ಸಿಎಂಗಳ ತವರೂರಲ್ಲಿ 10 ವರ್ಷಗಳಿಂದ ರಸ್ತೆ ಡಾಂಬರು ನೋಡಿಲ್ಲ. ಗುಂಡಿಗಳಿಂದ ತುಂಬಿಹೋಗಿರುವ ರಸ್ತೆಯಲ್ಲಿ ಬಸ್‌ಗಳೂ ಓಡಾಡುವುದಿಲ್ಲ. ದುರಸ್ತಿ ಭಾಗ್ಯವನ್ನೇ ಕಾಣದ ರಸ್ತೆಯಿಂದಾಗಿ ಬಸ್‌ಗಳೂ ಒಡಾಡದೆ ಜನ ಓಡಾಡುವುದಕ್ಕೆ ಸಮಸ್ಯೆಯಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆಗಳಲ್ಲಿ ಓಡಾಡುವುದೇ ಸವಾಲು.
ಶಿವಮೊಗ್ಗ(ಆ.22): ಸೊರಬ ತಾಲೂಕಿನ ಜೋಗಳ್ಳಿ, ಎಲಿವಾಳ, ಬೆಣ್ಣಿಗೆರೆ ಮಾರ್ಗದ ಮೂಲಕ ಚಿಕ್ಕೇರಿಗೆ ತೆರಳುವ ಬಸ್‌ಗಳು ರಸ್ತೆ ಸರಿ ಇಲ್ಲ ಎಂಬ ಕಾರಣಕ್ಕೆ ಸಂಚರಿಸುತ್ತಿಲ್ಲ. ಸತತ 10 ವರ್ಷಗಳಿಂದಲೂ ದುರಸ್ಥಿ ಕಾಣದ ಈ ರಸ್ತೆ ಬರೀ ಗುಂಡಿಗಳಿಂದ ತುಂಬಿಕೊಂಡಿದೆ.
ದ್ವಿಚಕ್ರ ವಾಹನ ಸವಾರರು ವಾಹನ ನಡೆಸಲು ಹರಸಾಹಸ ಪಡಬೇಕಿದೆ. ಈ ಮಾರ್ಗದಲ್ಲಿ ಬಸ್ ಚಲಾಯಿಸುವುದು ಸಾದ್ಯವೇ ಇಲ್ಲ ಎಂದು ಬಸ್ ಚಾಲಕ, ನಿರ್ವಾಹಕರು ಕೈಚೆಲ್ಲಿದ್ದಾರೆ. ಪ್ರಸ್ತುತ ಬಸ್ ಸಂಪರ್ಕವಿಲ್ಲದೆ ನೂರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡಚಣೆಯಾಗಿದೆ.
ಶಿವಮೊಗ್ಗ: ನೆರೆ ಪರಿಹಾರ, ಪುನರ್ವಸತಿ ಕಾರ್ಯ ಚುರುಕು
ರೈತಾಪಿ ವರ್ಗದವರು ಇಲ್ಲಿ ಹೆಚ್ಚಾಗಿದ್ದು, ಅವರುಗಳಿಗೆ ದಿನನಿತ್ಯದ ಅಗತ್ಯ ಸಾಮಾನು ಸರಂಜಾಮು ತರಲು ಹಾಗೂ ಕೃಷಿ ವ್ಯವಹಾರಗಳಿಗೆ ತೀವ್ರ ತೊಂದರೆಯಾಗಿದೆ. ಕ್ಷೇತ್ರದ ಶಾಸಕ ಕುಮಾರ ಬಂಗಾರಪ್ಪ ಒಮ್ಮೆ ಈ ಮಾರ್ಗದಲ್ಲಿ ಬಂದು ಹೋಗಲಿ. ಇಲ್ಲಿನ ಸ್ಥಿತಿ ಗಮನಿಸಲಿ ಎಂದು ಗ್ರಾಮಸ್ಥರು ವಿನಂತಿಸಿದ್ದಾರೆ.
shivamogga bad road in soraba puts villagers into hardship