ಜ.21ಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ, 5 ಲಕ್ಷ ಭಕ್ತರ ಆಗಮನ ನಿರೀಕ್ಷೆ

Published : Jan 19, 2023, 06:06 PM IST
ಜ.21ಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ, 5 ಲಕ್ಷ ಭಕ್ತರ ಆಗಮನ ನಿರೀಕ್ಷೆ

ಸಾರಾಂಶ

ಪದ್ಮಭೂಷಣ, ಕರ್ನಾಟಕ ರತ್ನ ತ್ರಿವಿಧ ದಾಸೋಹಿ, ಪರಮಪೂಜ ಡಾ.ಶ್ರೀ . ಶಿವಕುಮಾರ ಮಹಾಶಿವಯೋಗಿ ಗಳವರ 4 ನೇ ವರ್ಷದ ಪುಣ್ಯ ಸಂಸ್ಕರಣೋತ್ಸವ ಕಾರ್ಯಕ್ರಮ ವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ವರದಿ: ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್  

ತುಮಕೂರು (ಜ.19): ಪದ್ಮಭೂಷಣ, ಕರ್ನಾಟಕ ರತ್ನ ತ್ರಿವಿಧ ದಾಸೋಹಿ, ಪರಮಪೂಜ ಡಾ.ಶ್ರೀ . ಶಿವಕುಮಾರ ಮಹಾಶಿವಯೋಗಿ ಗಳವರ 4 ನೇ ವರ್ಷದ ಪುಣ್ಯ ಸಂಸ್ಕರಣೋತ್ಸವ ಕಾರ್ಯಕ್ರಮ ವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಕೋವಿಡ್ ನಿಂದಾಗಿ‌ ಕಾರ್ಯಕ್ರಮವನ್ನು  ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ  ಪೂಜ್ಯರ ಸಂಸ್ಕರಣೋತ್ಸವವನ್ನು ದೊಡ್ಡಮಟ್ಟದಲ್ಲಿ ಆಚರಿಸಲಾಗುತ್ತಿದೆ . ಸರ್ಕಾರವು ಕಳೆದ ವರ್ಷ ಶ್ರೀಗಳ ಪುಣ್ಯಸ್ಮರಣೆ  ದಿನವನ್ನು ದಾಸೋಹ ದಿನ ಎಂದು ಘೋಷಿಸಿತ್ತು . ಈಗಾಗಿ  ಮಠದ ಭಕ್ತರು , ಅಭಿಮಾನಿಗಳು , ಹಳೆ ವಿದ್ಯಾರ್ಥಿಗಳು ನಾಡಿನಾದ್ಯಂತ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿದ್ದಾರೆ . 

ಜ .21 ಶನಿವಾರ ಬೆಳಿಗ್ಗೆ 10 ಗಂಟೆಗೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘನ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ .ಮಹಾ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೇಲಿಮಠದ  ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಸಚಿವರಾದ ಜೆ.ಸಿ.ಮಾಧುಸ್ವಾಮಿ , ಜ್ಞಾನೇಂದ್ರ , ಸೋಮಶೇಖರ್ ,  ವಿ.ಸೋಮಣ್ಣ ಅರಗ ಎಸ್.ಡಿ. ಸಿ.ಸಿ.ಪಾಟೀಲ್‌ , ಬಿ.ಸಿ. ನಾಗೇಶ್ ಭಾಗವಹಿಸಲಿದ್ದಾರೆ . ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸನ್ಮಾನ್ಯ ಭಗವಂತ ಖೂಬವರು ಮತ್ತು ಸನ್ಮಾನ್ಯ ತೇಜಸ್ವಿ ಸೂರ್ಯ , ಸಂಸದ ಜಿ.ಎಸ್ ಬಸವರಾಜು ಉಪಸ್ಥಿತರಿರುತ್ತಾರೆ . ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ , ಹೆಚ್.ಡಿ.ರೇವಣ್ಣ , ಜೆಡಿಎಸ್ ನಾಯಕ ಆಗಮಿಸಲಿದ್ದಾರೆ . ಶಾಸಕರಾದ ಜ್ಯೋತಿಗಣೇಶ್ , ಬಿ.ಸಿ.ಗೌರಿಶಂಕರ್ , ವಿಧಾನ ಪುಷತ್‌ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ , ಗೌಡ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.

Tumakuru: ಸಿದ್ಧಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ: ಪಕ್ಷ ಸಂಘಟನೆ ಬಗ್ಗೆ ಆಸಕ್ತಿ

5.30ರಿಂದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಪೂಜೆ:
ಪೂಜ್ಯರ ಗದ್ದಿಗೆಗೆ ವಿಶೇಷ ಹೂವಿನ ಅಲಂಕಾರ ಬೆಳಿಗ್ಗೆ 5.30 ರಿಂದ ಮಹಾರುದ್ರಾಭಿಷೇಕ ಮತ್ತು ರಾಜೋಪಚಾರ , ಬಿಲ್ವಾರ್ಚನೆ ಹಾಗೂ ಇತರೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ . ಬೆ .8.00 ಕ್ಕೆ ಬೆಳಿರಥದಲ್ಲಿ ಪೂಜ್ಯರ ಪತಳಿಯನ್ನಿಟ್ಟು ಮೆರವಣಿಗೆಯನ್ನು ಮಠದ ಆವರಣದಲ್ಲಿ ಭಕ್ತರ ಹರಗುರುಚರಮೂರ್ತಿಗಳ ಮತ್ತು ಸಮ್ಮುಖದಲ್ಲಿ ನಡೆಸಲಾಗುವುದು . ಶ್ರೀಮಠಕ್ಕೆ ಆಗಮಿಸುವ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗಣ್ಯಮಹೋದಯರಿಗೆ ಗದ್ದುಗೆ ದರ್ಶನದ ನಂತರ ಕುಂಭ – ಕಳಸ ಮತ್ತು ಮಂಗಳವಾದ್ಯಗಳೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಗುವುದು . ನಿರಂಜನ ಹಣವ ನರೂಪಿ ಡಾ.ಶ್ರೀ . ಶಿವಕುಮಾರ ಮಹಾ ಶಿವಯೋಗಿ ಗಳವರ ತ್ರಿವಿಧ ದಾಸೋಹದಿಂದ  ಪ್ರಭಾವಿತರಾಗಿರುವ ನಾಡಿನೆಲ್ಲಡೆ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

Kodagu: ಡಾ.ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣ ಉದ್ಘಾಟಿಸಿದ ಸಿದ್ದಲಿಂಗ ಮಹಾಸ್ವಾಮೀಜಿ

5 ಲಕ್ಷ ಭಕ್ತರ ಆಗಮನ ನಿರೀಕ್ಷೆ:
ಈ ಪುಣ್ಯ ಸಮಾರಂಭಕ್ಕೆ ಸುಮಾರು ಐದು ಲಕ್ಷಭಕ್ತ ವೃಂದ , ಅಭಿಮಾನಿಗಳು , ಹಳೆ ವಿದ್ಯಾಥಿಗಳು ಮತ್ತು ಹಿತೈಷಿಗಳು ಆಗಮಿಸುವ ನಿರೀಕ್ಷೆಯಿದ್ದು , ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ . ಕೈಗಾರಿಕಾ ವಸ್ತುಪ್ರದರ್ಶನದ ಆವರಣ , ಸಾದರ ಕೊಪ್ಪಲು , ಕೆಂಪಹೊನ್ನಯ್ಯ ಅತಿಥಿಗೃಹ , ಹೊಸ ಪ್ರಸಾದ ನಿಲಯ , ಹಳೆ ಪ್ರಸಾದ ನಿಲಯ ಹೀಗೆ ಐದು ಕಡೆ ಪ್ರಸಾದದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ . ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಿದ್ಧಗಂಗಾ ಆಸ್ಪತ್ರೆ ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು , ಯಾವುದೇ ಅನನುಕೂಲಗಳು ಆಗದಂತೆ ಎಚ್ಚರ ವಹಿಸಲಾಗಿದೆ . ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಬೃಹತ್ ಸಭಾಮಂಟಪವನ್ನು ನಿರ್ಮಿಸಲಾಗುತ್ತಿದೆ.

PREV
click me!

Recommended Stories

ಸಚಿವ ಕೆಜೆ ಜಾರ್ಜ್ ಜೊತೆ ಶಾರದೆಯ ದರ್ಶನ ಪಡೆದ ನೂತನ ರಾಜ್ಯಪಾಲ ಡಾ.ಸುಧಾ ಯಾದವ್
ಕ್ವಿನ್ ಸಿಟಿ ಯೋಜನೆ, ಮಾರ್ಚ್ ಒಳಗೆ ನಿವೇಶನ ಹಂಚಿಕೆ ಗುರಿ ಎಂದ ಎಂಬಿ ಪಾಟೀಲ