03:47 PM ISTUpdated : Jun 14, 2019, 04:11 PM IST
ರಾಜಿನಾಮೆ ನೀಡಿದ ಮತ್ತೋರ್ವ ಕಾಂಗ್ರೆಸಿಗ

ಸಾರಾಂಶ

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹಲವು ಮುಖಂಡರು ಕಾಂಗ್ರೆಸ್ ತೊರೆದಿದ್ದು, ಈ ಸಾಲಿಗೆ ಇದೀಗ ಇನ್ನೋರ್ವ ನಾಯಕನ ಸೇರ್ಪಡೆಯಾಗಿದೆ.

ಸಿದ್ದಾಪುರ  (ಜೂ.14):  ತಾಲೂಕಿನ ವಾಜಗೋಡ ಗ್ರಾಪಂ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಕೃಷ್ಣಮೂರ್ತಿ ಸಿ ನಾಯ್ಕಐಸೂರ ವೈಯಕ್ತಿಕ ಕಾರಣಗಳಿಂದ ಹಾಗೂ ಲೋಕಸಭಾ ಚುನಾವಣೆಯ ಹೀನಾಯ ಸೋಲಿನಿಂದ ಮನನೊಂದು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಅವರು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 8 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದು, 3 ವರ್ಷಗಳ ಕಾಲ ಶಿರಸಿ- ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ವೈಯಕ್ತಿಕ ಕಾರಣಗಳಿಂದ ಪಕ್ಷಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ನಮ್ಮ ಪಕ್ಷದ ಯಾವ ಮುಖಂಡರ ನಡುವೆ ಯಾವುದೇ ಭಿನ್ನಾಭಿಪ್ರಾಯ ವಿಲ್ಲ. ಯಾವುದೇ ಪಕ್ಷಕ್ಕೂ ಸೇರುವುದಿಲ್ಲ ಎಂದರು.

 ಜತೆಗೆ ರಾಜಿನಾಮೆ ನೀಡುತ್ತಿರುವುದಕ್ಕೆ ಕಾಂಗ್ರೆಸ್ ನ ಹಿರಿ-ಕಿರಿಯ ಮುಖಂಡರ ಕ್ಷಮೆಯಾಚಿಸಿದ್ದಾರೆ. ಸಧ್ಯ ಅವರು ಕಾಂಗ್ರೆಸ್‌ನ 7, ಬಿಜೆಪಿಯ 4 ಸದಸ್ಯರನ್ನೊಳಗೊಂಡ ವಾಜಗೋಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

PREV
click me!

Recommended Stories

Share Market App Scam: ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ!
NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!