ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಲಕ್ಷಾಂತರ ರು ವಂಚನೆ

Kannadaprabha News   | Asianet News
Published : Feb 22, 2021, 03:41 PM ISTUpdated : Feb 22, 2021, 03:42 PM IST
ಕೌನ್ ಬನೇಗಾ ಕರೋಡ್ ಪತಿ ಹೆಸರಲ್ಲಿ ಲಕ್ಷಾಂತರ ರು ವಂಚನೆ

ಸಾರಾಂಶ

ವ್ಯಕ್ತಿಯೋರ್ವರು ಲಕ್ಷಾಂತರ ರು ಕಳೆದುಕೊಂಡಿದ್ದಾರೆ. ಕೌನ್‌ ಬನೆಗಾ ಕರೋಡ್ ಪತಿ ಹೆಸರಿನಲ್ಲಿ ನಡೆದ ವಂಚನೆಯಲ್ಲಿ ತೀರ್ಥಹಳ್ಳಿಯ ವ್ಯಕ್ತಿ ಹಣ ಕಳೆದುಕೊಂಡಿದ್ದಾರೆ.

ಶಿವಮೊಗ್ಗ (ಫೆ.22): ಕೌನ್ ಬನೇಗಾ  ಕರೋಡ್ ಪತಿಯಿಂದ ಲಕ್ಕಿ ಡ್ರಾ ಬಂದಿದೆ ಎಂದು ನಂಬಿಸಿ 1.43 ಲಕ್ಷಗಳನ್ನ ದೋಚಿರುವ ಘಟನೆ  ನಡೆದಿದೆ.  

ತೀರ್ಥಹಳ್ಳಿಯ ಅನಂತ್ ಕುಮಾರ್ ಎಂಬುವರಿಗೆ ಅಪರಿಚಿತ ವ್ಯಕ್ತಿಯೋರ್ವರು ಕೆಬಿಸಿಯಿಂದ ನಿಮಗೆ ಲಕ್ಕಿ ಡ್ರಾ ಬಂದಿದೆ. 5 ಲಕ್ಷ ರು ಬಂಪರ್ ಬಹುಮಾನ ದೊರೆತಿದೆ. ಈ ಹಣ ಪಡೆಯಲು ಕೆಲವು ಚಾರ್ಜಸ್ ಕಟ್ಟಬೇಕೆಂದು ಕರೆ ಮಾಡಿದ್ದಾರೆ. 

ಉದ್ಯಮಿಗಳಿಂದ ಸ್ನೇಹಿತೆ ಮನೆಗೇ ಕನ್ನ: ಇಬ್ಬರ ಬಂಧನ .

ಇವರನ್ನ ನಂಬಿದ ಅನಂತ್ ಕುಮಾರ್ ಅವರು ಹಂತ ಹಂತವಾಗಿ ಇವರಿಗೆ ಆನ್‌ಲೈನ್ನಲ್ಲಿ ಹಣ ನೀಡಿದ್ದಾರೆ. 

ಕೊನೆಗೆ ಮೋಸ ಹೋಗಿರುವುದು ಅವರಿಗೆ ತಿಳಿದ ತಕ್ಷಣ  ಅನಂತ್‌ ಕುಮಾರ್‌ ಅವರು ಸಿಇಎನ್‌ ಪೊಲೀಸ್ ಠಾನೆಗೆ ದೂರು ನೀಡಿದ್ದಾರೆ. 

PREV
click me!

Recommended Stories

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಬಸ್ ಮಂಡ್ಯ ಬಳಿ ಪಲ್ಟಿ, 8 ಮಂದಿಗೆ ಗಾಯ