ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಘಟಿಕೋತ್ಸವ: ರಾಜ್ಯಪಾಲರಿಂದ ಸ್ವಾಮೀಜಿಗೆ ಡಾಕ್ಟರೇಟ್ ಪದವಿ ಪ್ರದಾನ

Published : Apr 07, 2026, 04:13 PM IST
Shantamallikarjuna Swamy

ಸಾರಾಂಶ

ಥಾವರ್ ಚಂದ್ ಗೆಹ್ಲೋಟ್‌ರವರಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್‌ಡಿ) ಪದವಿ ಪ್ರಮಾಣಪತ್ರ ಪಡೆದರು.

ಬೆಂಗಳೂರು (ಏ.07): ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ನಡೆದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 12 ಮತ್ತು 13ನೇ ಘಟಿಕೋತ್ಸವ ಸಮಾರಂಭದಲ್ಲಿ ಘನತೆವೆತ್ತ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್‌ರವರಿಂದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠ ಪೀಠಾಧಿಪತಿಗಳಾದ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ವಿದ್ಯಾವಾರಾಧಿ ( ಪಿಎಚ್‌ಡಿ) ಪದವಿ ಪ್ರಮಾಣಪತ್ರ ಪಡೆದರು.

ಪೂಜ್ಯರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಕುಂದೂರು ಮಠದ ಮಠಾಧೀಪತಿಗಳು ಡಾ. ಶ್ರೀ ಶರತ್ ಚಂದ್ರ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ವೇದಾಂತ ವಿಭಾಗದಲ್ಲಿ ಅಂಶುಮದಾಗಮಮ್ ಸಂಪಾದನಾತ್ಮಕ ಅಧ್ಯಯನಮ್ ಎಂಬ ವಿಷಯದಲ್ಲಿ ಹಸ್ತಪ್ರತಿ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು.

ಜೀವನದ ಸಾರ್ಥಕತೆಗೆ ಶಿಕ್ಷಣದ ಪಾತ್ರ ಮಹತ್ವದ್ದು

ಕಲಿಕೆಗೆ ಅಂತ್ಯವಿಲ್ಲ, ಅದು ನಿರಂತರವಾಗಿರುತ್ತದೆ. ಜೀವನದ ಸಾರ್ಥಕತೆಗೆ ಶಿಕ್ಷಣ ಬಹಳ ಮಹತ್ವದ ಪಾತ್ರವಹಿಸುತ್ತದೆ ಎಂದು ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹಲೋತ್ ಹೇಳಿದರು.

ನಿಮ್ಮ ಪರಿಶ್ರಮದ ಫಲವಾಗಿ ಇಂದು ನೀವು ಪದಕ ಪಡೆದಿದ್ದೀರಿ. ಜ್ಞಾನಮಂದಿರದಿಂದ ಕರ್ಮ ಕ್ಷೇತ್ರ ಪ್ರವೇಶ ಮಾಡುತ್ತೀದ್ದೀರಿ. ನಿಮ್ಮ ಕನಸು ಹಾಗೂ ಗುರಿ ದೊಡ್ಡದಿರಲಿ. ನಿರಂತರ ಶ್ರಮದಿಂದ ಗುರಿ ತಲುಪಲು ಸಾಧ್ಯ. ಶಿಕ್ಷಣ ಉದ್ಯೋಗ ಹುಡುಕಲು ಅಲ್ಲ, ಉದ್ಯೋಗ ಸೃಷ್ಟಿಯಾಗಲಿ. ನೀವು ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯ, ವಿಧೇಯತೇ ಇರಲಿ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಕ್ರಾಂತಿ ನಮ್ಮ ಜೀವನ ಶೈಲಿ ಬದಲು ಮಾಡಿದೆ. ವಿಕಸಿತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ ಎಂದು ಹೇಳಿದರು.

ಕರ್ನಾಟಕದ ಭೂಮಿ ಪರಂಪರೆ ಮತ್ತು ಜ್ಞಾನದ ಸಮೃದ್ಧಿಯಾಗಿದೆ. ಈ ನಾಡಿನಲ್ಲಿ ಅನೇಕ ಸಂತರು, ವಿದ್ವಾಂಸರು, ವಿಚಾರವಾದಿಗಳು ಜನಿಸಿ ಮಾರ್ಗದರ್ಶನ ನೀಡಿದ್ದಾರೆ. ಹಾವೇರಿ ವಿವಿ ಸ್ಥಾಪನೆಯಿಂದ ಶಿಕ್ಷಣದ ಜೊತೆಗೆ ಗ್ರಾಮೀಣ ಭಾಗದ ವಿಕಾಸವಾಗುತ್ತಿದೆ. ಬರುವ ದಿನಗಳಲ್ಲಿ ಈ ವಿವಿ ಇನ್ನಷ್ಟು ಉತ್ಕೃಷ್ಟವಾಗಿ ಬೆಳೆಯಲಿ. ಗೌರವ ಡಾಕ್ಟರೇಟ್ ಪಡೆದ ಸದಾಶಿವ ಸ್ವಾಮೀಜಿ ಹಾಗೂ ಸಾಹಿತಿ ಸತೀಶ ಕುಲಕರ್ಣಿ ಅವರು ಸಮಾಜದ ಏಳ್ಗೆಗೆ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.

PREV
Read more Articles on
click me!

Recommended Stories

ಬೆಂಗಳೂರು ಹಾಸ್ಟೆಲ್‌ನ 9ನೇ ಮಹಡಿಯಿಂದ ಜಿಗಿದು 'ಪಿಯುಸಿ ವಿದ್ಯಾರ್ಥಿ' ದಾರುಣ ಸಾವು! ರಾಂಚಿ ಮೂಲದ ಯುವಕನ ಅಂತ್ಯ!
ಚಿಕ್ಕಮಗಳೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ದರ ಏರಿಕೆ: ಡ್ರೈಫ್ರೂಟ್ಸ್‌ ಮಾತ್ರ ಕದ್ದ ಕಳ್ಳ