ಶಿವಮೊಗ್ಗದಲ್ಲೊಬ್ಬ ‘ಪಾಗಲ್‌ ಪ್ರೇಮಿ’ : ಕೋವಿಡ್‌ಗೆ ಹೆದರಿ ಭತ್ತದ ಗದ್ದೇಲಿ ಅಡಗಿದ

By Kannadaprabha News  |  First Published May 9, 2021, 7:31 AM IST
  • ಮಾತ್ರೆ ಸೇವಿಸಿ ಅಸ್ವಸ್ಥನಾಗಿ ಆಸ್ಪತ್ರೆ ಸೇರಿದ್ದ ಪಾಗಲ್ ಪ್ರೇಮಿ
  • ಕೋವಿಡ್ ಪಾಸಿಟಿವ್ ರಿಸಲ್ಟ್ ಬರುತ್ತಲೇ ಆಸ್ಪತ್ರೆಯಿಂದ ಎಸ್ಕೇಪ್
  • ಭತ್ತದ ಗದ್ದೆಯಲ್ಲಿ ಅವಿತಿದ್ದವ ಕೊನೆಗೂ ಪತ್ತೆ

ಶಿವಮೊಗ್ಗ (ಮೇ.09): ಕೋವಿಡ್‌ ರೋಗ ಲಕ್ಷಣಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ಖಾಸಗಿ ಆಸ್ಪತ್ರೆಯಿಂದ ತಪ್ಪಿಸಿಕೊಂಡು, ಸಮೀಪದ ಗದ್ದೆಯಲ್ಲಿ ಅಡಗಿ ಕುಳಿತ ಘಟನೆ ಶನಿವಾರ ನಡೆದಿದೆ. ಬಳಿಕ ಈ ವ್ಯಕ್ತಿಯನ್ನು ಗದ್ದೆಯಿಂದ ಆಸ್ಪತ್ರೆ ಸಿಬ್ಬಂದಿ ಮನವೊಲಿಸಿ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಗಾಂಧಿ ಬಜಾರ್‌ನ ಈ ವ್ಯಕ್ತಿ ತನ್ನ ಪ್ರೇಮದ ವಿಚಾರವಾಗಿ ಮನೆಯಲ್ಲಿ ಯಾವುದೋ ಮಾತ್ರೆಗಳನ್ನು ತಿಂದು ಅಸ್ವಸ್ಥಗೊಂಡಿದ್ದ. ತಕ್ಷಣ ಮನೆಯವರು ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಿದ್ದರು. ಈತನಿಗೆ ಚಿಕಿತ್ಸೆ ನೀಡುತ್ತಲೇ ಈತನ ರಕ್ತದ ಪರೀಕ್ಷೆ ಕೂಡ ನಡೆಸಲಾಗಿದೆ. ಈ ವೇಳೆಯಲ್ಲಿ ಈತನಿಗೆ ಕೋವಿಡ್‌ ಲಕ್ಷಣಗಳ ಸೂಚನೆ ಕಂಡುಬಂತು.

Tap to resize

Latest Videos

ಕೊರೋನಾ ಕಾಟ: ಬೆಡ್‌ಗಳ ಕೊರತೆಯಾಗುತ್ತಿದೆ, ಹುಷಾರಾಗಿ ಮನೆಯಲ್ಲೇ ಇರಿ!

ಕೋವಿಡ್‌ ತಗುಲಿದ ವಿಷಯ ತಿಳಿಯುತ್ತಲೇ ತನಗೆ ಅಳವಡಿಸಿದ್ದ ಗ್ಲೂಕೋಸ್‌ ಬಾಟಲಿಗಳನ್ನು ಕಿತ್ತೆಸೆದು ಆಸ್ಪತ್ರೆಯಿಂದ ಓಡಿಹೋಗಿ ಸಮೀಪದ ಭತ್ತದ ಗದ್ದೆಯಲ್ಲಿ ಅಡಗಿ ಕುಳಿತಿದ್ದ. ಆಸ್ಪತ್ರೆ ಸಿಬ್ಬಂದಿ ಈ ವ್ಯಕ್ತಿಯನ್ನು ಪತ್ತೆ ಹಚ್ಚಿ ವಾಪಸ್ಸು ಕರೆ ತಂದರು. ಬಳಿಕ ಆಸ್ಪತ್ರೆಯ ವೈದ್ಯರು ಕೋವಿಡ್‌ ಲಕ್ಷಣಗಳು ಇರುವುದರಿಂದ ಮೆಗ್ಗಾನ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!