ಬಿಜೆಪಿ ಸರ್ಕಾರ ರಚನೆಯಾಗಿ ಬಿ. ಎಸ್. ಯಡಿಯೂರಪ್ಪ ಅವರು ಸಿಎಂ ಆಗಲಿ ಎಂದು ಶಿವಮೊಗ್ಗ ಬಿಜೆಪಿ ಕಾರ್ಯಕರ್ತರು ಪ್ರಾರ್ಥನೆ ನಡೆಸಿದ್ದಾರೆ. ತಾಲೂಕಿನ ಕಾಳೇನಹಳ್ಳಿಯ ಶಿವಯೋಗ ಮಂದಿರದಲ್ಲಿ ಲಿಂ.ರುದ್ರಮುನಿ ಮಹಾಸ್ವಾಮಿಗಳ ಗದ್ದುಗೆ ಬಳಿ ಗುರುವಾರ ರುದ್ರಾಭಿಷೇಕ ಜಪ ಮತ್ತಿತರ ಪೂಜಾ ಕಾರ್ಯಕ್ರಮ ನಡೆಯಿತು.
ಶಿವಮೊಗ್ಗ(ಜು.26): ಸಮಸ್ತ ಸಂಕಷ್ಟಗಳು ಪರಿಹಾರವಾಗಿ ಕ್ಷೇತ್ರದ ಶಾಸಕ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಳ್ಳುವಂತೆ ಪ್ರಾರ್ಥಿಸಿ ತಾಲೂಕಿನ ಕಾಳೇನಹಳ್ಳಿಯ ಶಿವಯೋಗ ಮಂದಿರದಲ್ಲಿನ ಲಿಂ.ರುದ್ರಮುನಿ ಮಹಾಸ್ವಾಮಿಗಳ ಗದ್ದುಗೆ ಬಳಿ ಗುರುವಾರ ರುದ್ರಾಭಿಷೇಕ ಜಪ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಮೃತ್ಯುಂಜಯ ಜಪ :
ತಾಲೂಕಿನ ಕಾಳೇನಹಳ್ಳಿ ಶಿವಯೋಗ ಮಂದಿರದಲ್ಲಿ ಗುರುವಾರ ಪೀಠಾಧಿಪತಿ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳ ನೇತೃತ್ವದಲ್ಲಿ ಯಡಿಯೂರಪ್ಪ ಅವರ ಸ್ಥಳೀಯ ಅಭಿಮಾನಿಗಳು, ಆಪ್ತರು ಹಿರಿಯ ಲಿಂ.ರುದ್ರಮುನಿ ಶ್ರೀಗಳ ಗದ್ದುಗೆ ಬಳಿ ರುದ್ರಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಪೀಠಾಧ್ಯಕ್ಷ ಶ್ರೀ ರೇವಣಸಿದ್ಧ ಮಹಾಸ್ವಾಮಿಗಳು ಮೃತ್ಯುಂಜಯ ಜಪ ನಡೆಸಿದರು.
BSYಗೆ ಮತ್ತೆ ಸಿಎಂ ಪಟ್ಟ : ಶಿವಮೊಗ್ಗದಲ್ಲಿ ವಿಶೇಷ ಪೂಜೆ
ಶ್ರೀಗಳು ಮಾತನಾಡಿ, 1983 ರಲ್ಲಿ ಪ್ರಥಮ ಬಾರಿಗೆ ಶಿಕಾರಿಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಯಡಿಯೂರಪ್ಪ ಅವರು ಹಿರಿಯ ಶ್ರೀಗಳಿಂದ ಶಿರಕ್ಷೆ, ಆಶೀರ್ವಾದವನ್ನು ಖುದ್ದು ಪಡೆದು, 18 ಸಾವಿರ ಮತಗಳ ಅಂತರದ ಮೂಲಕ ಜಯಸಾಧಿಸಿ ಕ್ಷೇತ್ರದ ಪರಮ ಭಕ್ತರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ರುದ್ರಾಭಿಷೇಕ ಪೂಜೆ:
ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ತೊಟ್ಟು ಪೂರ್ಣಗೊಳಿಸಿದ ಯಡಿಯೂರಪ್ಪ ಅವರಿಗೆ ಹಿರಿಯ ಶ್ರೀಗಳ ಆಶೀರ್ವಾದ ಸದಾ ಕಾಲ ಶ್ರೀರಕ್ಷೆಯಾಗಿದೆ. ಯಡಿಯೂರಪ್ಪ ಅವರಿಗೆ ಎದುರಾಗಿರುವ ಸಂಕಷ್ಟಗಳು ಶೀಘ್ರದಲ್ಲಿಯೇ ಪರಿಹಾರವಾಗಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವುದು ಖಚಿತ. ಈ ದಿಸೆಯಲ್ಲಿ ಹಿರಿಯ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಜಪ ನಡೆಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪಂ.ರೇಣುಕಾಚಾರ್ಯ, ಯಡಿಯೂರಪ್ಪ ಅವರ ಆಪ್ತ ಹಾಗೂ ರಾ.ಸ್ವಂ.ಸೇ. ಸಂಘದ ಹಿರಿಯ ಕಾರ್ಯಕರ್ತ ಸಚ್ಚಿದಾನಂದ ಮಠದ್, ಸಿದ್ದನಗೌಡ ಮರ್ಕಳ್ಳಿ, ಕೆ.ಜಿ. ರುದ್ರಪ್ಪಯ್ಯ, ಸತೀಶ್, ವಿಂ.ಹಿ.ಪ. ಉಪಾಧ್ಯಕ್ಷ ಪ್ರಕಾಶ್ ಜಿನ್ನು ಉಪಸ್ಥಿತರಿದ್ದರು.