ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ 111 ಅಡಿ ಪ್ರತಿಮೆ ನಿರ್ಮಾಣ

By Kannadaprabha News  |  First Published Jan 25, 2021, 9:04 AM IST

ಬೆಂಗಳೂರಿನ ಮಾಗಡಿಯಲ್ಲಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಸಿದ್ದಲಿಂಗ ಶ್ರೀಗಳು ಗುದ್ದಲಿಪೂಜೆಯನ್ನು ನೆರವೇರಿಸಿದ್ದಾರೆ. 


ಮಾಗಡಿ (ಜ.25):  ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ನೆಲೆಯೂರಿದ್ದ ಸಿದ್ಧಗಂಗಾ ಮಠದ ಹಿಂದಿನ ಮಠಾಧೀಶರಾಗಿದ್ದ ಲಿಂಗೈಕ್ಯ ಡಾ.ಶಿವಕುಮಾರ್‌ ಸ್ವಾಮೀಜಿ ಅವರ ಜನ್ಮಸ್ಥಳವಾದ ಮಾಗಡಿ ಸಮೀಪದ ವೀರಾಪುರದಲ್ಲಿ ಶ್ರೀಗಳ 111 ಅಡಿ ವಿಗ್ರಹ ನಿರ್ಮಾಣ ಕಾಮಗಾರಿಗೆ ಸಿದ್ಧಗಂಗಾಮಠದ ಸಿದ್ಧಲಿಂಗ ಸ್ವಾಮೀಜಿ ಅವರು   ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ.ಶಿವಕುಮಾರ ಸ್ವಾಮೀಜಿ ಅವರು 111 ವರ್ಷ ಜೀವಿಸಿದ್ದರು ಎಂಬುದರ ಸಂಕೇತವಾಗಿ ಸುಂದರವಾದ ಪರಿಸರದಲ್ಲಿ 111 ಅಡಿ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ ಎಂದು ವಿವರಿಸಿದರು.

Tap to resize

Latest Videos

ತುಮಕೂರು: ಗದ್ದುಗೆಯಲ್ಲಿ ಶ್ರೀಗಳ 50 ಕೆಜಿಯ ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ...

ಕೆಆರ್‌ಐಡಿಎಲ್‌ ನಿಗಮ ಅಧ್ಯಕ್ಷ ಎಂ.ರುದ್ರೇಶ್‌ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಸಲಹೆ, ನೇತೃತ್ವದಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು ಇನ್ನೆರಡು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಯಲಿದೆ. ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಮುಖ್ಯಮಂತ್ರಿಗಳು .80 ಕೋಟಿ ಘೋಷಣೆ ಮಾಡಿದ್ದಾರೆ. ಇದಲ್ಲದೆ .25 ಕೋಟಿ ಬಿಡುಗಡೆಯಾಗಿದ್ದು ಒಟ್ಟು .105 ಕೋಟಿ ರು. ನಿರ್ಮಾಣವಾಗಲಿದೆ. ಹಂತ ಹಂತವಾಗಿ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಹಣ ಬಿಡುಗಡೆಗೆ ಸರ್ಕಾರಿಂದ ಯಾವುದೆ ತೊಂದರೆಯಿಲ್ಲ ಎಂದರು.

click me!