ಯಾದಗಿರಿ: ಸುರಪುರ ಶಾಸಕ ರಾಜುಗೌಡಗೆ ಮಾತೃ ವಿಯೋಗ

Suvarna News   | Asianet News
Published : Jan 13, 2020, 01:17 PM IST
ಯಾದಗಿರಿ: ಸುರಪುರ ಶಾಸಕ ರಾಜುಗೌಡಗೆ ಮಾತೃ ವಿಯೋಗ

ಸಾರಾಂಶ

ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಅವರ ತಾಯಿ ವಿಧಿವಶ| ಬೆಂಗಳೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರು| ಕಳೆದ ಕೆಲವು ದಿನಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದ ತಿಮ್ಮಮ್ಮ|

ಯಾದಗಿರಿ(ಜ.13): ಜಿಲ್ಲೆಯ ಸುರಪುರ ಕ್ಷೇತ್ರದ ಬಿಜೆಪಿ ಶಾಸಕ ರಾಜುಗೌಡ ಅವರ ತಾಯಿ ತಿಮ್ಮಮ್ಮ ಶಂಬನಗೌಡ ನಾಯಕ್ ಅವರು ಇಂದು(ಸೋಮವಾರ) ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. 

ಕಳೆದ ಕೆಲವು ದಿನಗಳಿಂದ ಪಾರ್ಶ್ವವಾಯುಗೆ ತುತ್ತಾಗಿದ್ದ 64 ವರ್ಷದ ತಿಮ್ಮಮ್ಮ ಅವರನ್ನ ಬೆಂಗಳೂರಿನ ಕೋಲಂಬಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗ್ಗೆ 11 ಗಂಟೆಗೆ ತಿಮ್ಮಮ್ಮ ಇಹಲೋಕ ತ್ಯಜಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಜುಗೌಡ ಗೆಲುವಿಗಾಗಿ ಅವರ ತಾಯಿ ತಿಮ್ಮಮ್ಮ ಅವರು ಸಾಕಷ್ಟು ಶ್ರಮಿಸಿದ್ದರು. ಮೃತರು ಹಿರಿಯ ಪುತ್ರ ರಾಜೂಗೌಡ, ಬಬ್ಲೂ ಗೌಡ ಹಾಗೂ ಪುತ್ರಿ ಚೈತ್ರಾ ಸೇರಿದಂತೆ ಅಪಾರ ಕುಟುಂಬ ಅಗಲಿದ್ದಾರೆ. ಮಂಗಳವಾರ ಮಧ್ಯಾಹ್ನ ಸ್ವಗ್ರಾಮ ಕೊಡೆಕಲ್‌ನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಕುಟುಂಬ ಮೂಲಗಳು ತಿಳಿಸಿವೆ. 
 

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ