ಬಸವ ಜಯಂತಿ ಮನೆಯಲ್ಲೇ ಆಚರಿಸಿ: ಬಸವಕೇಂದ್ರ ಶ್ರೀ

By Kannadaprabha NewsFirst Published Apr 23, 2020, 2:57 PM IST
Highlights

ದೇಶಾದ್ಯಂತ ಲಾಕ್‌ಡೌನ್‌ ಇರುವುದರಿಂದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಬಸವಣ್ಣನವರ ಪೂಜೆ ನೆರವೇರಿಸಿ, ವಚನ ಪಠಣ ಮಾಡುವ ಮೂಲಕ ಬಸವ ಜಯಂತಿ ಆಚರಿಸಬೇಕು| ಬಸವಕೇಂದ್ರದಲ್ಲಿ ಕೂಡ ಇದೇ ರೀತಿ ಬೆಳಗ್ಗೆ ಇಷ್ಟಲಿಂಗ ಪೂಜೆ ಮುಗಿಸಿ ಬಸವಣ್ಣನವರಿಗೆ ನೂರೆಂಟು ಬಸವಲಿಂಗ ನಾಮಾವಳಿಗಳೊಂದಿಗೆ ಪೂಜಿಸಿ ಅಂಬಲಿ ಹಾಗೂ ಮಜ್ಜಿಗೆ ನೈವೇದ್ಯ ಮಾಡಲಾಗುವುದು|

ಶಿವಮೊಗ್ಗ(ಏ.23): ದೇಶದಲ್ಲಿ ಕೊರೋನಾ ವೈರಸ್‌ ಹರಡುತ್ತಿರುವುದರಿಂದ ಈ ವರ್ಷ ಬಸವ ಜಯಂತಿ ಮನೆಗೆ ಸೀಮಿತಗೊಳಿಸಿ ಆಚರಿಸುವಂತೆ ಇಲ್ಲಿನ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು 2020ರ ಏ. 26 ರಂದು ಬರಲಿರುವ ಬಸವ ಜಯಂತಿ ಆಚರಣೆ ಕುರಿತು ಸಾಕಷ್ಟುಮಂದಿ ಕೇಳುತ್ತಿದ್ದು, ಕೊರೋನಾ ವೈರಾಣು ತಡೆಯಬೇಕಾಗಿರುವುದರಿಂದ ಸಾರ್ವಜನಿಕವಾಗಿ ಈ ಆಚರಣೆ ಬೇಡ ಎಂದು ತಿಳಿಸಿದ್ದಾರೆ.

ವಾವ್ಹ್..! ಲಾಕ್‍ಡೌನ್ ಮಧ್ಯೆಯೂ ಪರ್ಯಾಯ ಹಾದಿ ಕಂಡುಕೊಂಡು ಲಾಭ ಕಂಡ ರೈತ

ಇಡೀ ದೇಶಾದ್ಯಂತ ಲಾಕ್‌ಡೌನ್‌ ಇರುವುದರಿಂದ ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಬಸವಣ್ಣನವರ ಪೂಜೆ ನೆರವೇರಿಸಿ, ವಚನ ಪಠಣ ಮಾಡುವ ಮೂಲಕ ಬಸವ ಜಯಂತಿ ಆಚರಿಸಬೇಕು.ಬಸವಕೇಂದ್ರದಲ್ಲಿ ಕೂಡ ಇದೇ ರೀತಿ ಬೆಳಗ್ಗೆ ಇಷ್ಟಲಿಂಗ ಪೂಜೆ ಮುಗಿಸಿ ಬಸವಣ್ಣನವರಿಗೆ ನೂರೆಂಟು ಬಸವಲಿಂಗ ನಾಮಾವಳಿಗಳೊಂದಿಗೆ ಪೂಜಿಸಿ ಅಂಬಲಿ ಹಾಗೂ ಮಜ್ಜಿಗೆ ನೈವೇದ್ಯ ಮಾಡಲಾಗುವುದು. ಈ ಸಂದರ್ಭದಲ್ಲಿ ಸಾರ್ವಜನಿಕರಾರ‍ಯರೂ ಬಸವಕೇಂದ್ರಕ್ಕೆ ಬರುವುದು ಬೇಡ ಎಂದು ತಿಳಿಸಿದ್ದಾರೆ.

ಇದರ ಜೊತೆಗೆ ನಿಮ್ಮ ಕೈಲಾದಷ್ಟುಆರ್ಥಿಕ ಸಹಾಯವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ಅಥವಾ ನಿಮ್ಮ ಸುತ್ತಮುತ್ತ ಇರುವ ಕೂಲಿ ಕಾರ್ಮಿಕರು, ಮನೆಗೆಲಸದವರು, ನಿರ್ಗತಿಕರು,ಅಶಕ್ತರಿಗೆ ಅಗತ್ಯಸಹಕಾರ ನೀಡುವ ಮೂಲಕ ಕೊರೋನಾ ತಂದೊಡ್ಡಿರುವ ಆತಂಕ ನಿವಾರಣೆಗೆ ಅಳಿಲ ಸೇವೆ ಸಲ್ಲಿಸಿ ಈ ಬಸವಜಯಂತಿಯನ್ನು ಸ್ಮರಣೀಯಗೊಳಿಸಬಹುದು ಎಂದಿದ್ದಾರೆ.

ಈಗಾಗಲೇ ನಮ್ಮ ಬಸವಕೇಂದ್ರದಿಂದ ಸದ್ಭಕ್ತರ ಸಹಕಾರಪಡೆದು ಅಗತ್ಯವಿರುವ 650 ಜನರಿಗೆ ಒಂದುವಾರಕ್ಕೆ ಬೇಕಾಗುವ ಆಹಾರ ಪದಾರ್ಥಗಳ ಕಿಟ್‌ ವಿತರಿಸಲಾಗಿದೆ ಎಂದು ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ತಿಳಿಸಿದ್ದಾರೆ.
 

click me!