ಶಹಾಪುರ ಕುರಿ ಸಂತೆಯಲ್ಲಿ ಮಾರಾಟಕ್ಕೆ ತರುವ ಈ ಕುರಿ ಹಾಗೂ ಟಗರು ಬಹಳಷ್ಟು ರುಚಿಕರವಾಗಿರುತ್ತದೆ. ಇಂತಹ ರುಚಿಕರವಾದ ಈ ಕುರಿ ಹಾಗೂ ಟಗರುಗಳ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಕಣ್ಣಿಗೆ ಬಿದ್ದಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷವಾಗಿ ಮತದಾರರ ಮನ ಸೆಳೆಯಲು ಕೆಲವು ಅಭ್ಯರ್ಥಿಗಳು ಬಾಡೂಟ ವ್ಯವಸ್ಥೆ ಮಾಡಿಸಲಾಗುತ್ತದೆ. ಬಾಡೂಟಕ್ಕೆ ಈ ಶಹಾಪುರದ ಕುರಿಗಳನ್ನು ಅಭ್ಯರ್ಥಿಗಳ ಬೆಂಬಲಿಗರ ಗುಟ್ಟಾಗಿಯೇ ಖರೀದಿ ಭರಾಟೆ ಜೋರಾಗಿಯೇ ಮಾಡುತ್ತಿದ್ದಾರೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ(ಏ.22): ಕರುನಾಡಲ್ಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಮತದಾರರ ಮನ ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾನಾ ಕಸರತ್ತು ಆರಂಭಿಸಿದ್ದಾರೆ. ಅದರಲ್ಲೂ ಜನರಿಗೆ ಅತೀ ಪ್ರಿಯವಾದ ಆಹಾರವಾದ ಬಾಡೂಟ, ಅಂತಹ ಬಾಡೂಟದ ವ್ಯವಸ್ಥೆಗೆ ಅಭ್ಯರ್ಥಿಗಳ ಬೆಂಬಲಿಗರು ಕುರು ಹಾಗೂ ಟಗರುಗಳ ಖರೀದಿಗೆ ಮುಂದಾಗಿದ್ದಾರೆ. ಶಹಾಪುರ ಕುರಿ ಸಂತೆಯಲ್ಲಿ ಈಗ ಕುರಿ ಹಾಗೂ ಟಗರಿಗೆ ಭಾರಿ ಡಿಮ್ಯಾಂಡ್ ಶುರುವಾಗಿದೆ.
undefined
ಶಹಾಪುರ ಸಂತೆಯಲ್ಲಿ ಕುರಿ ಖರೀದಿ ಜೋರು..!
ಯಾದಗಿರಿ ಜಿಲ್ಲೆಯ ಶಹಾಪುರ ನಗರದಲ್ಲಿರುವ ಕುರಿ ಸಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿಯೇ ಅತ್ಯಂತ ಪ್ರಸಿದ್ಧ ಮಾರುಕಟ್ಟೆಯಾಗಿದೆ. ಸುರಪುರ, ಶಹಾಪುರ, ಹುಣಸಗಿ ಸೇರಿದಂತೆ ವಿವಿಧ ತಾಲೂಕುಗಳಿಂದ ಶಹಾಪುರ ಕುರಿ ಸಂತೆಗೆ ವಿವಿಧ ತಳಿಯ ಕುರಿ ಹಾಗೂ ಟಗರುಗಳನ್ನು ಮಾರಾಟಕ್ಕೆ ತರಲಾಗುತ್ತದೆ. ಶಹಾಪುರ ಕುರಿ ಸಂತೆಯಲ್ಲಿ ಮಾರಾಟಕ್ಕೆ ತರುವ ಈ ಕುರಿ ಹಾಗೂ ಟಗರು ಬಹಳಷ್ಟು ರುಚಿಕರವಾಗಿರುತ್ತದೆ. ಇಂತಹ ರುಚಿಕರವಾದ ಈ ಕುರಿ ಹಾಗೂ ಟಗರುಗಳ ಮೇಲೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಕಣ್ಣಿಗೆ ಬಿದ್ದಿದೆ. ಚುನಾವಣೆ ಸಂದರ್ಭದಲ್ಲಿ ವಿಶೇಷವಾಗಿ ಮತದಾರರ ಮನ ಸೆಳೆಯಲು ಕೆಲವು ಅಭ್ಯರ್ಥಿಗಳು ಬಾಡೂಟ ವ್ಯವಸ್ಥೆ ಮಾಡಿಸಲಾಗುತ್ತದೆ. ಬಾಡೂಟಕ್ಕೆ ಈ ಶಹಾಪುರದ ಕುರಿಗಳನ್ನು ಅಭ್ಯರ್ಥಿಗಳ ಬೆಂಬಲಿಗರ ಗುಟ್ಟಾಗಿಯೇ ಖರೀದಿ ಭರಾಟೆ ಜೋರಾಗಿಯೇ ಮಾಡುತ್ತಿದ್ದಾರೆ.
ಮತದಾರರ ಬಳಿ ಭಿಕ್ಷೆ ಬೇಡಿ 10 ಸಾವಿರ ಠೇವಣಿ ಮೊತ್ತವನ್ನು ನಾಣ್ಯದಲ್ಲಿ ನೀಡಿದ ಅಭ್ಯರ್ಥಿ!
ಶಹಾಪುರ ಕುರಿ-ಟಗರಿಗೆ ಭಾರಿ ಡಿಮ್ಯಾಂಡ್..!
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಿಯಲ್ ಫೈಟ್ ಈಗ ಶುರುವಾಗಿದೆ. ಅಭ್ಯರ್ಥಿಗಳು ನ್ಯಾಮಿನೇಷನ್ ಮಾಡಿದ್ದಾರೆ. ಅಭ್ಯರ್ಥಿಗಳು ಮತದಾರರ ಮನವೋಲಿಕೆಗೆ ಮುಂದಾಗಿದ್ದಾರೆ. ಯಾವುದೇ ಚುನಾವಣೆ ನಡೆದ್ರೂ ಕೂಡ ಮಾಂಸ ಹಾಗೂ ಎಣ್ಣೆ (ಮದ್ಯ) ದ ಏಟು ಜೋರಾಗಿಯೇ ನಡೆದಿರುತ್ತದೆ. ಆದ್ರೆ ಈ ಬಾರಿ ಚುನಾವಣಾ ಆಯೋಗವು ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆಗೆ ಮುಂದಾಗಿದೆ. ಈ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದ ನಡುವೆ ಅಭ್ಯರ್ಥಿ ಹಿಂಬಾಲಕರು ಮತದಾರರಿಗೆ ಬಾಡೂಟವನ್ನು ಸವಿಸಲು ಪೊಲಿಟಿಕಲ್ ಪಾರ್ಟಿಗಳು ಹಣದ ಹೊಳೆಯನ್ನು ಕುರಿ ಹಾಗೂ ಮೇಕೆಗಳನ್ನು ಖರೀದಿಸುತ್ತಿದ್ದಾರೆ. ಶಹಾಪುರ ನಗರದಲ್ಲಿರುವ ಈ ಕುರಿ ಸಂತೆಯು ಪ್ರತಿ ಶುಕ್ರವಾರ ನಡೆಯುತ್ತದೆ. ಈಗ ಈ ಶಹಾಪುರದ ಕುರಿ ಹಾಗೂ ಟಗರಿಗೆ ಭಾರಿ ಡಿಮ್ಯಾಂಡ್ ಬಂದಿದೆ. ರೈತರು ಹಾಗೂ ಕುರಿಗಾಹಿಗಳಿಗೆ ಬಂಪರ್ ಬೆಲೆ ಸೀಗುತ್ತಿದೆ. ಕುರಿಗಾಹಿಗಳ ಬಳಿ ಖರೀದಿ ಮಾಡಲು ರಾಜಕೀಯ ಪಕ್ಷಗಳ ಮುಖಂಡರು ಯಾವುದೆ ಚೌಕಾಸಿ ಮಾಡುವುದೇ ಇಲ್ಲ. ಹೇಳಿದಷ್ಟ ಬೆಲೆಗೆ ಖರೀದಿ ಮಾಡುತ್ತಾರೆ ಎಂದು ಕೆಲವು ಕುರಿಗಾಹಿ ಹೇಳಿದರು.
ಚುನಾವಣೆಯಿಂದ ಸದ್ಯ 4-5 ಕೋಟಿ ರೂ. ಕುರಿ ಖರೀದಿ ಹೆಚ್ಚಳ
ಶಹಾಪುರ ಕುರಿ ಸಂತೆಯಲ್ಲಿ ಖರೀದಿಗಾರರು ಬೇರೆ ರಾಜ್ಯಗಳಿಂದ ಬರ್ತಾರೆ. ಹೈದರಾಬಾದ್, ಸೋಲಾಪುರ, ಪುಣೆ, ಮುಂಬೈ, ನಾರಾಯಣಪೇಟೆ, ಮಹಿಬೂಬು ನಗರ ಸೇರಿದಂತೆ ರಾಜ್ಯದ ಜಿಲ್ಲೆಗಳಾದ ರಾಯಚೂರು, ವಿಜಯಪುರ, ಬಾಗಲಕೋಟೆಯಿಂದ ಖರಿದಿಗಾರರು ಬರ್ತಾರೆ. ಈಗ ಚುನಾವಣೆ ಇರುವುದರಿಂದ ಕುರಿ, ಮೇಕೆ ಹಾಗೂ ಟಗರು ಖರೀದಿಗೆ ಅಭ್ಯರ್ಥಿಗಳ ಬೆಂಬಲಿಗರು ದುಬಾರಿ ದರಕ್ಕೆ ಖರೀದಿಸುತ್ತಾರೆ. ಸಾಮಾನ್ಯವಾಗಿ ಒಂದು ಟಗರು ಮರಿಗೆ 6-8 ಸಾವಿರ ರೂ. ಇರುತ್ತದೆ. ಆದ್ರೆ ಈಗ 10-14 ಸಾವಿರ ರೂ. ವರೆಗೆ ಮಾರಾಟವಾಗ್ತಿದೆ. ಕುರಿಗೆ ಸದ್ಯ 15-20 ಸಾವಿರ ರೂ. ವರೆಗೆ ಮಾರಾಟವಾಗ್ತಿದೆ. ದೊಡ್ಡ ಟಗರಿಗೆ 25-30 ಸಾವಿರ ರೂಮ ಮಾರಾಟವಾಗ್ತಿದೆ. ಇದರಿಂದ ಇನ್ನೊಂದು ತಿಂಗಳು ಕುರಿಗಾಗಿ ಹಾಗೂ ರೈತರಿಗೆ ಬಂಪರ್ ಲಾಟರಿ ಎನ್ನಬಹುದಾಗಿದೆ. ಚುನಾವಣೆಗೆ ಮುಂಚೆ ಶಹಾಪುರ ಕುರಿ ಸಂತೆಯಲ್ಲಿ ಪ್ರತಿ ವಾರ 1-2 ಕೋಟಿ ರೂ. ಮೊತ್ತದ ವಹಿವಾಟು ಆಗುತ್ತಿತ್ತು. ಈಗ ಚುನಾವಣೆ ಆರಂಭದಿಂದ ಕುರಿ, ಮೇಕೆ ಹಾಗೂ ಟಗರಿನ ಮಾರಾಟ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಸದ್ಯ ಪ್ರತಿ ವಾರ 4-5 ಕೋಟಿ ರೂ. ಮೊತ್ತದ ಕುರಿಗಳ ಮಾರಾಟ ಆಗುತ್ತಿದೆ.