ಮೇಲ್ಸೇತುವೆಗೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು

Published : Aug 22, 2019, 07:54 AM IST
ಮೇಲ್ಸೇತುವೆಗೆ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು

ಸಾರಾಂಶ

ಬೆಂಗಳೂರಿನ ಮೇಲ್ಸೇತುವೆ ಒಂದಕ್ಕೆ ಸಿದ್ಧಗಂಗಾ ಶ್ರೀಗಳ ಹೆಸರನ್ನು ಇಡಲು ಬಿಬಿಎಂಪಿ ಅನುಮೋದನೇ ನೀಡಿದೆ. 

ಬೆಂಗಳೂರು[ ಆ.22]: ಯಶವಂತಪುರ ವೃತ್ತದಿಂದ ಕೆನ್ನಮೆಟಲ್‌ ಕಾರ್ಖಾನೆ ರಸ್ತೆ ಮತ್ತು ಗೊರಗುಂಟೆಪಾಳ್ಯದಿಂದ ಕೆನ್ನಮೆಟಲ್‌ ಕಾರ್ಖಾನೆವರೆಗಿನ ಮೇಲ್ಸೇತುವೆಗೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನಿಡುವ ಬಿಬಿಎಂಪಿ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. 

ರಾಷ್ಟ್ರೀಯ ಹೆದ್ದಾರಿ 4ರ ಈ ಮೇಲ್ಸೇತುವೆಗೆ ಸಿದ್ಧಗಂಗಾ ಶ್ರೀಗಳ ಹೆಸರು ನಾಮಕರಣ ಮಾಡುವ ಕುರಿತು ಜುಲೈ 10ರ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡು ಸರ್ಕಾರದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. 

ಬಿಬಿಎಂಪಿ ಪ್ರಸ್ತಾವನೆಗೆ ಇದೀಗ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿ ಬುಧವಾರ ಆದೇಶ ಮಾಡಿದೆ.

PREV
click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ