ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ, ಶಾಖಕ್ಕೆ ಸಿಲಿಂಡರ್‌ ಸ್ಫೋಟ: ಇಬ್ಬರು ಗಂಭೀರ

Published : Feb 12, 2020, 07:49 AM IST
ಶಾರ್ಟ್‌ ಸಕ್ರ್ಯೂಟ್‌ನಿಂದ ಬೆಂಕಿ, ಶಾಖಕ್ಕೆ ಸಿಲಿಂಡರ್‌ ಸ್ಫೋಟ: ಇಬ್ಬರು ಗಂಭೀರ

ಸಾರಾಂಶ

ಹೋಟೆಲ್‌ನಲ್ಲಿ ಶಾರ್ಟ್‌ ಸಕ್ರ್ಯೂಟ್‌ನಿಂದ ಸ್ಫೋಟಿಸಿದ ಸಿಲಿಂಡರ್‌: ಇಬ್ಬರು ಗಂಭೀರ| ಮೊದಲ ಮಹಡಿಯಲ್ಲಿ ಶಾರ್ಟ್‌ ಸಕ್ರ್ಯೂಟ್‌| ನೆಲ ಮಹಡಿಗೆ ಹಬ್ಬಿದ ಬೆಂಕಿ| ಬೆಂಕಿಯ ತಾಪಕ್ಕೆ ಸ್ಫೋಟಿಸಿದ ಸಿಲಿಂಡರ್‌ಗಳು| ಕೋರಮಂಗಲದಲ್ಲಿ ಘಟನೆ

ಬೆಂಗಳೂರು[ಫೆ.12]: ಶಾರ್ಟ್‌ ಸಕ್ಯೂರ್ಟ್‌ನಿಂದ ಹೋಟೆಲ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸಿಲಿಂಡರ್‌ ಸ್ಫೋಟ ಸಂಭವಿಸಿದ ಕಾರಣ ಹನ್ನೊಂದು ಮಂದಿ ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.

ಕೋರಮಂಗಲದ ಒಂದನೇ ಹಂತದ ‘ಸರ್ದಾರ್‌ ಜೀ ಲಂಡನ್‌ ವಾಲೆ’ ಹೋಟೆಲ್‌ನಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಹೋಟೆಲ್‌ ಸಿಬ್ಬಂದಿ ರಾಜನ್‌(30) ಮತ್ತು ಮತ್ತೊಬ್ಬನ ಸಿಬ್ಬಂದಿ ಸ್ಥಿತಿ ಗಂಭೀರವಾಗಿದೆ. ಒಂಬತ್ತು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಹಕರಿದಿದ್ದರೆ ಹೆಚ್ಚು ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್‌ ಭಾರೀ ಅನಾಹುತ ತಪ್ಪಿದೆ ಎಂದು ಕೋರಮಂಗಲ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲದಲ್ಲಿರುವ ನೆಲ ಮಹಡಿಯಲ್ಲಿ ಅಂಬೂರ ಬಿರಿಯಾನಿ ಹೋಟೆಲ್‌ ಹಾಗೂ ಬೀಡಾ ಅಂಗಡಿ ಇದೆ. ಮೊದಲ ಮಹಡಿಯಲ್ಲಿ ಪಂಜಾಬ್‌ ಶೈಲಿಯ ‘ಸರ್ದಾರ್‌ ಜೀ ಲಂಡನ್‌ ವಾಲೆ’ ಹೋಟೆಲ್‌ ಇತ್ತು. ಹೋಟೆಲ್‌ ಒಳ ಮತ್ತು ಹೊರ ವಿನ್ಯಾಸವನ್ನು ಬಿದಿರು ಮೂಲಕ ಸಿದ್ಧಪಡಿಸಲಾಗಿತ್ತು. ಮಂಗಳಾರ ಸಂಜೆ 7.30ರ ಸುಮಾರಿಗೆ ಮೊದಲ ಮಹಡಿಯ ಹೋಟೆಲ್‌ನಲ್ಲಿ ಶರ್ಟ್‌ ಸಕ್ಯೂರ್ಟ್‌ ಆಗಿದ್ದು, ನೆಲ ಮಹಡಿಗೂ ವಿಸ್ತರಿಸಿದೆ. ಏಕಾಏಕಿ ಬೆಂಕಿಯ ಕೆನ್ನಾಲಿಗೆ ತೀವ್ರಗೊಂಡು ನೆಲಮಹಡಿ ಮತ್ತು ಮೊದಲ ಮಹಡಿಯ ಹೋಟೆಲ್‌ ಅಡುಗೆ ಕೋಣೆಯಲ್ಲಿದ್ದ ಎರಡು ಸಿಲಿಂಡರ್‌ ಸ್ಫೋಟಗೊಂಡಿದೆ. ನೆಲ ಮಹಡಿಯಲ್ಲಿದ್ದ ಸಿಬ್ಬಂದಿ ಕೂಡಲೇ ಹೊರಗೆ ಓಡಿ ಬಂದಿದ್ದು, ಸರ್ದಾರ್‌ ಜೀ ಲಂಡನ್‌ ವಾಲೆ ಹೋಟೆಲ್‌ನಲ್ಲಿದ್ದ ಸಿಬ್ಬಂದಿ ಬೆಂಕಿಯಲ್ಲಿ ಸಿಕ್ಕಿಕೊಂಡಿದ್ದರು. ವಿಷಯ ತಿಳಿದು ನಾಲ್ಕು ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ನೆಲ ಮಹಡಿಯಲ್ಲಿನ ವೈಯರ್‌ನಿಂದ ಮೊದಲ ಮಹಡಿಗೆ ಸಂಪರ್ಕ ನೀಡಲಾಗಿದೆ. ಹೀಗಾಗಿ ಎರಡು ಕಡೆ ಬೆಂಕಿ ಕಾಣಿಸಿಕೊಂಡು ಅದರ ತಾಪಮಾನಕ್ಕೆ ಸಿಲಿಂಡರ್‌ ಸ್ಫೋಟಗೊಂಡಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!