ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿದೆ ಶಾರದಾ ಪೀಠ: ಬೃಹತ್ ವೇದಿಕೆಯಲ್ಲಿ 50 ಸಾವಿರ ಜನರಿಂದ ಶ್ಲೋಕ ಪಠಣ

By Govindaraj S  |  First Published Jan 10, 2025, 7:36 PM IST

ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಲುವಾಗಿ ನಾಳೆ (ಶನಿವಾರ) ಬೆಳಿಗ್ಗೆ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ನೆರವೇರಲಿದ್ದು ಜಗದ್ಗುರುಗಳ ಅನುಗ್ರಹಭಾಷಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.


ವರದಿ: ಆಲ್ದೂರು ಕಿರಣ್, ಏಷ್ಯಾ ನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.10): ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮತ್ತೊಂದು ಐತಿಹಾಸಿಕ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿ ಆಗುತ್ತಿದೆ. ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿಗಳವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಸಲುವಾಗಿ ನಾಳೆ (ಶನಿವಾರ) ಬೆಳಿಗ್ಗೆ ಸ್ತೋತ್ರ ತ್ರಿವೇಣಿಯ ಮಹಾಸಮರ್ಪಣೆ ನೆರವೇರಲಿದ್ದು ಜಗದ್ಗುರುಗಳ ಅನುಗ್ರಹಭಾಷಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Tap to resize

Latest Videos

ಸನ್ಯಾಸ ಸ್ವೀಕಾರದ ಐವತ್ತನೆಯ ವರ್ಷದ ಸ್ವರ್ಣ ಮಹೋತ್ಸವ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಪೀಠದ 36ನೇ ಪೀಠಾಧಿಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರು, ಅನೇಕ ಉದಾತ್ತ ಗುಣಗಳ ಗಣಿಯಾಗಿರುವ, ಅನೇಕ ಶಾಸ್ತ್ರಗಳಲ್ಲಿ ವಿದ್ವತ್ ಪ್ರೌಢಿಮೆಯನ್ನು ಹೊಂದಿರುವ ಜಗದ್ಗುರುಗಳವರು ತಮ್ಮ ಅಪಾರವಾದ ಕಾರುಣ್ಯ ಮತ್ತು ವಾತ್ಸಲ್ಯದಿಂದ ಶಿಷ್ಯಕೋಟಿನ್ನು ಅನುಗ್ರಹಿಸುತ್ತಿದ್ದಾರೆ. ಶ್ರೀ ಮಹಾಸ್ವಾಮಿಗಳು ೧೧-೧೧-೧೯೭೪ ಆನಂದನಾಮ ಸಂವತ್ಸರದ ಆಶ್ವಯುಜ ಕೃಷ್ಣ  ದ್ವಾದಶಿಯಂದು ಸಂನ್ಯಾಸಾಶ್ರಮವನ್ನು ಸ್ವೀಕರಿದರು.ಪ್ರಸ್ತುತ ಅವರ ಸಂನ್ಯಾಸ ಸ್ವೀಕಾರದ ಐವತ್ತನೆಯ ವರ್ಷದ ಸ್ವರ್ಣ ಮಹೋತ್ಸವವನ್ನು 'ಸುವರ್ಣಭಾರತೀ" ಎಂಬ ಹೆಸರಿನಲ್ಲಿ ವರ್ಷಪೂರ್ತಿ ಆಚರಿಸಬೇಕೆಂದು ತತ್ಕರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರು ಸಂಕಲ್ಪಿಸಿದ್ದರು.

ಮೈಲಾರಲಿಂಗ ಸ್ವಾಮಿ ಒಕ್ಕಲಿನ ವೇಷ ಧರಿಸಿ ಮನೆಗೆ ನುಗ್ಗುತ್ತಿರೋ ನಾಲ್ವರು: ಮಲೆನಾಡಿಗರಲ್ಲಿ ಆತಂಕ!

ಈ ಶುಭಮಾರಂಭದಲ್ಲಿ ಲೋಕಕ್ಷೇಮಾರ್ಥವಾಗಿ ಅನೇಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳು ಮತ್ತು ವಿಶೇಷವಾದ ಶಾಂಕರ ಸ್ತೋತ್ರ ಪಠಣಗಳು ಮುಂತಾದ ಅನೇಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಚರಿಸಲಾಗುತ್ತಿದೆ. ಪ್ರಸ್ತುತ ಉಭಯ ಜಗದ್ಗುರುಗಳವರ ಅಪ್ಪಣೆಯಂತೆ ಶ್ರೀಮಠದ ಶ್ರೀಶಾಂಕರ ತತ್ವಪ್ರಸಾರ ಅಭಿಯಾನ ಮತ್ತು ವೇದಾಂತಭಾರತೀ ಸಂಸ್ಥೆಗಳು ಶ್ರೀಶಂಕರಾಚಾರ್ಯರು ರಚಿಸಿದ ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾ ಸ್ತೋತ್ರ ಮತ್ತು ಶ್ರೀಲಕ್ಷ್ಮೀನೃಸಿಂಹ ಕರಾವಲಂಬ ಸ್ತೋತ್ರಗಳ ವಿಶೇಷ ಅಭಿಯಾನವನ್ನು ಕೈಗೊಂಡಿದ್ದು, ಇದರ ಮಹಾಸಮರ್ಪಣೆಯನ್ನು ನಾಳೆ (ಶನಿವಾರ) ಶೃಂಗೇರಿ ಕ್ಷೇತ್ರದಲ್ಲಿ ಶ್ರೀಮಠದಲ್ಲಿ ಆಯೋಜಿಸಲಾಗಿದೆ

20 ಎಕ್ರೆ ಪ್ರದೇಶದಲ್ಲಿ ನಡೆಯುವ ಸಮಾರಂಭ: ಶ್ರೀಮಠದ ನರಸಿಂಹವನದ ಸುಮಾರು 20 ಎಕರೆಯ ಶ್ರೀಭಾರತೀತೀರ್ಥ ನಗರದಲ್ಲಿ ನೆರವೇರಲಿಲಿರುವ ಸಮಾರಂಭಕ್ಕೆ ಪೂರ್ವಭಾವಿಯಾಗಿ ಶ್ರೀಮಠದಿಂದ ಪೂರ್ವಸಿದ್ಧತೆಗಳ ಕಾರ್ಯಗಳು ಭರದಿಂದ ನೆರವೇರುತ್ತಿದೆ.ಐತಿಹಾಸಿಕ ಘಟನೆಯನ್ನು ಸಾಕ್ಷಾತ್ಕರಿಸುವ ಮಹಾಸಮರ್ಪಣೆ ಕಾರ್ಯಕ್ರಮಕ್ಕೆ ನಾನಾಪ್ರಾಂತ್ಯಗಳಿಂದ ಸುಮಾರು 50  ಸಾವಿರ ಆಸ್ತಿಕ ಬಾಂಧವರು ಆಗಮಿಸಲಿದ್ದಾರೆ.ಸಮಾರಂಭಕ್ಕಾಗಿ 140/800 ಉದ್ದದ ಬೃಹತ್ ವೇದಿಕೆ,ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ನೋಡುಗರ ಗಮನ ಸೆಳೆಯುತ್ತಿದೆ.ಚಿಕ್ಕಮಗಳೂರು ಜಿಲ್ಲೆಯ ಸುಮಾರು 50ಸಾವಿರ ಜನರು ಬೃಹತ್ ವೇದಿಕೆಯಲ್ಲಿ ಏಕಕಾಲಕ್ಕೆ ಸ್ತೋತ್ರ ತ್ರಿವೇಣಿಯ ಮೂರು ಶ್ಲೋಕಗಳನ್ನು ಪಠಿಸಿ ಜಗನ್ಮಾತೆ ಶಾರದೆ ಹಾಗೂ ಜಗದ್ಗುರುಗಳಿಗೆ ಸಮರ್ಪಣೆ ಮಾಡಲಿದ್ದಾರೆ.

ನಕ್ಸಲ್‌ ಚಳುವಳಿ ಹುಟ್ಟಿದ್ದು, ಅಂತ್ಯ ಕಂಡಿದ್ದು ಚಿಕ್ಕಮಗಳೂರಿನಲ್ಲೇ!

ಡಿ ಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿ: ಭಕ್ತರಿಗೆ ಶೃಂಗೇರಿಗೆ ಬರಲು ಸುಮಾರು 700ಕ್ಕೂ ಹೆಚ್ಚು ಸರಕಾರಿ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ.ಊಟದ ವ್ಯವಸ್ಥೆಗಾಗಿ 300ಕ್ಕೂ ಹೆಚ್ಚು ಕೌಂಟರ್,ಕುಡಿಯುವ ನೀರಿನ ವ್ಯವಸ್ಥೆ,ತುರ್ತುಚಿಕಿತ್ಸಾ ಘಟಕ,ಮಾಹಿತಿ ಕೇಂದ್ರದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.ಸುಮಾರು ಮೂರು ಸಾವಿರಕ್ಕೂ ಸ್ವಯಂಸೇವಕರ ತಂಡ ಸೇವಾಕಾರ್ಯಕ್ಕೆ ಸಜ್ಜಾಗಿ ನಿಂತಿದ್ದಾರೆ.ಸುಮಾರು 300ಕ್ಕೂ ಹೆಚ್ಚು ಪೋಲಿಸ್ ಹಾಗೂ ಗೃಹರಕ್ಷಕ ತಂಡ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.ಎಡೆತೊರೆ,ಶೃಂಗೇರಿ ಶಿವಗಂಗಾಮಠ,ನೆಲೆಮಾವು,ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮ,ಆವನಿ ಶೃಂಗೇರಿಮಠ,ಕರ್ಕಿ,ಹಳದೀಪುರ,ಆನೆಗುಂದಿ ಮಠಗಳ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ.ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌವಣ್,ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ,ಶಾಸಕ ಟಿ.ಡಿ.ರಾಜೇಗೌಡ,ಜಿಲ್ಲಾಧಿಕಾರಿ,ಎಸ್ಪಿ ಮುಂತಾದ ಗಣ್ಯರು ಭಾಗಿಯಾಗಲಿದ್ದಾರೆ.

click me!