ಕಳೆದ ಹಲವು ದಿನಗಳಿಂದ ಜಿಲ್ಲೆಯ ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ವರ್ಷಧಾರೆ ಸೃಷ್ಟಿಸಿರುವ ಅವಾಂತರ ಹಿನ್ನೆಲೆಯಲ್ಲಿ ಹಾನಿಯಾದ ಸ್ಥಳಗಳಿಗೆ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಸಚಿವೆ ಶೋಭಾ ಕರಂದ್ಲಾಜೆ ಇಂದು ಶೃಂಗೇರಿ ಕೊಪ್ಪ ತಾಲೂಕಿನ ಮಳೆ ಹಾನಿಯಾದ ಪ್ರದೇಶಗಳಿಗೆ ಖುದ್ದು ಭೇಟಿ ಪರಿಶೀಲನೆ ನಡೆಸಿದರು.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜು.13): ಕಳೆದ ಹಲವು ದಿನಗಳಿಂದ ಜಿಲ್ಲೆಯ ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ವರ್ಷಧಾರೆ ಸೃಷ್ಟಿಸಿರುವ ಅವಾಂತರ ಹಿನ್ನೆಲೆಯಲ್ಲಿ ಹಾನಿಯಾದ ಸ್ಥಳಗಳಿಗೆ ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆ ಸಚಿವೆ ಶೋಭಾ ಕರಂದ್ಲಾಜೆ ಇಂದು ಶೃಂಗೇರಿ ಕೊಪ್ಪ ತಾಲೂಕಿನ ಮಳೆ ಹಾನಿಯಾದ ಪ್ರದೇಶಗಳಿಗೆ ಖುದ್ದು ಭೇಟಿ ಪರಿಶೀಲನೆ ನಡೆಸಿದರು.
ಶೀಘ್ರ ಪರಿಹಾರ ದೊರಕಿಸಲು ಸಚಿವೆ ಶೋಭಾ ಕರಂದ್ಲಾಜೆ ಸೂಚನೆ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಅನಾಹುತಗಳು ಉಂಟಾಗಿದೆ. ಜನರು ಮನೆ, ಕೃಷಿ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾದ್ರೆ ,ಸೇತುವೆ, ರಸ್ತೆಗಳು ಮಳೆಯಿಂದ ಕೊಚ್ಚಿ ಹೋಗಿ ಅಪಾರ ಪ್ರ,ಮಾಣದಲ್ಲಿ ಸಾರ್ವಜನಿಕ ಆಸ್ತಿ ನಷ್ವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಖುದ್ದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸಿ ಸಂತ್ರಸ್ಥರ ಅಳಲು ಕೇಳಿದರು.
ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಅತಿ ಮಳೆಯಿಂದ ಗುಡ್ಡ ಕುಸಿತದಿಂದ ಹಾನಿಗೊಳಗಾಗಿರುವ ಮನೆಯ ಸದಸ್ಯರನ್ನು ಬೇರೆಡೆಗೆ ಸ್ಥಳಾಂತರಿಸಬೇಕು. ಗ್ರಾಮದಲ್ಲಿ 20 ಎಕ್ರೆ ಖಾಲಿ ಜಾಗದ ಬಗ್ಗೆ ಜಿಲ್ಲಾಧಿಕಾರಿಗಳು ಜಿಲ್ಲಾ ಅರಣ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಜಂಟಿ ಸರ್ವೇ ಕೈಗೊಂಡು ಅಲ್ಲಿಗೆ ಶೀಘ್ರವೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು. ಅವರು ಅತಿ ಮಳೆಯಿಂದ ಹಾನಿಗೊಳಗಾದ ಮೇಗುಂದಾ ಹೋಬಳಿಯ ಪ್ರದೇಶಗಳ ಪರಿಶೀಲನೆ ನಡೆಸಿ ಮಾತನಾಡಿದರು. ಚಿಕ್ಕಮಗಳೂರು, ಕೊಡಗು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕಳೆದ 2_3- ವರ್ಷಗಳಿಂದ ಅಕಾಲಿಕ ಹಾಗೂ ಭಾರೀ ಮಳೆಯಿಂದಾಗಿ ಗುಡ್ಡಕುಸಿತ, ಸೇತುವೆ ಹಾನಿ, ರಸ್ತೆ ಸಂಪರ್ಕ ಕಡಿತ ಮನೆಹಾನಿ ಮುಂತಾದ ಅಪಾರ ಹಾನಿಯಾಗಿದೆ.
Chikkamagaluru ಐತಿಹಾಸಕ ಅಯ್ಯನ ಕೆರೆ ಕೋಡಿ : ಬಯಲು ಸೀಮೆ ರೈತರಲ್ಲಿ ಸಂತಸ
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರಾಣಹಾನಿ ಹಾಗೂ ಮನೆ ಹಾನಿ ಕಡಿಮೆಯಾಗಿದೆ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ನಲ್ಲಿ ಏನೇನು ಪರಿಹಾರ ದೊರೆಯಬೇಕು ಅದನ್ನು ದೊರಕಿಸಲಾಗುತ್ತದೆ. ಜೊತೆಗೆ ಮುಖ್ಯಮಂತ್ರಿಗಳು ಸಹ ಹಾನಿಗೊಳಗಾದ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದಿಂದ ಪರಿಹಾರ ಕಾರ್ಯ ಕೈಗೊಳ್ಳಲು ಪರಿಶೀಲನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಜಿಲ್ಲೆಯಲ್ಲಿ ಮಳೆಯಿಂದ ಉಂಟಾದ ಬೆಳೆಹಾನಿಯ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರೆ ಸೂಕ್ತ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. ಕೇಂದ್ರ ಸರ್ಕಾರದಿಂದ ಮಳೆಹಾನಿಗೆ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಎಲ್ಲಿ ಸಮಸ್ಯೆ ಆಗಿದೆ ಅಲ್ಲಿ ಪರಿಶೀಲನೆ ನಡೆಸಿದ್ದೇನೆ ಶೋಭಾ ಕರಂದ್ಲಾಜೆ: ಹಾನಿ ಪ್ರದೇಶಗಳ ಪರಿಶೀಲನೆಗೆ ಬಂದಿದ್ದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಗುಡ್ಡೆತೋಟದಲ್ಲಿ ಸಂತ್ರಸ್ಥ ಮನವಿ ಸ್ವೀಕರಿಸದೆ ತೆರಳಿದರೆಂಬ ಕಾರಣಕ್ಕೆ ಏಕಾಏಕಿ ಪ್ರತಿಭಟನೆಗೆ ಇಳಿದ ಸಂತ್ರಸ್ತರು ಮಳೆ ನಡುವೆಯೇ ಹೊರನಾಡು, ಶೃಂಗೇರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಮಳೆಯಿಂದ ಹಾನಿ ಸಂಭವಿಸಿದ ತೆರಳಿದ್ದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹಾಗೂ ಅಧಿಕಾರಿಗಳ ತಂಡ ಗುಡ್ಡೆತೋಟದಲ್ಲಿ ಭೂ ಕುಸಿತವಾದ ಸ್ಥಳವನ್ನು ವೀಕ್ಷಿಸಿ ನಂತರ ಸಂತ್ರಸ್ಥರು ಇರುವ ಜಾಗಕ್ಕೆ ತೆರಳದೇ, ಸಂತ್ರಸ್ಥರ ಅಳಲು ಕೇಳಿದೇ ನೇರವಾಗಿ ಕೂಗ್ರೆ ಗ್ರಾಮಕ್ಕೆ ಭೇಟಿ ನೀಡಲು ಮುಂದಾದ ಸಂದರ್ಭದಲ್ಲಿ ಸ್ಥಳಿಯರ ಆಕ್ರೋಷದ ಕಟ್ಟೆಯೊಡೆದಿತ್ತು.
ಪ್ರತಿಭಟನೆಯನ್ನು ಲೆಕ್ಕಿಸದೆ ಸಚಿವೆ ಸಂತ್ರಸ್ಥರು ಇರುವ ಜಾಗಕ್ಕೆ ತೆರಳದೇ ನೇರವಾಗಿ ಕೂಗ್ರೆ ಗ್ರಾಮಕ್ಕೆ ಭೇಟಿ ನೀಡಿ ಮರಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು ನಾವು ಎಲ್ಲಿ ಬೆಳೆ ಹಾನಿಯಾಗಿದೆ, ತೋಟ ಹಾನಿಯಾಗಿದೆ, ರಸ್ತೆ ಹಾನಿಯಾಗಿದೆ ಅಲ್ಲಿಗೆ ಭೇಟಿ ನೀಡುತ್ತಿದ್ದೇನೆ,ಗ್ರಾಮ ಪಂಚಾಯಿತಿಯಲ್ಲಿ ಬೆಚ್ಚಗೆ ಕೂತು ಅಲ್ಲಿಗೆ ಬನ್ನಿ ಅಂದರೆ ಹೇಗೆ ಬರೋದು ಹೇಳಿ ಎಂದು ಪ್ರಶ್ನೆ ಮಾಡಿದರು. ಎಲ್ಲಿ ಸಮಸ್ಯೆ ಆಗಿದೆ ಎಂಬುದನ್ನ ಪರಿಶೀಲನೆ ಮಾಡುವುದಕ್ಕೆ ಬಂದಿದ್ದೇನೆ, ಅವರು ಬಂದು ಸಮಸ್ಯೆ ಹೇಳಿಕೊಳ್ಳಬಹುದಿತ್ತು. ಆದರೆ ಗ್ರಾಮ ಪಂಚಾಯತಿ ಸದಸ್ಯರು, ಅಧ್ಯಕ್ಷರು ಗ್ರಾಮ ಪಂಚಾಯತಿ ಗೆ ಬನ್ನಿ ಅಂದರೆ ಹೇಗೆ ಎಂದು ತಿಳಿಸಿದರು. ಗುಡ್ಡೆತೋಟದಿಂದ ನೇರವಾಗಿ ಅರೆನೋರು ಗ್ರಾಮಕ್ಕೆ ತೆರಳಿದ ಸಚಿವರು ಮಳೆಯಿಂದ ಅಡಿಕೆ, ಕಾಫಿ ತೋಟ ಕೊಚ್ಚಿ ಹೋಗಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.
Chikkamagaluru: ಮಲೆನಾಡಲ್ಲಿ ಮಳೆ ಅಬ್ಬರ ತಗ್ಗಿಸುವಂತೆ ದೇವರ ಮೊರೆ
ಸಚಿವರ ಪ್ರವಾಸದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರು ಗೈರು: ಮಳೆಯಿಂದ ಹಾನಿ ಆಗಿರುವ ಪ್ರದೇಶಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಚಿವರ ಶೃಂಗೇರಿ ಕ್ಷೇತ್ರದಲ್ಲಿ ಅತಿವೃಷ್ಠೀ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆಯ ವೇಳೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡ ಗೈರು ಎದ್ದು ಕಾಣುತ್ತಿತ್ತು. ಕ್ಷೇತ್ರದಲ್ಲಿ ಉಂಟಾಗಿರುವ ಹಾನಿ ಬಗ್ಗೆ ಶಾಸಕರು ಸಚಿವರ ಗಮನಕ್ಕೆ ತರುವ ಅವಕಾಶವಿದ್ದರೂ ಶಾಸಕರ ಗೈರು ಹಾಜರಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಅತಿವೃಷ್ಠಿ ಸಮಯದಲ್ಲಿ ಒಣಪ್ರತಿಷ್ಠೆಯ ರಾಜಕೀಯವೇ ಹೆಚ್ಚಾಯಿತು ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಸಚಿವರೊಂದಿಗೆ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ ಎನ್ ಜೀವರಾಜ್, ಜಿಲ್ಲಾಧಿಕಾರಿ ಕೆ ಎನ್ ರಮೇಶ್, ಎಸ್ಪಿ ಅಕ್ಷಯ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.