ಹಾಸನ: ನಿಂತಲ್ಲೆ ನಿಂತ ವಾಹನಗಳು, ಊಟ ತಿಂಡಿಗೂ ಪರದಾಟ, ಶಿರಾಡಿ ಘಾಟ್ ಸಂಚಾರ ಬಂದ್ ಆದೇಶ ವಾಪಸ್‌

By Girish Goudar  |  First Published Jul 19, 2024, 6:03 PM IST

ಮಂಗಳೂರು ಬೆಂಗಳೂರು ನಡುವೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧದಿಂದ ದೊಡ್ಡ ಸಮಸ್ಯೆಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿರ್ಬಂಧಿತ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ 


ಹಾಸನ(ಜು.19):  ಹಾಸನ ಜಿಲ್ಲೆಯ ಶಿರಾಡಿ ಘಾಟ್ ಸಂಚಾರ ಬಂದ್ ಆದೇಶವನ್ನ ಜಿಲ್ಲಾಡಳಿತ ಹಿಂಪಡೆದಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನಿರ್ಬಂಧಿತ ನಿಯಮಗಳಡಿ ಸಂಚಾರಕ್ಕೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಲಾಗಿದೆ. 

ಮಂಗಳೂರು ಬೆಂಗಳೂರು ನಡುವೆ ವಾಹನ ಸಂಚಾರ ಸಂಪೂರ್ಣ ನಿರ್ಬಂಧದಿಂದ ದೊಡ್ಡ ಸಮಸ್ಯೆಯಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿರ್ಬಂಧಿತ ಸಂಚಾರಕ್ಕೆ ಅವಕಾಶ ನೀಡಿ ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಅವರು ಆದೇಶ ಹೊರಡಿಸಿದ್ದಾರೆ. 

Latest Videos

undefined

ಬೆಂಗಳೂರು-ಮಂಗಳೂರು ಸಂಪರ್ಕ ಕಡಿತ, ಪರ್ಯಾಯವಾಗಿರುವ ಈ ಮಾರ್ಗಗಳ ಬಗ್ಗೆ ನಿಮಗೆ ಗೊತ್ತೇ?

ನಿನ್ನೆ ರಾತ್ರಿಯಿಂದ ವಾಹನ ಸಂಚಾರ ನಿರ್ಬಂಧ ಹಿನ್ನೆಲೆಯಲ್ಲಿ ರಸ್ತೆ ಮಧ್ಯೆ ನೂರಾರು ವಾಹನಗಳು ನಿಂತಿವೆ. ನಡು ರಸ್ತೆಯಲ್ಲಿ ನಿಂತು ದೊಡ್ಡ ದೊಡ್ಡ ಟ್ರಕ್‌ಗಳ ಚಾಲಕರು ಪರದಾಡುತ್ತಿದ್ದಾರೆ. ಊಟ ತಿಂಡಿ, ಕುಡಿಯುವ ನೀರಿಗೂ ಪರದಾಟ ನಡೆಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನೂರಾರು ವಾಹನಗಳು ನಿಂತಿವೆ. 

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಹಾಗೂ ಕೊಡಗು ಜಿಲ್ಲೆಯ ಸಂಪಾಜೆ ಮಾರ್ಗದಲ್ಲೂ ಸಂಚಾರಕ್ಕೆ ಸಮಸ್ಯೆಯಾಗಿದೆ. ಎಲ್ಲಾ ಮಾರ್ಗದಲ್ಲೂ ಮಳೆ ಹೆಚ್ಚಾಗಿರೊ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮಾರ್ಗದ ವಾಹನಗಳು ಎಲ್ಲೂ ಹೋಗಲಾಗದೆ ಸಂಕಷ್ಟ ಎದುರಿಸುತ್ತಿವೆ. 

click me!